ಮಿಸ್ ಯೂನಿವರ್ಸ್ ಆದ ಮೆಕ್ಸಿಕೊ ಸುಂದರಿ; ಕಾಲಿಗೆ ಗಾಜು ಚುಚ್ಚಿದರೂ ಬಿಡಲಿಲ್ಲ ಛಲ
74ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮೆಕ್ಸಿಕೋದ ಫಾತಿಮಾ ಬೋಷ್ ವಿಜೇತರಾಗಿದ್ದಾರೆ. ಗಾಯ ಮತ್ತು ವಿವಾದಗಳ ನಡುವೆಯೂ ಅವರು ಕಿರೀಟ ಗೆದ್ದಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ ಮಾಣಿಕಾ ವಿಶ್ವಕರ್ಮ ಟಾಪ್ 12 ಹಂತಕ್ಕೆ ತಲುಪಲು ವಿಫಲರಾದರು. ಥೈಲ್ಯಾಂಡ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಭಾರತ ಮೂಲದ ಪ್ರವೀಣರ್ ಸಿಂಗ್ ಮೊದಲ ರನ್ನರ್ ಅಪ್ ಆದರು.

74ನೇ ಸಾಲಿನ ಮಿಸ್ ಯೂನಿವರ್ಸ್ ಸಂಪೂರ್ಣಗೊಂಡಿದೆ. ಥೈಲೆಂಡ್ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ 100ಕ್ಕೂ ಅಧಿಕ ಮಂದಿ ಸ್ಪರ್ಧೆ ಮಾಡಿದ್ದರು. ಈ ಪೈಕಿ ಮೆಕ್ಸಿಕೊದ ಫಾತಿಮಾ ಬೋಷ್ ಅವರು ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಭಾರತ ಮೂಲದ ಥೈಲೆಂಡ್ ಪ್ರಜೆ ಪ್ರವೀಣರ್ ಸಿಂಗ್ ಮೊದಲ ರನ್ನರ್ ಅಪ್ ಆದರು. ಭಾರತ ಪ್ರತಿನಿಧಿಸಿದ್ದ ಮಾಣಿಕಾ ವಿಶ್ವಕರ್ಮ ಅವರು ಟಾಪ್ 12 ಸುತ್ತಿಗೆ ಆಯ್ಕೆ ಆಗಲು ವಿಫಲರಾದರು.
ಫಾತಿಮಾ ಯಾರು?
ಫಾತಿಮಾ ಅವರು ಮೆಕ್ಸಿಕೊದ ಟಬಾಸ್ಕೋದವರು. ಟಬಾಸ್ಕೋ ಪ್ರತಿನಿಧಿಸಿ ‘ಮಿಸ್ ಯೂನಿವರ್ಸ್ ಮೆಕ್ಸಿಕೊ’ ಗೆದ್ದ ಮೊದಲಿಗರು ಅವರಾಗಿದ್ದಾರೆ. ಈಗ ಮಿಸ್ ಯೂನಿವರ್ಸ್ ಕಿರೀಟ ಕೂಡ ಧರಿಸಿದ್ದಾರೆ. ಅವರು ಜನಿಸಿದ್ದು 2000ನೇ ಇಸ್ವಿಯಲ್ಲಿ. ಅವರಿಗೆ ಈಗಿನ್ನೂ 25 ವರ್ಷ ವಯಸ್ಸು. ಫಾತಿಮಾ ಬಾಷ್ ಅವರು ಫ್ಯಾಷನ್ ಡಿಸೈನ್ ಓದಿದ್ದಾರೆ.
ಗಾಜು ಚುಚ್ಚಿತ್ತು..
