AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​ನಲ್ಲಿ ನಟ ಇಮ್ರಾನ್ ಹಷ್ಮಿ ಕತ್ತಿಗೆ ಆಯ್ತು ದೊಡ್ಡ ಗಾಯ

‘ಗೂಡಚಾರಿ 2’ ಚಿತ್ರದ ಜಂಪ್ ದೃಶ್ಯವನ್ನು ಇಮ್ರಾನ್ ಶೂಟ್ ಮಾಡುತ್ತಿದ್ದರು. ಮೇಲಿನಿಂದ ಅವರು ಜಿಗಿಯುವಾಗ ಅವಘಡ ಸಂಭವಿಸಿದೆ. ಅವರ ಕತ್ತಿನ ಭಾಗದಲ್ಲಿ ಆಳವಾದ ಗಾಯ ಆಗಿದೆ. ಗಾಯದ ಬಳಿಕ ಪ್ರಥಮ ಚಿಕಿತ್ಸೆ ಮಾಡಿಕೊಂಡ ಅವರು ಶೂಟಿಂಗ್ ಮುಂದುವರಿಸಿದ್ದಾರೆ.

ಹೈದರಾಬಾದ್​ನಲ್ಲಿ ನಟ ಇಮ್ರಾನ್ ಹಷ್ಮಿ ಕತ್ತಿಗೆ ಆಯ್ತು ದೊಡ್ಡ ಗಾಯ
ಇಮ್ರಾನ್ ಹಷ್ಮಿ
ರಾಜೇಶ್ ದುಗ್ಗುಮನೆ
|

Updated on: Oct 08, 2024 | 2:53 PM

Share

ನಟ ಇಮ್ರಾನ್ ಹಷ್ಮಿ ಅವರು ಸದ್ಯ ದಕ್ಷಿಣ ಭಾರತದಲ್ಲಿ ಬ್ಯುಸಿ ಇದ್ದಾರೆ. ಅವರು ‘ಗೂಡಾಚಾರಿ 2’ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟ್ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಆ್ಯಕ್ಷನ್ ದೃಶ್ಯದ ಶೂಟ್​ ವೇಳೆ ಅವರ ಕತ್ತಿಗೆ ಗಾಯ ಆಗಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರ ಕತ್ತಿಂದ ರಕ್ತ ಹರಿಯುತ್ತಿದೆ.

ಜಂಪ್ ದೃಶ್ಯವನ್ನು ಇಮ್ರಾನ್ ಶೂಟ್ ಮಾಡುತ್ತಿದ್ದರು. ಮೇಲಿನಿಂದ ಅವರು ಜಿಗಿಯುವಾಗ ಅವಘಡ ಸಂಭವಿಸಿದೆ. ಅವರ ಕತ್ತಿನ ಭಾಗದಲ್ಲಿ ಆಳವಾದ ಗಾಯ ಆಗಿದೆ. ಗಾಯದ ಬಳಿಕ ಪ್ರಥಮ ಚಿಕಿತ್ಸೆ ಮಾಡಿಕೊಂಡ ಅವರು ಶೂಟಿಂಗ್ ಮುಂದುವರಿಸಿದ್ದಾರೆ.

ಈ ರೀತಿ ರಕ್ತ ಬಂದಾಗ ಅದು ನ್ಯಾಚುರಲ್ ಆಗಿ ಕಾಣುತ್ತದೆ ಎಂಬ ಅಭಿಪ್ರಾಯವನ್ನು ಇಮ್ರಾನ್ ಹಷ್ಮಿ ಹೊರಹಾಕಿದ್ದಾರಂತೆ. ಇಷ್ಟೇ ಅಲ್ಲ, ಇವರು ಆಸ್ಪತ್ರೆ ದಾಖಲಾದರೆ ಅಥವಾ ವಿಶ್ರಾಂತಿ ಪಡೆಯೋ ನಿರ್ಧಾರ ತೆಗೆದುಕೊಂಡರೆ ಸಿನಿಮಾದ ಕೆಲಸಗಳು ವಿಳಂಬ ಆಗಲಿವೆ. ಈ ಕಾರಣಕ್ಕೆ ಅವರು ಶೂಟ್​ನಲ್ಲಿ ಭಾಗವಹಿಸಿದ್ದಾರೆ.  ಈ ಬಗ್ಗೆ ಅವರ ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ.

‘ಗೂಡಾಚಾರಿ 2’ ಚಿತ್ರವನ್ನು ವಿನಯ್ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶನದಲ್ಲಿ ಅವರಿಗೆ ಇದು ಮೊದಲ ಅನುಭವ. ತೆಲುಗಿನಲ್ಲಿ ಹಿಟ್ ಆದ ಅಡಿವಿ ಶೇಷ್ ಅವರ ‘ಗೂಡಾಚಾರಿ’ ಚಿತ್ರದ ಸೀಕ್ವೆಲ್ ಇದಾಗಿದೆ. ಈ ಚಿತ್ರದಲ್ಲೂ ಅಡಿವಿ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಮ್ರಾನ್ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಶೋಭಿತಾ ಧುಲಿಪಾಲ್ ಹೀರೋಯಿನ್ ಆದರೆ, ಜಗಪತಿ ಬಾಬು ವಿಲನ್ ಪಾತ್ರ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮತ್ತೆ ಅನಾವರಣ ಆಯಿತು ಇಮ್ರಾನ್ ಹಷ್ಮಿ ಕಿಸ್ಸಿಂಗ್ ಅವತಾರ; ಮೌನಿ ರಾಯ್ ಜೊತೆ ಬೋಲ್ಡ್ ದೃಶ್ಯ

ಇಮ್ರಾನ್ ಹಷ್ಮಿ ಈ ಮೊದಲು ‘ಟೈಗರ್ 3’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮೊದಲಾದವರು ನಟಿಸಿದ್ದರು. ಅವರು ಕರಣ್ ಜೋಹರ್ ನಿರ್ಮಾಣದ ‘ಶೋ ಟೈಮ್’ನಲ್ಲಿ ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.