ವಿದೇಶದಲ್ಲಿ ಮತ್ತೆ ಅಪಘಾತಕ್ಕೆ ಒಳಗಾದ ಅಜಿತ್ ಕುಮಾರ್; ಹೇಗಿದೆ ಪರಿಸ್ಥಿತಿ?
ಪೋರ್ಚುಗಲ್‌ನಲ್ಲಿ ಮೋಟಾರ್‌ಸ್ಪೋರ್ಟ್ಸ್ ರೇಸಿಂಗ್ ತರಬೇತಿಯಲ್ಲಿ ತೊಡಗಿದ್ದ ನಟ ಅಜಿತ್ ಕುಮಾರ್ ಅವರಿಗೆ ಸಣ್ಣ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಅವರಿಗೆ ಯಾವುದೇ ಗಾಯಗಳಾಗಿಲ್ಲ. ‘ವಿದಾಮುಯರ್ಚಿ’ ಚಿತ್ರದ ಯಶಸ್ಸಿನ ನಂತರ, ಅವರು ತಮ್ಮ ರೇಸಿಂಗ್ ಹವ್ಯಾಸಕ್ಕೆ ಮರಳಿದ್ದರು. ಅವರ ತಂಡಕ್ಕೆ ಬೆಂಬಲ ನೀಡಿದವರಿಗೆ ಅಜಿತ್ ಕೃತಜ್ಞತೆ ಸಲ್ಲಿಸಿದ್ದಾರೆ. ಇದು ಅವರಿಗೆ ಎರಡನೇ ರೇಸಿಂಗ್ ಅಪಘಾತ.

ನಟ ಅಜಿತ್ ಕುಮಾರ್ ಅವರು ಸಿನಿಮಾ ಹಾಗೂ ಪ್ಯಾಷನ್ನ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಮೋಟರ್ಸ್ಪೋರ್ಟ್ಸ್ ರೇಸಿಂಗ್ ಎಂದರೆ ಎಲ್ಲರಿಗೂ ಇಷ್ಟ. ಅವರ ನಟನೆಯ ‘ವಿದಾಮುಯರ್ಚಿ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡುತ್ತಿದೆ. ಹೀಗಿರುವಾಗಲೇ ಅಜಿತ್ ಅವರು ಪೋರ್ಚುಗಲ್ಗೆ ತೆರಳಿದ್ದು ರೇಸಿಂಗ್ನಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲಿ ಮೋಟರ್ಸ್ಪೋರ್ಟ್ಸ್ ರೇಸಿಂಗ್ ತರಬೇತಿಯಲ್ಲಿ ಬ್ಯುಸಿ ಇದ್ದಾರೆ. ಈ ವೇಳೆ ಅಲ್ಲಿ ಅವರಿಗೆ ಅಪಘಾತ ಆಗಿದೆ.
ಪೋರ್ಚುಗಲ್ನ ಎಸ್ಟೊರಿಲ್ನಲ್ಲಿ ಟ್ರ್ಯಾಕ್ ಒಂದರಲ್ಲಿ ಅಜಿತ್ ಕುಮಾರ್ ಟ್ರೇನಿಂಗ್ ಸೆಷನ್ ನಡೆಸುತ್ತಿದ್ದರು. ಈ ವೇಳೆ ಅಪಘಾತ ಆಗಿದ್ದು, ಕಾರು ಡ್ಯಾಮೇಜ್ ಆಗಿದೆ. ಆದರೆ, ಅಜಿತ್ ಕುಮಾರ್ ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎನ್ನುವ ವಿಚಾರ ರಿವೀಲ್ ಆಗಿದೆ. ‘ಇದೊಂದು ಸಣ್ಣ ಅಪಘಾತ. ನನಗೆ ಯಾವುದೇ ತೊಂದರೆ ಆಗಿಲ್ಲ’ ಎಂದು ಅಜಿತ್ ಕುಮಾರ್ ಹೇಳಿರೋದಾಗಿ ವರದಿ ಆಗಿದೆ.
‘ನಾವು ಸಣ್ಣ ಅಪಘಾತಕ್ಕೆ ಒಳಗಾದೆವು. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ. ಸಮಯ ನನ್ನ ಪರವಾಗಿತ್ತು. ಕಾರ್ ರೇಸ್ನಲ್ಲಿ ಮತ್ತೊಮ್ಮೆ ಗೆದ್ದು ನಮ್ಮ ಹೆಮ್ಮೆಯನ್ನು ಸ್ಥಾಪಿಸುತ್ತೇವೆ. ಅಪಘಾತದ ಸಮಯದಲ್ಲಿ ನಮಗೆ ಬೆಂಬಲ ನೀಡಿದ ಸ್ನೇಹಿತರಿಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ’ ಎಂದು ಅಜಿತ್ ಕುಮಾರ್ ಹೇಳಿಕೊಂಡಿದ್ದಾರೆ. ಅಜಿತ್ ಕುಮಾರ್ ಅವರು ತಮ್ಮದೇ ಆದ ಕಾರ್ ರೇಸ್ ತಂಡ ಹೊಂದಿದ್ದಾರೆ.
ಅಜಿತ್ ಕುಮಾರ್ ಅವರು ಈ ರೀತಿಯಲ್ಲಿ ಅಪಘಾತಕ್ಕೆ ಒಳಗಾಗುತ್ತಿರುವುದು ಇದು ಎರಡನೇ ಬಾರಿ. ‘ದುಬೈ 24H ರೇಸಿಂಗ್’ ಈವೆಂಟ್ನಲ್ಲಿ ಅವರು ಟ್ರೇನಿಂಗ್ ಮಾಡುವಾಗ ಅಪಘಾತಕ್ಕೆ ಒಳಗಾಗಿದ್ದರು. ಈ ವೇಳೆ ಕಾರು ವೇಗವಾಗಿ ಸಾಗುತ್ತಿತ್ತು. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: ದುಬೈನಲ್ಲಿ ರೇಸ್ ಗೆದ್ದು ಬಂದ ಅಜಿತ್ ಕುಮಾರ್; ಪತ್ನಿಗೆ ಮುತ್ತು
ಅಜಿತ್ ನಟನೆಯ ‘ವಿದಾಮುಯಾರ್ಚಿ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಬಿಗ್ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಕೇವಲ 62 ಕೋಟಿ ರೂಪಾಯಿ ಗಳಿಕೆ ಮಾಡಿದೆ. ನಾಲ್ಕು ದಿನಗಳಲ್ಲಿ ಚಿತ್ರ ಇಷ್ಟು ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದೆ. ಆದರೆ, ಚಿತ್ರದ ಬಜೆಟ್ ಹೆಚ್ಚಿದೆ. ಅಜಿತ್ ಅವರು ಸದ್ಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರವನ್ನು ಅಧಿಕ್ ರವಿಚಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ. ಏಪ್ರಿಲ್ 10ರಂದು ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.