ಕಾರುಗಳ ಕಿಂಗ್ ದುಲ್ಕರ್ ಸಲ್ಮಾನ್, ಸಂಗ್ರಹದಲ್ಲಿರುವ ಕಾರುಗಳೆಷ್ಟು ಗೊತ್ತೆ?
Dulquer Salmaan: ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಹಲವು ವಿದೇಶಿ ಬ್ರ್ಯಾಂಡುಗಳ ಹಲವು ಮಾದರಿಯ ಕಾರುಗಳನ್ನು ಖರೀದಿಸಿ ಸಂಗ್ರಹದಲ್ಲಿಟ್ಟುಕೊಂಡಿದ್ದಾರೆ. ಬಹುಷಃ ಯಾವ ಸ್ಟಾರ್ ನಟರುಗಳ ಬಳಿಯೂ ಇರದಷ್ಟು ಕಾರುಗಳು ದುಲ್ಕರ್ ಸಲ್ಮಾನ್ ಬಳಿ ಇವೆ. ದುಲ್ಕರ್ ಬಳಿ ಇರುವ ಕಾರುಗಳ ಪಟ್ಟಿ ಇಲ್ಲಿದೆ ನೋಡಿ...

ದುಲ್ಕರ್ ಸಲ್ಮಾನ್ ಮಲಯಾಳಂ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ಮಾಪಕ. ಅವರ ಮನೆಯ ಮೇಲೆ ನಿನ್ನೆಯಷ್ಟೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ದಾಳಿಗೆ ಕಾರಣ ದುಲ್ಕರ್ ಬಳಿ ಇರುವ ಕಾರು ಸಂಗ್ರಹ. ದುಲ್ಕರ್ ಸಲ್ಮಾನ್ಗೆ ಅತಿಯಾದ ಕಾರು ಕ್ರೇಜ್ ಇದೆ. ಹಲವು ವಿದೇಶಿ ಬ್ರ್ಯಾಂಡುಗಳ ಹಲವು ಮಾದರಿಯ ಕಾರುಗಳನ್ನು ದುಲ್ಕರ್ ಸಲ್ಮಾನ್ ಖರೀದಿ ಮಾಡಿದ್ದಾರೆ. ಬಹುಷಃ ಯಾವ ಸ್ಟಾರ್ ನಟರುಗಳ ಬಳಿಯೂ ಇರದಷ್ಟು ಕಾರುಗಳು ದುಲ್ಕರ್ ಸಲ್ಮಾನ್ ಬಳಿ ಇವೆ.
ದುಲ್ಕರ್ ಸಲ್ಮಾನ್ ಕೇವಲ ಶ್ರೀಮಂತಿಕೆ ತೋರಿಸಲು ಕಾರು ಖರೀದಿ ಮಾಡುವುದಿಲ್ಲ ಅವರಿಗೆ ಕಾರುಗಳೆಂದರೆ ಬಹಳ ಪ್ರೀತಿ, ಅವರು ಅತ್ಯಂತ ಹಳೆಯ ಮಾದರಿಯ ಕಾರುಗಳನ್ನು ಸಹ ಖರೀದಿ ಮಾಡಿ ಸಂಗ್ರಹದಲ್ಲಿ ಇಟ್ಟುಕೊಂಡಿದ್ದಾರೆ. ಅವರ ಸಂಗ್ರಹದಲ್ಲಿ 80ರ ದಶಕದ ಕಾರುಗಳಿಂದ ಹಿಡಿದು ಇತ್ತೀಚೆಗೆ ಬಿಡುಗಡೆ ಆದ ಫೆರಾರಿ, ಬಿಎಂಡಬ್ಲು ಕಂಪೆನಿಗಳ ಲೇಟೆಸ್ಟ್ ಕಾರುಗಳ ಸಹ ಇವೆ.
