ಹಿಂದಿ ಕಿರುತೆರೆಯ ಖ್ಯಾತ ನಟಿ ಮುನ್ಮುನ್ ದತ್ತ ವಿರುದ್ಧ ಮುಂಬೈನಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕಾಯ್ದೆ 1989ರ ಅಡಿಯಲ್ಲಿ ಕೇಸ್ ದಾಖಲಾಗಿದೆ. ಅಖಿಲ ಭಾರತೀಯ ಬಲಾಯಿ ಮಹಾಸಂಘ ಅಧ್ಯಕ್ಷ ಮನೋಜ್ ಅವರು ಮುನ್ಮುನ್ ದತ್ತ ವಿರುದ್ಧ ದೂರು ನೀಡಿದ್ದರು. ನಟಿಯ ವಿರುದ್ಧ ಅನೇಕ ಕಡೆಗಳಲ್ಲಿ ದೂರು ಸಲ್ಲಿಕೆ ಆಗಿರುವುದರಿಂದ ಮಧ್ಯಪ್ರದೇಶ ಮತ್ತು ಹರಿಯಾಣದಲ್ಲೂ ಎಫ್ಐಆರ್ ದಾಖಲು ಮಾಡಲಾಗಿದೆ. ಈ ಮೂಲಕ ಮುನ್ಮುನ್ ದತ್ತ ಪೇಚಿಗೆ ಸಿಲುಕಿದಂತಾಗಿದೆ.
‘ತಾರಕ್ ಮೆಹ್ತಾ ಕಾ ಉಲ್ಟಾ ಚಸ್ಮಾ’ಧಾರಾವಾಹಿಯ ಬಬಿತಾ ಪಾತ್ರದ ಮೂಲಕ ಮುನ್ಮುನ್ ದತ್ತ ಹೆಚ್ಚು ಫೇಮಸ್. ಕೆಲವೇ ದಿನಗಳ ಹಿಂದೆ ಅವರ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಮುನ್ಮುನ್ ದತ್ ಅವರು ಜಾತಿ ನಿಂದನೆಯ ಪದವನ್ನು ಬಳಕೆ ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅವರ ವಿರುದ್ಧ ಜನರು ಆಕ್ರೋಶ ವ್ಯಕ್ತ ಪಡಿಸಿದ್ದರು.
ಯೂಟ್ಯೂಬ್ ವಿಡಿಯೋದಲ್ಲಿ ತಮ್ಮ ಮೇಕಪ್ ಬಗ್ಗೆ ಮುನ್ಮುನ್ ದತ್ತ ಮಾಹಿತಿ ನೀಡುತ್ತಿದ್ದರು. ‘ಯೂಟ್ಯೂಬ್ನಲ್ಲಿ ಎಲ್ಲರ ಎದುರಿಗೆ ಬರುತ್ತಿದ್ದೇನೆ. ಚೆನ್ನಾಗಿ ಕಾಣಬೇಕು ಅಂತ ಸ್ವಲ್ಪ ಮೇಕಪ್ ಮಾಡಿಕೊಂಡಿದ್ದೇನೆ. ಆ ಜಾತಿಯವರ ರೀತಿ ಕಾಣಲು ನನಗೆ ಇಷ್ಟ ಇಲ್ಲ’ಎಂದು ಒಂದು ನಿರ್ದಿಷ್ಟ ಜಾತಿಯ ಹೆಸರು ಹೇಳಿದ್ದರು. ಅವರು ಆ ಜಾತಿ ಹೆಸರು ಬಳಸಿದ್ದರಿಂದಲೇ ವಿವಾದ ಭುಗಿಲೆದ್ದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಮುನ್ಮುನ್ ದತ್ತ ಅವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದರು.
#ArrestMunmunDutta
Request @NCSC_GoI @thevijaysampla sir to please take Cognizance so that @moonstar4u to be booked immediately in #SCSTAct pic.twitter.com/NfTd3zthFc— Mohinder Pal Chalia (@mpchalia) May 10, 2021
ತಮ್ಮ ಹೇಳಿಕೆಯಿಂದ ವಿವಾದ ಆಗುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಮುನ್ಮುನ್ ದತ್ತ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದರು. ‘ಯಾರಿಗೂ ನೋವು ಮಾಡಬೇಕು ಎಂಬ ಉದ್ದೇಶದಿಂದ ನಾನು ಆ ಪದ ಬಳಸಿರಲಿಲ್ಲ. ನನ್ನ ಭಾಷೆಯ ಮಿತಿಯಿಂದಾಗಿ ಆ ಪದದ ಸರಿಯಾದ ಅರ್ಥ ನನಗೆ ತಿಳಿದಿರಲಿಲ್ಲ. ಎಲ್ಲರ ಜಾತಿ, ಧರ್ಮ, ಜನಾಂಗದ ಬಗ್ಗೆ ನಾನು ಗೌರವ ಹೊಂದಿದ್ದೇನೆ. ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ’ಎಂದು ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದರು.
— Munmun Dutta (@moonstar4u) May 10, 2021
ನಟಿಯ ಈ ಬಣ್ಣದ ಮಾತುಗಳಿಂದ ಯಾರೂ ರಾಜಿ ಆಗಿಲ್ಲ. ಮಾಡಿದ ತಪ್ಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಎಫ್ಐಆರ್ ದಾಖಲಾಗುವವರೆಗೂ ಜನರು ಹೋರಾಟ ಮಾಡಿದ್ದಾರೆ. ಒಟ್ಟಾರೆ ಈ ವಿವಾದ ಮುನ್ಮುನ್ ದತ್ತ ಅವರ ವೃತ್ತಿಜೀವನದಲ್ಲೊಂದು ಕಪ್ಪು ಚುಕ್ಕಿ ಆದಂತಾಗಿದೆ.
ಇದನ್ನೂ ಓದಿ:
ಜಾತಿ ನಿಂದನೆ ಆರೋಪ: ಪತಿಯ ಬಂಧನ ಖಂಡಿಸಿ ಧರಣಿಗೆ ಕೂತ ಮಹಿಳೆ ಪೊಲೀಸರ ವಶಕ್ಕೆ
ಜಾತಿ ನಿಂದನೆ ಆರೋಪ: ಕ್ರಿಕೆಟಿಗ ಯುವರಾಜ್ ಸಿಂಗ್ ವಿರುದ್ಧ 8 ತಿಂಗಳ ನಂತರ ದಾಖಲಾಯ್ತು FIR