AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಮುಂದಿನ ಸಿನಿಮಾಕ್ಕೆ ತೆಲುಗಿನ ನಿರ್ದೇಶಕನ ಜೊತೆ ಮಾತುಕತೆ, ಯಾರದು?

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸಲಿಲ್ಲ. ಅವರ ನಟನೆಯ ‘ರಾಮಾಯಣ’ ಸಿನಿಮಾ ಮುಂದಿನ ತಿಂಗಳು ಭರ್ಜರಿ ಆಗಿ ರಿಲೀಸ್ ಆಗಲು ರೆಡಿಯಾಗಿದೆ. ಇವುಗಳ ನಡುವೆ ಯಶ್ ಅವರು ತಮ್ಮ ಮುಂದಿನ ಸಿನಿಮಾಕ್ಕೆ ತಯಾರಿ ಆರಂಭಿಸಿದ್ದು, ತೆಲುಗಿನ ನಿರ್ದೇಶಕರೊಬ್ಬರು ಯಶ್ ಅವರಿಗೆ ಕತೆ ಹೇಳಿದ್ದಾರಂತೆ. ಯಾರದು ನಿರ್ದೇಶಕ? ಕತೆ ಏನು?

ಯಶ್ ಮುಂದಿನ ಸಿನಿಮಾಕ್ಕೆ ತೆಲುಗಿನ ನಿರ್ದೇಶಕನ ಜೊತೆ ಮಾತುಕತೆ, ಯಾರದು?
Yash Hanuma Reddy
ಮಂಜುನಾಥ ಸಿ.
|

Updated on: Oct 11, 2026 | 3:53 PM

Share

ಮುಖ್ಯಾಂಶಗಳು

  • ‘ಟಾಕ್ಸಿಕ್’ ಬಳಿಕ ಹೊಸ ಸಿನಿಮಾಕ್ಕೆ ಯಶ್ ರೆಡಿ
  • ತೆಲುಗಿನ ಹೊಸ ನಿರ್ದೇಶಕನ ಜೊತೆ ಯಶ್ ಸಿನಿಮಾ
  • ಹೊಸ ಸಿನಿಮಾದ ಕತೆ ಫಿಕ್ಸ್ ಮಾಡಿದ ಯಶ್?

ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಭಾರಿ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿ ಆಗಲಿಲ್ಲವೆಂದೇ ಹೇಳಬಹುದು. ಇದೀಗ ಯಶ್ ನಟನೆಯ ಮತ್ತೊಂದು ಭಾರಿ ಬಜೆಟ್ ಸಿನಿಮಾ ‘ರಾಮಾಯಣ’ ರಿಲೀಸ್​​ಗೆ ರೆಡಿ ಆಗಿದ್ದು ಮುಂದಿನ ತಿಂಗಳು ಅಂದರೆ ನವೆಂಬರ್​​ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಇದರ ನಡುವೆ ಯಶ್ ಅವರ ನೆಕ್ಸ್ಟ್​​ ಸಿನಿಮಾಕ್ಕಾಗಿ ಈಗಾಗಲೇ ಚರ್ಚೆ ಆರಂಭವಾಗಿದ್ದು, ತೆಲುಗಿನ ನಿರ್ದೇಶಕರೊಬ್ಬರು ಯಶ್​​ಗೆ ಕತೆಯೊಂದನ್ನು ಹೇಳಿದ್ದಾರೆ ಎಂಬ ಸುದ್ದಿ ಸಣ್ಣದಾಗಿ ಹರಿದಾಡುತ್ತಿದೆ.

ಯಶ್​, ತಮ್ಮ ಸಿನಿಮಾದ ಕತೆ ಮತ್ತು ನಿರ್ದೇಶಕರನ್ನು ಬಲು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಹಿಂದೆ ಬಂದಿದ್ದ ಸುದ್ದಿಗಳ ಪ್ರಕಾರ ಭಾರತದ ಹಲವು ಚಿತ್ರರಂಗಗಳ ಹಲವಾರು ನಿರ್ದೇಶಕರುಗಳಿಂದ ಯಶ್ ಕತೆ ಕೇಳಿದ ಬಳಿಕ ಗೀತು ಮೋಹನ್​​ದಾಸ್ ಅವರೊಟ್ಟಿಗೆ ‘ಟಾಕ್ಸಿಕ್’ ಸಿನಿಮಾ ಮಾಡಲು ಮುಂದಾಗಿದ್ದರು. ಈಗಲೂ ಸಹ ಯಶ್​​ ಅವರಿಗೆ ಹಲವಾರು ನಿರ್ದೇಶಕರುಗಳು ಕತೆ ಹೇಳುತ್ತಿದ್ದಾರಂತೆ. ಹಾಗೆಯೇ ಒಬ್ಬ ನಿರ್ದೇಶಕನ ಕತೆ ಯಶ್​ ಅವರಿಗೆ ಹಿಡಿಸಿದ್ದು ಕತೆಯ ಮೇಲೆ ಚರ್ಚೆಗಳು ನಡೆಯುತ್ತಿವೆ ಎಂಬ ಸುದ್ದಿ ಹರಿದಾಡುತ್ತಿದೆ.