ದುಲ್ಕರ್ ಸಲ್ಮಾನ್ ಬಳಿ ಮರ್ಸಿಡೀಸ್, ಬೆಂಜ್, ಪೋರ್ಷೆ, ಫೆರಾರಿ, ವೋಲ್ವೋ ಇನ್ನೂ ಕೆಲವು ಜಗತ್ತಿನ ನಂ1 ಕಾರು ಕಂಪೆನಿಗಳ ಕಾರುಗಳಿವೆ. ಅದೂ ಸಾಮಾನ್ಯ ಕಾರುಗಳಲ್ಲ, 80, 90ರ ದಶಕದ ಅತ್ಯುತ್ತಮ ಕಾರುಗಳನ್ನು ದುಲ್ಕರ್ ಸಲ್ಮಾನ್ ಖರೀದಿಸಿ ತಮ್ಮ ಸಂಗ್ರಹದಲ್ಲಿ ಇರಿಸಿಕೊಂಡಿದ್ದಾರೆ. ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ ಬಿಎಂಡಬ್ಲುವಿನ ಎಂ3 ಸರಣಿಯ e 28, e 20, e 34, e 36, 46, 92 ಕಾರುಗಳು ಅವರ ಸಂಗ್ರಹದಲ್ಲಿವೆ. ಇವೆಲ್ಲವೂ ಹಳೆಯ ಕಾರುಗಳು, ಬಿಎಂಡಬ್ಲು ಕಂಪೆನಿಯ ಇತ್ತೀಚೆಗೆ ಕೆಲ ಐಶಾರಾಮಿ ಕಾರುಗಳು ಸಹ ದುಲ್ಕರ್ ಬಳಿ ಇವೆ.
ಇನ್ನು ಪೋರ್ಷೆ ಬ್ರ್ಯಾಂಡಿನ 911, 916, 917 ಕಾರುಗಳು ದುಲ್ಕರ್ ಬಳಿ ಇವೆ. ‘ಶಾನ್’ ಸಿನಿಮಾನಲ್ಲಿ ಬಳಸಿದ್ದ 74ರಲ್ಲಿ ಬಿಡುಗಡೆ ಆಗಿದ್ದ ಟಾಗಾ ಕಾರನ್ನು ಖರೀದಿಸಿ ಇರಿಸಿಕೊಂಡಿದ್ದಾರೆ ದುಲ್ಕರ್ ಸಲ್ಮಾನ್, ಹಲವಾರು ಮಾದರಿಯ ಎಸ್ಯುವಿ ಕಾರುಗಳು ದುಲ್ಕರ್ ಬಳಿ ಇವೆ. ಲ್ಯಾಂಡ್ ಕ್ರೂಸರ್ ನ 40, 60, 80, 100 ಸರಣಿಯ ಕಾರುಗಳು ಅವರ ಬಳಿ ಇವೆ. ಇನ್ನು ವೋಲ್ವೋ ಸ್ಟೇಷನ್ ವ್ಯಾಗನ್, ಫೋರ್ಡ್ನ ಪಿಕಪ್ ಟ್ರಕ್ ಕಾರು ಸಹ ಅವರ ಸಂಗ್ರಹದಲ್ಲಿದೆ.
ಇದನ್ನೂ ಓದಿ:ಸ್ಮಗ್ಲಿಂಗ್ ಪ್ರಕರಣ: ಸ್ಟಾರ್ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ದಾಳಿ
ಇವುಗಳ ಹೊರತಾಗಿ 6 ಕೋಟಿಗೂ ಹೆಚ್ಚು ಬೆಲೆಯುಳ್ಳ ಫೆರಾರಿ 296 ಜಿಟಿಬಿ, ಐಕಾನಿಕ್ ಕಾರಾಗಿರುವ ಮರ್ಸಿಡೀಸ್ ಬೆಂಜ್ ಎಎಂಜಿ, ಪೋರ್ಷೆ ಪನೆರಮಾ, ಮರ್ಸಿಡಿಸ್ ಮೇಬ್ಯಾಕ್ ಜಿಎಎಲ್ಎಸ್ 600, ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್, ಮರ್ಸಿಡಿಸ್ ಎಎಂಜಿ ಎ45, ಬಿಎಂಡಬ್ಲು 7 ಸೀರೀಸ್, ಲ್ಯಾಂಡ್ ರೋವರ್ ಡಿಫೆಂಡರ್, ವೋಲ್ವೊ ಪೋಲೊ ಜಿಟಿಐ, ಮಿನಿ ಕೂಪರ್, ಮಾಜ್ದಾ ಎಂಎಕ್ಸ್ 5, ಟೊಯೊಟಾ ಇನ್ನೋವಾ ಹೈಕ್ರಾಸ್, ಕ್ರಿಸ್ಟಾ ಕಾರುಗಳು ಸಹ ಅವರ ಸಂಗ್ರಹದಲ್ಲಿ ಇವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




