ಒಳ ಉಡುಪು ಧರಿಸದೆ ಬೀದಿಗೆ ಬಂದ ಮಾಜಿ ಭುವನ ಸುಂದರಿ; ಮುಂದೇನಾಯ್ತು?

| Updated By: ರಾಜೇಶ್ ದುಗ್ಗುಮನೆ

Updated on: Feb 13, 2022 | 3:41 PM

ಒಲಿವಿಯಾ ಕುಲ್ಪೋ ಅವರು ‘ಮಿಸ್​ ಅಮೆರಿಕ’ ಹಾಗೂ ‘ಮಿಸ್​ ಯೂನಿವರ್ಸ್​’ ಪಟ್ಟವನ್ನು ಗಳಿಸಿಕೊಂಡವರು. ಅಮೆರಿಕದಲ್ಲಿ ಅವರಿಗೆ ದೊಡ್ಡ ಮಟ್ಟದ ಹೆಸರಿದೆ. ಮಾಡೆಲ್​ ಆಗಿರುವ ಅವರು ಸಾಕಷ್ಟು ವೇದಿಕೆಗಳ ಮೇಲೆ ಹೆಜ್ಜೆ ಹಾಕಿದ್ದಾರೆ.

ಒಳ ಉಡುಪು ಧರಿಸದೆ ಬೀದಿಗೆ ಬಂದ ಮಾಜಿ ಭುವನ ಸುಂದರಿ; ಮುಂದೇನಾಯ್ತು?
ಒಲಿವಿಯಾ ಕುಲ್ಪೋ
Follow us on

ಬಟ್ಟೆ ವಿಚಾರದಲ್ಲಿ ಸೆಲೆಬ್ರಿಟಿಗಳು (Celebrity)  ಟ್ರೋಲ್​ ಆದಷ್ಟು ಮತ್ಯಾರೂ ಆಗುವುದಿಲ್ಲ. ಅವರು ಧರಿಸುವ ಬಟ್ಟೆ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಆಸಕ್ತಿ ಇರುತ್ತದೆ. ಸೆಲೆಬ್ರಿಟಿಗಳು ಯಾವುದೇ ಉಡುಗೆ ತೊಟ್ಟರೂ ಅದನ್ನು ಗಮನಿಸುತ್ತಿರುತ್ತಾರೆ. ಕೆಲವು ಉಡುಗೆಗಳನ್ನು ಟ್ರೋಲ್​ ಮಾಡಿದರೆ, ಇನ್ನೂ ಕೆಲವು ಉಡುಗೆಯನ್ನು ಮೆಚ್ಚಿಕೊಳ್ಳುತ್ತಾರೆ. ಈ ಮೊದಲು ದೊಡ್ಡದೊಡ್ಡ ಸೆಲೆಬ್ರಿಟಿಗಳು ಡ್ರೆಸ್​ ವಿಚಾರಕ್ಕೆ ಸಾಕಷ್ಟು ಟೀಕೆಗಳನ್ನು ಎದುರಿಸಿದ ಉದಾಹರಣೆ ಸಾಕಷ್ಟಿದೆ. ಈಗ ಮಾಜಿ ಭುವನ ಸುಂದರಿಯೊಬ್ಬರು (Miss Universe) ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಅವರು ಒಳಉಡುಪು ಹಾಕದೆ ರಸ್ತೆಗೆ ಇಳಿದಿದ್ದು! ಈ ವಿಚಾರದಲ್ಲಿ ಅವರು ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ.

ಒಲಿವಿಯಾ ಕುಲ್ಪೋ ಅವರು ‘ಮಿಸ್​ ಅಮೆರಿಕ’ ಹಾಗೂ ‘ಮಿಸ್​ ಯೂನಿವರ್ಸ್​’ ಪಟ್ಟವನ್ನು ಗಳಿಸಿಕೊಂಡವರು. ಅಮೆರಿಕದಲ್ಲಿ ಅವರಿಗೆ ದೊಡ್ಡ ಮಟ್ಟದ ಹೆಸರಿದೆ. ಮಾಡೆಲ್​ ಆಗಿರುವ ಅವರು ಸಾಕಷ್ಟು ವೇದಿಕೆಗಳ ಮೇಲೆ ಹೆಜ್ಜೆ ಹಾಕಿದ್ದಾರೆ. ಆದರೆ, ಇತ್ತೀಚೆಗೆ ಅವರು ತೊಟ್ಟ ಉಡುಗೆ ಮೇಲೆ ಕೆಲವರ ವಕ್ರ ದೃಷ್ಟಿ ಬಿದ್ದಿದೆ. ಹೀಗಾಗಿ, ನಿಮಗೆ ನಾಚಿಕೆ​ ಆಗಬೇಕು ಎಂದು ಟೀಕಿಸುತ್ತಿದ್ದಾರೆ. ಅಭಿಮಾನಿಗಳು ಒಲಿವಿಯಾ ಅವರ ಪರ ವಹಿಸಿಕೊಂಡು ಮಾತನಾಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಒಲಿವಿಯಾ ಅವರು ಟ್ರಿಪ್​ ಒಂದಕ್ಕೆ ತೆರಳಿದ ಫೋಟೋ ಹಂಚಿಕೊಂಡಿದ್ದರು. ಈ ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದರು. ಇದಾದ ಬೆನ್ನಲ್ಲೇ ಅವರು ಹೋಟೆಲ್​ ಒಂದಕ್ಕೆ ಊಟಕ್ಕೆ ತೆರಳುವಾಗ ತೊಟ್ಟ ಬಟ್ಟೆಯಿಂದ ಟೀಕೆ ಎದುರಿಸುವಂತಾಗಿದೆ.