ತೆಲುಗಿನಲ್ಲಿ ‘ಡೇವಿಡ್ ರೆಡ್ಡಿ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿರುವ ಹನುಮ ರೆಡ್ಡಿ ಹೆಸರಿನ ನಿರ್ದೇಶಕರೊಟ್ಟಿಗೆ ಯಶ್ ಮುಂದಿನ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹನುಮ ರೆಡ್ಡಿ ‘ಡೇವಿಡ್ ರೆಡ್ಡಿ’ ಹೊರತಾಗಿ ಇನ್ಯಾವ ಸಿನಿಮಾ ಅನ್ನೂ ಸಹ ನಿರ್ದೇಶನ ಮಾಡಿಲ್ಲ. ಡೇವಿಡ್ ರೆಡ್ಡಿಯಲ್ಲಿ ಮಂಚು ಮನೋಜ್ ನಾಯಕನಾಗಿ ನಟಿಸಿದ್ದು, ಸಿನಿಮಾನಲ್ಲಿ ರಮ್ಯಾ ಕೃಷ್ಣ ಸೇರಿದಂತೆ ಇನ್ನೂ ಹಲವು ನಟ-ನಟಿಯರಿದ್ದಾರೆ. ‘ಡೇವಿಡ್ ರೆಡ್ಡಿ’ ಸಿನಿಮಾ ಇನ್ನೂ ಬಿಡುಗಡೆ ಸಹ ಆಗಿಲ್ಲ. ಅಷ್ಟರಲ್ಲೇ ಯಶ್ ಅವರೊಟ್ಟಿಗೆ ಎರಡನೇ ಸಿನಿಮಾ ನಿರ್ದೇಶಿಸಲು ಹನುಮ ರೆಡ್ಡಿ ಮುಂದಾಗಿದ್ದಾರೆ. ಹನುಮ ರೆಡ್ಡಿ ಈಗಾಗಲೇ ಯಶ್ ಅವರಿಗೆ ಕತೆ ಹೇಳಿದ್ದು, ಸಿನಿಮಾ ಇನ್ನೂ ಚರ್ಚೆಯ ಹಂತದಲ್ಲಿದೆ ಎನ್ನಲಾಗಿದೆ. ಆದರೆ ಯಶ್ ಅವರಿಗೆ ಕತೆ ಇಷ್ಟವಾಗಿದ್ದು, ಚಿತ್ರಕತೆಯನ್ನು ಅಂತಿಮಗೊಳಿಸುವ ಕಾರ್ಯ ಚಾಲ್ತಿಯಲ್ಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ:ಈ ವಿಷಯದಲ್ಲಿ ಯಶ್‌ಗಿಂತ ನಾನಿ ಬೆಸ್ಟ್; ನಟಿ ಶ್ರೀನಿಧಿ ಶೆಟ್ಟಿ ನೇರ ಮಾತು

ಯಶ್ ಅವರ ‘ಟಾಕ್ಸಿಕ್’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣಲಿಲ್ಲವಾದ್ದರಿಂದ ಅವರು ಮುಂದಿನ ಸಿನಿಮಾಕ್ಕೆ ಇನ್ನಷ್ಟು ಎಚ್ಚರಿಕೆ ವಹಿಸುವುದು ಖಾತ್ರಿ. ಹನುಮ ರೆಡ್ಡಿ ನಿರ್ದೇಶನದ ಒಂದೂ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಆದರೂ ಅವರಿಗೆ ಯಶ್ ಅವರು ಅವಕಾಶ ಕೊಡುತ್ತಿರುವುದು ಹಲವರಿಗೆ ಆಶ್ಚರ್ಯ ತಂದಿದೆ. ‘ಟಾಕ್ಸಿಕ್’ ಸಿನಿಮಾದಿಂದ ಅಭಿಮಾನಿಗಳಿಗೆ ಆಗಿರುವ ನಿರಾಸೆಯನ್ನು ಸರಿಪಡಿಸಲು ಯಶ್ ಅವರು ದೊಡ್ಡ ಸಿನಿಮಾದೊಂದಿಗೆ ಮತ್ತೆ ಬರುವ ನಿರೀಕ್ಷೆ ಅಭಿಮಾನಿಗಳದ್ದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