ಹಾರರ್ ಪ್ರಿಯರಿಗೆ ಗುಡ್​ನ್ಯೂಸ್; ಬರ್ತಿದೆ ‘ಫೈನಲ್ ಡೆಸ್ಟಿನೇಷನ್ 6’ ಸಿನಿಮಾ

‘ಫೈನಲ್ ಡೆಸ್ಟಿನೇಷನ್’ ಸಿನಿಮಾ ಮೊದಲು ರಿಲೀಸ್ ಆಗಿದ್ದು 2000ನೇ ಇಸ್ವಿಯಲ್ಲಿ. ಈ ಸರಣಿಯಲ್ಲಿ ಐದನೇ ಸಿನಿಮಾ 2011ರಲ್ಲಿ ರಿಲೀಸ್ ಆಗಿತ್ತು. 13 ವರ್ಷ ಗಳ ಬಳಿಕ ‘ಫೈನಲ್ ಡೆಸ್ಟಿನೇಷನ್​’ ಸರಣಿಯಲ್ಲಿ ಆರನೇ ಸಿನಿಮಾ ಘೋಷಣೆ ಆಗಿದೆ. ಈ ವಿಚಾರ ಹಾರರ್ ಪ್ರಿಯರ ಖುಷಿ ಹೆಚ್ಚಿಸಿದೆ. ಈ ಸಿನಿಮಾದ ಕಥೆ, ಪಾತ್ರವರ್ಗದ ಬಗ್ಗೆ ತಂಡ ರಹಸ್ಯ ಕಾಯ್ದುಕೊಂಡಿದೆ.

ಹಾರರ್ ಪ್ರಿಯರಿಗೆ ಗುಡ್​ನ್ಯೂಸ್; ಬರ್ತಿದೆ ‘ಫೈನಲ್ ಡೆಸ್ಟಿನೇಷನ್ 6’ ಸಿನಿಮಾ
ಫೈನಲ್ ಡೆಸ್ಟಿನೇಷನ್

Updated on: Mar 06, 2024 | 2:28 PM

ಚಿತ್ರರಂಗದಲ್ಲಿ ಕಾಮಿಡಿ, ಆ್ಯಕ್ಷನ್, ಸಸ್ಪೆನ್ಸ್ ಜೊತೆ ಹಾರರ್ ಸಿನಿಮಾಗಳಿಗೂ ಸಾಕಷ್ಟು ಬೇಡಿಕೆ ಇದೆ. ಒಂದು ವರ್ಗದ ಜನರು ಈ ರೀತಿಯ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಹಾಲಿವುಡ್​ನವರು ಹಾರರ್ ಸಿನಿಮಾಗಳನ್ನು ನಿರ್ಮಾಣ ಮಾಡುವಲ್ಲಿ ಮುಂದಿದ್ದಾರೆ. ಈ ಮೊದಲು ರಿಲೀಸ್ ಆದ ‘ಫೈನಲ್ ಡೆಸ್ಟಿನೇಷನ್’ (Final Destination) ಸರಣಿಯ ಐದೂ ಚಿತ್ರಗಳು ಮೆಚ್ಚುಗೆ ಪಡೆದಿವೆ. ಈ ಸರಣಿಯಲ್ಲಿ ಈಗ ಆರನೇ ಸಿನಿಮಾ ರಿಲೀಸ್ ಆಗುತ್ತಿದೆ. ಇದಕ್ಕೆ ‘ಫೈನಲ್ ಡೆಸ್ಟಿನೇಷನ್: ಬ್ಲಡಿನೆಸ್’ ಎಂದು ಶೀರ್ಷಿಕೆ ಇಡಲಾಗಿದೆ.

‘ಫೈನಲ್ ಡೆಸ್ಟಿನೇಷನ್’ ಸಿನಿಮಾ ಮೊದಲು ರಿಲೀಸ್ ಆಗಿದ್ದು 2000ನೇ ಇಸ್ವಿಯಲ್ಲಿ. ಈ ಸರಣಿಯಲ್ಲಿ ಐದನೇ ಸಿನಿಮಾ 2011ರಲ್ಲಿ ರಿಲೀಸ್ ಆಗಿತ್ತು. 13 ವರ್ಷ ಗಳ ಬಳಿಕ ‘ಫೈನಲ್ ಡೆಸ್ಟಿನೇಷನ್​’ ಸರಣಿಯಲ್ಲಿ ಆರನೇ ಸಿನಿಮಾ ಘೋಷಣೆ ಆಗಿದೆ. ಈ ವಿಚಾರ ಹಾರರ್ ಪ್ರಿಯರ ಖುಷಿ ಹೆಚ್ಚಿಸಿದೆ. ಈ ಸಿನಿಮಾದ ಕಥೆ, ಪಾತ್ರವರ್ಗದ ಬಗ್ಗೆ ತಂಡ ರಹಸ್ಯ ಕಾಯ್ದುಕೊಂಡಿದೆ. ನಿರ್ಮಾಪಕ ಕ್ರೈಗ್ ಪೆರ್ರಿ ಹಾಗೂ ಛಾಯಾಗ್ರಾಹಕ ಕ್ರಿಸ್ಚಿಯನ್ ಸೆಬಾಲ್ಟ್ ಈ ಸಿನಿಮಾ ಬಗ್ಗೆ ಅಪ್​ಡೇಟ್ ನೀಡಿದ್ದಾರೆ.

ವಿಮಾನ ಅಪಘಾತ, ರೋಲರ್ ಕೋಸ್ಟರ್ ಅಪಘಾತ, ಹೈವೇನಲ್ಲಿ ನಡೆಯೋ ಪೈಪ್​ ಅಪಘಾತ ಹೀಗೆ ದುರ್ಘಟನೆ ನಡೆಯುತ್ತಲೇ ಹೋಗುತ್ತದೆ. ಪ್ರತಿ ಸಿನಿಮಾದಲ್ಲಿ ಒಂದಷ್ಟು ಮಂದಿ ಸಾವಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಜರ್ನಿ ಸಖತ್ ರೋಮಾಂಚನಕಾರಿಯಾಗಿದೆ. ಈ ಸರಣಿಯ ಹೊಸ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: ಬಾಲ್ಯದಲ್ಲಿ ನಿಮ್ಮನ್ನು ಆಘಾತಕ್ಕೆ ತಳ್ಳಿದ ಸಿನೆಮಾ ಯಾವುದು?; ಟ್ಟಿಟ್ಟರಿಗರಿಂದ ಭಾರೀ ಪ್ರತಿಕ್ರಿಯೆ

‘ಫೈನಲ್ ಡೆಸ್ಟಿನೇಷನ್’ ಸಿನಿಮಾ ರಿಲೀಸ್ ಆಗಿ 2025ಕ್ಕೆ 25 ವರ್ಷಗಳು ಪೂರ್ಣಗೊಳ್ಳಲಿವೆ. ಮುಂದಿನ ವರ್ಷ ಸಿಗೋಣ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ‘ಫೈನಲರ್ ಡೆಸ್ಟಿನೇಷನ್: ಬ್ಲಡಿನೆಸ್’ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಬಗ್ಗೆ ಚರ್ಚೆ ಆಗುತ್ತಿದೆ. ಈ ಸಿನಿಮಾ ಎಷ್ಟು ಹಾರರ್​​ ಆಗಿರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us