ಒಲಿವಾ ಅವರು ತೆಳುವಾದ ಡ್ರೆಸ್​ ಧರಿಸಿ ಕಾಣಿಸಿಕೊಂಡಿದ್ದರು. ಅಚ್ಚರಿ ಎಂದರೆ ಅವರು ಯಾವುದೇ ಒಳುಡುಪು ಹಾಕಿರಲಿಲ್ಲ. ‘ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಹೀಗಾ ಬರೋದು? ಸ್ವಲ್ಪವಾದರೂ ನಾಚಿಕೆ ಇರಬೇಕು’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ನೀವು ಉಡುಗೆ ತೊಡುವ ಅವಶ್ಯಕತೆ ಏನಿತ್ತು?’ ಎಂದು ಬರೆದುಕೊಂಡಿದ್ದಾರೆ.

ಬಟ್ಟೆ ವಿಚಾರದಲ್ಲಿ ಟ್ರೋಲ್​ ಆಗಿದ್ದ ನಟಿ ಪಾಯಲ್​ ರಜಪೂತ್

ನಟಿ ಪಾಯಲ್​ ರಜಪೂತ್​ ಕೂಡ ಇತ್ತೀಚೆಗೆ ಇದೇ ರೀತಿಯ ಅವಮಾನ ಎದುರಿಸಿದ್ದರು. ಅವರು ತೊಟ್ಟಿದ್ದ ಬಟ್ಟೆಯೇ ಅವರಿಗೆ ಮುಳುವಾಗಿತ್ತು. ಈ ವಿಚಾರದಲ್ಲಿ ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಈಗ ಚಿತ್ರರಂಗ ತೊರೆಯುವಂತೆ ಪಾಯಲ್​ ತಾಯಿ ಸೂಚಿಸಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಪಾಯಲ್​ ಹೇಳಿಕೊಂಡಿದ್ದಾರೆ.

ಹಳದಿ ಬಣ್ಣದ ಕೋಟ್​ ರೀತಿಯ ಡ್ರೆಸ್​ ಧರಿಸಿ ಪಾಯಲ್​ ಇತ್ತೀಚೆಗೆ ಕ್ಯಾಮೆರಾಗೆ ಪೋಸ್​ ನೀಡಿದ್ದರು. ಈ ಕೋಟ್​​ಗೆ ಅವರು ಬಟನ್​ ಹಾಕಿರಲಿಲ್ಲ. ಫೋಟೋಶೂಟ್​ ಮಾಡುವಾಗ ಇವರ ಖಾಸಗಿ ಅಂಗ ಪ್ರದರ್ಶನವಾಗಿತ್ತು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕ್ಷಣಮಾತ್ರದಲ್ಲಿ ವೈರಲ್​ ಆಗಿತ್ತು. ಈ ಫೋಟೋ ಹಾಗೂ ವಿಡಿಯೋಗಳನ್ನು ಹಲವರು ನಾನಾ ರೀತಿಯಲ್ಲಿ ಟ್ರೋಲ್​ ಮಾಡಿದ್ದರು. ಕೆಟ್ಟದಾಗಿ ಕಮೆಂಟ್​ಗಳನ್ನು ಮಾಡಿದ್ದರು. ಇದು ಪಾಯಲ್​ ತಾಯಿಯ ಗಮನಕ್ಕೂ ಬಂದಿತ್ತು. ಮಗಳನ್ನು ಕರೆದು ಅವರು ಬುದ್ಧಿವಾದ ಹೇಳಿದ್ದರು.

ಇದನ್ನೂ ಓದಿ: Samantha: ಸಮಂತಾ ಜತೆ ಆ್ಯಕ್ಷನ್ ಚಿತ್ರದಲ್ಲಿ ನಟಿಸಬೇಕು; ಆಲಿಯಾ ಭಟ್​ಗೆ ಹೀಗೊಂದು ಆಸೆ

Shocking Video: ಕೆಳಗೆ ಬಿದ್ದ ಬಟ್ಟೆ ತರಲು ಮಗನನ್ನು ಸೀರೆಗೆ ಕಟ್ಟಿ 10ನೇ ಮಹಡಿಯಿಂದ ನೇತಾಡಿಸಿದ ತಾಯಿ!