ಫಿನಾಲೆ ನಡೆಯುವುದಕ್ಕೂ ಮೊದಲು ಫಾತಿಮಾ ಹೋಟೆಲ್ನಲ್ಲಿ ಇದ್ದರು. ಈ ವೇಳೆ ಒಡೆದ ಗಾಜಿನ ಮೇಲೆ ಕಾಲಿಟ್ಟರು. ಇದರಿಂದಾಗಿ ಅವರ ಪಾದಕ್ಕೆ ಗಾಜಿನ ಚೂರು ಚುಚ್ಚಿತ್ತು. ಈ ವೇಳೆ ವೈದ್ಯಕೀಯ ಚಿಕಿತ್ಸೆಗೆ ಸಮಯ ಇರಲಿಲ್ಲ. ಗಾಯ, ವಿವಾದ ಮತ್ತು ಭಾರೀ ಸ್ಪರ್ಧೆಯ ನಡುವೆಯೂ ಫಾತಿಮಾ ಬಾಷ್ ಶಾಂತತೆ, ಸ್ಪಷ್ಟತೆಯಿಂದ ಮಿಸ್ ಯೂನಿವರ್ಸ್ ಪಟ್ಟ ಪಡೆದರು.
Esto es por y para ustedes, MÉXICO 🇲🇽 #MissUniverse
VIVA MÉXICO ✨ pic.twitter.com/cYXLce7bpn
— Fatima Bosch (@fatimaboschfdz) November 21, 2025
ವಿವಾದ ಏನು?
ಫಾತಿಮಾ ಅವರು ಈ ತಿಂಗಳ ಆರಂಭದಲ್ಲಿ ವಿವಾದ ಒಂದಕ್ಕೆ ಸಿಲುಕಿಕೊಂಡಿದ್ದರು. ನವೆಂಬರ್ 4ರಂದು ಮಿಸ್ ಯೂನಿವರ್ಸ್ ಸ್ಪರ್ಧಿಗಳೊಂದಿಗಿನ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಸೌಂದರ್ಯ ಸ್ಪರ್ಧೆಯ ಪ್ರಚಾರ ಕಾರ್ಯಕ್ರಮದಲ್ಲಿ ಫಾತಿಮಾ ಭಾಗವಹಿಸಲಿಲ್ಲ ಎಂದು ಆರೋಪಿಸಲಾಗಿತ್ತು. ಈಗ ಅವರಿಗೆ ವಿನ್ನರ್ ಪಟ್ಟ ನೀಡಿರೋದು ಚರ್ಚೆಗೆ ಕಾರಣ ಆಗಿದೆ. ಇನ್ನು, ಫೈನಲ್ ಆರಂಭಕ್ಕೂ ಒಂದು ದಿನ ಮೊದಲು ಇಬ್ಬರು ಜಡ್ಜ್ಗಳು ಸ್ಪರ್ಧೆಯಿಂದ ಹೊರ ನಡೆದಿದ್ದರು. ಸ್ಪರ್ಧೆ ನಡೆಯುವ ಮೊದಲೇ ಫೈನಲಿಸ್ಟ್ಗಳ ಹೆಸರು ಅಂತಿಮವಾಗಿತ್ತು ಎಂದು ಆರೋಪಿಸಿದ್ದಾರೆ.
ಮಾಣಿಕಾ ಹಿನ್ನೆಲೆ
ಭಾರತವನ್ನು ಪ್ರತಿನಿಧಿಸಿದ್ದ ಮಾಣಿಕಾ ಅವರು ರಾಜಸ್ಥಾನದ ಗಂಗಾನಗರದವರು. ಅವರು ರಾಜಕೀಯ ಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆಯುತ್ತಿದ್ದಾರೆ. ಅವರು ಸ್ಪರ್ಧೆಯ ಅಂತಿಮ ಹಂತಕ್ಕೆ ತಲುಪಿದ್ದರು. ಆದರೆ, ಗೆಲುವು ಸಿಕ್ಕಿಲ್ಲ. ಟಾಪ್ 30ಯಲ್ಲಿ ಇದ್ದ ಅವರು, ಟಾಪ್ 12 ರೌಂಡ್ಗೆ ಆಯ್ಕೆ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




