ಕನ್ನಡ ಹಾಡು ಹಾಡಿಲ್ಲ ಎಂದು ಎಡ್ ಶೀರನ್ನ ತಡೆದ ಪೊಲೀಸರು? ಸಿಕ್ಕಿತು ಸ್ಪಷ್ಟನೆ
ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಪ್ರಸಿದ್ಧ ಗಾಯಕ ಎಡ್ ಶೀರನ್ ಅವರ ಸಂಗೀತ ಕಾರ್ಯಕ್ರಮವನ್ನು ಪೊಲೀಸರು ಅನಿರೀಕ್ಷಿತವಾಗಿ ನಿಲ್ಲಿಸಿದ್ದಾರೆ. ಪ್ರದರ್ಶನಕ್ಕೆ ಅನುಮತಿ ಇಲ್ಲದ ಕಾರಣ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗಳು ನಡೆದಿವೆ .

ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಖ್ಯಾತ ಇಂಗ್ಲಿಷ್ ಗಾಯಕ ಎಡ್ ಶೀರನ್ ಅವರು ಹಾಡುತ್ತಿರುವಾಗ ಪೊಲೀಸರು ಇದಕ್ಕೆ ಅಡ್ಡಿ ಉಂಟು ಮಾಡಿದ್ದರು. ಪ್ಲಗ್ನ ಎಳೆಯುವ ಮೂಲಕ ಪರ್ಫಾರ್ಮೆನ್ಸ್ ಅರ್ಧಕ್ಕೆ ನಿಲ್ಲುವಂತೆ ಮಾಡಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ‘ಕನ್ನಡದಲ್ಲಿ ಹಾಡಿಲ್ಲ ಎಂಬ ಕಾರಣಕ್ಕೆ ಎಡ್ ಶೀರನ್ ಹಾಡನ್ನು ನಿಲ್ಲಿಸಲಾಯಿತು’ ಎಂದು ಕೂಡ ಟ್ರೋಲ್ ಆಗಿತ್ತು. ಈ ಬಗ್ಗೆ ಎಡ್ ಶೀರನ್ ಸ್ಪಷ್ಟನೆ ನೀಡಿದ್ದಾರೆ.
‘ಚರ್ಚ್ ಸ್ಟ್ರೀಟ್‌ನಲ್ಲಿ ಪರ್ಫಾರ್ಮೆನ್ಸ್ ಮಾಡಲು ನಾನು ಒಪ್ಪಿಗೆ ಪಡೆದುಕೊಂಡಿದ್ದೆ’ ಎಂದು ಎಡ್ ಶೀರನ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸಾಕಷ್ಟು ಚರ್ಚೆ ಆಗಿತ್ತು. ಒಪ್ಪಿಗೆ ಇದ್ದ ಹೊರತಾಗಿಯೂ ಎಡ್ ಶೀರನ್ ಹಾಡನ್ನು ನಲ್ಲಿಸಿದ್ದೇಕೆ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿತ್ತು. ಇದಕ್ಕೆ ಬೆಂಗಳೂರು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಚರ್ಚ್ ಸ್ಟ್ರೀಟ್ ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಅದರಲ್ಲೂ ಭಾನುವಾರ ಎಂದಾಗ ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಮುಂದಾಗಬಹುದಾದ ತೊಂದರೆಗಳನ್ನು ತಡೆಯಲು ಎಡ್ ಶೀರನ್ ಪರ್ಫಾರ್ಮೆನ್ಸ್ನ ತಡೆಯಲಾಯಿತು ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.
ED Sheeran! pic.twitter.com/1VEYZRd22I
— RVCJ Media (@RVCJ_FB) February 9, 2025
Karnataka | On the incident where singer-songwriter Ed Sheeran’s Streetside performance was stopped by Police in Bengaluru, DCP Central Bengaluru Shekar T Tekkannanavar says, ” A member among the event organisers came to meet me to seek permission for the Streetside performance… pic.twitter.com/5Bm5wKmCh2
— ANI (@ANI) February 10, 2025
‘ಚರ್ಚ್ಸ್ಟ್ರೀಟ್ನಲ್ಲಿ ಪರ್ಫಾರ್ಮೆನ್ಸ್ ಮಾಡಲು ಅವಕಾಶ ನೀಡಿ ಎಂದು ಈವೆಂಟ್ ಆರ್ಗನೈಸರ್ಸ್ ಆಗಮಿಸಿದ್ದರು. ಆದರೆ, ಚರ್ಚ್ಸ್ಟ್ರೀಟ್ ಸದಾ ಜನಜಂಗುಳಿಯಿಂದ ಕೂಡಿರುತ್ತದೆ ಎಂಬ ಕಾರಣಕ್ಕೆ ನಾವು ಒಪ್ಪಿಗೆ ನೀಡಿಲ್ಲ. ಈ ಕಾರಣಕ್ಕೆ ನಾವು ಜಾಗವನ್ನು ತೊರೆಯುವಂತೆ ಹೇಳಿದೆವು’ ಎಂದು ಕೇಂದ್ರ ಬೆಂಗಳೂರು ಡಿಸಿಪಿ ಶೇಖರ್ ಟಿ ಟೆಕ್ಕಣ್ಣನವರ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಖ್ಯಾತ ಗಾಯಕನ ಸಂಗೀತ ಕಾರ್ಯಕ್ರಮಕ್ಕೆ ಪೊಲೀಸರಿಂದ ತಡೆ
ಸ್ಟ್ರೀಟ್ ಪರ್ಫಾರ್ಮೆನ್ಸ್ನ ತಡೆದಿದ್ದಕ್ಕೆ ಎಡ್ ಶೀರನ್ ಬೇಸರಗೊಂಡಿದ್ದಾರೆ. ಇದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಈ ವಿಡಿಯೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟಿಹಾಕಿತ್ತು. ಎಡ್ ಶೀರನ್ ಅವರು ಇಂಗ್ಲೆಂಡ್ನವರು. ಅವರು ‘ಶೇಪ್ ಆಫ್ ಯು’ ಹಾಡನ್ನು ಹಾಡಿದ್ದಾರೆ. ಈ ಹಾಡು ಸೂಪರ್ ಹಿಟ್ ಕಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.