AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರೇಮದ ಊರಲಿ’ ಯಶಸ್ಸು, ಯಶ್ ಅನ್ನು ನೆನಪಿಸಿಕೊಂಡ ರಂಗಾಯಣ ರಘು

‘ಪ್ರೇಮದ ಊರಲಿ’ ಸಿನಿಮಾನಲ್ಲಿ ರಂಗಾಯಣ ರಘು ಅವರು ಬಹಳ ಪ್ರಮುಖವಾದ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಇಡೀ ಚಿತ್ರದ ಜೀವಾಳವೇ ಅವರ ಪಾತ್ರವಾಗಿದೆ. ಇದೀಗ ರಂಗಾಯಣ ರಘು ಅವರು ‘ಪ್ರೇಮದ ಊರಲಿ’ ಸಿನಿಮಾ ಕುರಿತು ಟಿವಿ9 ಗೆ ವಿಶೇಷ ಸಂದರ್ಶನ ನೀಡಿದ್ದು, ‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ನಡುವೆ ಯಶ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣವೂ ಇದೆ.

‘ಪ್ರೇಮದ ಊರಲಿ’ ಯಶಸ್ಸು, ಯಶ್ ಅನ್ನು ನೆನಪಿಸಿಕೊಂಡ ರಂಗಾಯಣ ರಘು
Premada Oorali Yash
ಮಂಜುನಾಥ ಸಿ.
|

Updated on: Oct 03, 2026 | 5:53 PM

Share

ಮುಖ್ಯಾಂಶಗಳು

  • ‘ಪ್ರೇಮದ ಊರಲಿ’ ಸಿನಿಮಾ ಭರ್ಜರಿ ಪ್ರದರ್ಶನ
  • ಸಿನಿಮಾ ಬಗ್ಗೆ ನಟ ರಂಗಾಯಣ ರಘು ಮಾತು
  • ಯಶ್ ಅನ್ನು ನೆನಪು ಮಾಡಿಕೊಂಡ ರಂಗಾಯಣ ರಘು

‘ಪ್ರೇಮದ ಊರಲಿ’ ಸಿನಿಮಾ ಅಭೂತಪೂರ್ವ ಗೆಲುವು ಸಾಧಿಸಿದೆ. ಹೆಚ್ಚು ಪ್ರಚಾರವೇ ಇಲ್ಲದೆ, ಕೆಲವೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಈಗ ರಾಜ್ಯದೆಲ್ಲೆಡೆ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ. ನಿನ್ನೆಯಷ್ಟೆ (ಅಕ್ಟೋಬರ್ 2) ತೆಲುಗಿನಲ್ಲೂ ಈ ಸಿನಿಮಾ ರಿಲೀಸ್ ಆಗಿದ್ದು ಅಲ್ಲಿಯೂ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಸಿನಿಮಾನಲ್ಲಿ ರಂಗಾಯಣ ರಘು ಅವರು ಬಹಳ ಪ್ರಮುಖವಾದ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಇಡೀ ಚಿತ್ರದ ಜೀವಾಳವೇ ಅವರ ಪಾತ್ರವಾಗಿದೆ. ಇದೀಗ ರಂಗಾಯಣ ರಘು ಅವರು ‘ಪ್ರೇಮದ ಊರಲಿ’ ಸಿನಿಮಾ ಕುರಿತು ಟಿವಿ9 ಗೆ ವಿಶೇಷ ಸಂದರ್ಶನ ನೀಡಿದ್ದು, ‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ನಡುವೆ ಯಶ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣವೂ ಇದೆ.

‘ಪ್ರೇಮದ ಊರಲಿ’ ಸಿನಿಮಾ ಬಿಡುಗಡೆ ಆದ ಮೊದಲ ಎರಡು ದಿನಗಳನ್ನು ನೆನಪು ಮಾಡಿಕೊಂಡ ರಂಗಾಯಣ ರಘು, ‘ಮೊದಲ ಎರಡು ದಿನ ಜನರೇ ಇರಲಿಲ್ಲ. ಮೈಸೂರಿನಲ್ಲಿ ಒಂದು ಶೋ ಹಾಕಿದ್ದರು. ನನ್ನನ್ನೂ ಆಹ್ವಾನಿಸಿದ್ದರು. ನಾನು ಬೆಂಗಳೂರಿನಿಂದ ಹೋಗಿದ್ದೆ. 4 ಗಂಟೆಗೆ ಶೋ ಇತ್ತು. ಮೂರು ಗಂಟೆ ಆದರೂ ಒಬ್ಬನೇ ಒಬ್ಬ ಬಂದಿರಲಿಲ್ಲ. ಏನಿದು ಹೀಗಾಯ್ತಲ್ಲ ಎಂದುಕೊಂಡೆ. ನಿರ್ದೇಶಕ, ವಿತರಕ ಎಲ್ಲರೂ ಅಲ್ಲೇ ಇದ್ದಾರೆ. ಪಾಪ ಅವರ ಮುಖ ಪೆಚ್ಚಾಗಿದೆ. ಎಲ್ಲರಲ್ಲೂ ಮೌನ. ಆದರೆ ನಂತರ ಆಗಿದ್ದು ನಿಜವಾದ ಮ್ಯಾಜಿಕ್ಕು. ಅದೆಲ್ಲಿದ್ದರೋ ಏನೋ 3:30 ಜನ ಬರಲಾರಂಭಿಸಿದರು. ಚಿತ್ರಮಂದಿರ ಹೌಸ್​​ಫುಲ್ ಆಗಿಬಿಡ್ತು. ನಾನು ಅವರೊಟ್ಟಿಗೆ ಸಿನಿಮಾ ನೋಡಿದೆ. ಜನ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಆಗ ನನಗೆ ನಂಬಿಕೆ ಬಂತು’ ಎಂದಿದ್ದಾರೆ ರಘು.

‘ಸಿನಿಮಾದ ಬಗ್ಗೆ ಪಾಸಿಟಿವ್ ಮಾತುಗಳು ಹರಡಲು ಆರಂಭವಾಗುತ್ತಿದ್ದಂತೆ ಚಿತ್ರಮಂದಿರಗಳವರೇ ಸಿನಿಮಾ ಕೇಳುತ್ತಿದ್ದರು. ಆದರೆ ಇವರಿಗೆ ಕೊಡಲು ಸಾಧ್ಯವಾಗಿರಲಿಲ್ಲ. ವಿಷ್ಣುವರ್ಧನ್ ಅವರ ಜನ್ಮೋತ್ಸವಕ್ಕೆ ಹೋಗಿದ್ದೆ ಅಲ್ಲಿ ರವಿಚಂದ್ರನ್ ಸಿಕ್ಕಿ, ಸಿನಿಮಾ ಚೆನ್ನಾಗಿ ಆಗುತ್ತಿದೆ ಎಂದರು. ಬಳಿಕ ಅದೇ ದಿನ ಇನ್ನೂ ಕೆಲವರು ಸಿಕ್ಕಿ ಖುಷಿ ವ್ಯಕ್ತಪಡಿಸಿದರು. ಜನರೇ ಪ್ರಚಾರ ಮಾಡುತ್ತಿದ್ದಾರೆ ಎಂದೆಲ್ಲ ಹೇಳಿದರು. ಅದೆಲ್ಲ ಕೇಳಿ ಖುಷಿ ಆಯ್ತು. ಬಳಿಕ ಸಿನಿಮಾ ಓಡುತ್ತಲೇ ಹೋಯ್ತು’ ಎಂದಿದ್ದಾರೆ ರಂಗಾಯಣ ರಘು.

ಇದನ್ನೂ ಓದಿ:ಇದೊಂಥರಾ ‘ಲೂಸಿಯಾ’ ಕಥೆ; ಟಾರ್ಚ್ ಬಾಯ್ ಆಗಿದ್ದ ‘ಪ್ರೇಮದ ಊರಲಿ’ ನಿರ್ದೇಶಕ ಮನೋಜ್ ಕುಮಾರ್

ತಮ್ಮ ರೀತಿಯೇ ಸ್ಲೋ ಓಪನಿಂಗ್ ಕಂಡ ಸಿನಿಮಾಗಳನ್ನು ನೆನಪು ಮಾಡಿಕೊಂಡ ರಂಗಾಯಣ ರಘು, ‘ಸು ಫ್ರಂ ಸೋ, ‘ಕಾಂತಾರ’, ‘6-5=3’, ನಾನು ನಟಿಸಿದ್ದ ‘ಶಾಖಾಹಾರಿ’, 2002 ರಲ್ಲಿ ನಾನು ನಟಿಸಿದ್ದ ‘ಸೈನೈಡ್’ ಸಹ ಹೀಗೆಯೇ. ‘ಮೊದಲ ಸಲ’ ವೂ ಸಹ ಅಷ್ಟೆ. ‘ಮೊದಲ ಸಲ’ ಸಿನಿಮಾಕ್ಕಂತೂ ಜನರೇ ಇರಲಿಲ್ಲ. ಯಶ್ ಆಗ ಪ್ರತಿ ಚಿತ್ರಮಂದಿರಕ್ಕೂ ಹೋದ ಪ್ರಚಾರ ಮಾಡಿದ. ಈಗ ಈ ‘ಪ್ರೇಮದ ಊರಲಿ’ ಸಿನಿಮಾದ ಹುಡುಗರು ಅದನ್ನೇ ಮಾಡಿದರು. ಆಗ ‘ಮೊದಲ ಸಲ’ ಸಿನಿಮಾಕ್ಕಾಗಿ ಯಶ್ ಬಹಳ ಓಡಾಡಿದ್ದ, ಅವನೊಬ್ಬನೇ ಭಾರಿ ಪ್ರಚಾರ ಮಾಡಿ ಸಿನಿಮಾ ಗೆಲ್ಲಿಸಿದ್ದ’ ಎಂದು ರಂಗಾಯಣ ರಘು ನೆನಪು ಮಾಡಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More