ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ಗೆ ಗೆಲ್ಲೋಕೆ ಉಳಿದಿರೋದು ಒಂದೇ ಮಾರ್ಗ

|

Updated on: Jan 02, 2025 | 1:27 PM

ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಚಿತ್ರದಲ್ಲಿ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಇತ್ತೀಚಿನ ಸೋಲುಗಳ ನಂತರ ಶಂಕರ್ ಅವರ ಮೇಲಿನ ನಿರೀಕ್ಷೆ ಕುಸಿದಿದೆ. ಚಿತ್ರದ ಟ್ರೇಲರ್‌ನಿಂದ ಚಿತ್ರದ ಭವಿಷ್ಯ ನಿರ್ಧಾರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಜನವರಿ10 ರಂದು ಚಿತ್ರ ಬಿಡುಗಡೆಯಾಗುತ್ತಿದೆ.

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ಗೆ ಗೆಲ್ಲೋಕೆ ಉಳಿದಿರೋದು ಒಂದೇ ಮಾರ್ಗ
ಗೇಮ್ ಚೇಂಜರ್
Follow us on

ಶಂಕರ್ ನಿರ್ದೇಶನದ ಸಿನಿಮಾಗಳು ಎಂದರೆ ಫ್ಯಾನ್ಸ್ ತುದಿಗಾಲಲ್ಲಿ ಕಾಯುತ್ತಿದ್ದ ಕಾಲ ಒಂದಿತ್ತು. ಆದರೆ, ಇತ್ತೀಚೆಗೆ ಅವರು ಹೈಪ್ ಕಳೆದುಕೊಂಡಿದ್ದಾರೆ. ಅದರಲ್ಲೂ ‘ಇಂಡಿಯನ್ 2’ ಸೋತ ಬಳಿಕ ಅವರ ಮೇಲೆ ಇರುವ ನಿರೀಕ್ಷೆ ಸಂಪೂರ್ಣ ಮಾಸಿ ಹೋದಂತೆ ಆಗಿದೆ. ಈ ಕಾರಣದಿಂದಲೇ ಅವರು ನಿರ್ದೇಶನ ಮಾಡುತ್ತಿರುವ ‘ಗೇಮ್ ಚೇಂಜರ್’ ಸಿನಿಮಾ ಬಗ್ಗೆ ಹೆಚ್ಚು ಟಾಕ್ ಇಲ್ಲ. ರಾಮ್ ಚರಣ್ ಹಾಗೂ ಕಿಯಾರಾ ಅಡ್ವಾಣಿ ಚಿತ್ರದಲ್ಲಿ ನಟಿಸಿದ ಹೊರತಾಗಿಯೂ ಚಿತ್ರಕ್ಕೆ ಬೇಡಿಕೆ ಇಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಈಗ ಸಿನಿಮಾ ಗೆಲ್ಲೋಕೆ ಇರೋದು ಒಂದೇ ಮಾರ್ಗ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ರಾಮ್ ಚರಣ್ ಅವರು ‘ಆರ್​ಆರ್​ಆರ್​’ ಸಿನಿಮಾ ಬಳಿಕ ‘ಗೇಮ್ ಚೇಂಜರ್’ ಚಿತ್ರದಲ್ಲಿ ತೊಡಗಿಕೊಂಡರು. ಹಲವು ಹಂತಗಳಲ್ಲಿ ಸಿನಿಮಾದ ಶೂಟ್ ನಡೆಯಿತು. ಕರ್ನಾಟಕದ ಮೈಸೂರಿನಲ್ಲಿಯೂ ಚಿತ್ರಕ್ಕೆ ಶೂಟಿಂಗ್ ಮಾಡಲಾಗಿದೆ ಅನ್ನೋದು ವಿಶೇಷ. ಈ ಚಿತ್ರದ ಟ್ರೇಲರ್ ಇಂದು (ಡಿಸೆಂಬರ್ 2) ಸಂಜೆ 5 ಗಂಟೆ 4 ನಿಮಿಷಕ್ಕೆ ರಿಲೀಸ್ ಆಗಲಿದೆ. ಈ ಚಿತ್ರದ ಟ್ರೇಲರ್​ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರ ಆಗಿದೆ ಎಂಬುದು ಅನೇಕರ ಅಭಿಪ್ರಾಯ.

‘ಗೇಮ್ ಚೇಂಜರ್’ ಸಿನಿಮಾದ ಕೆಲವು ಸಾಂಗ್​ಗಳು ರಿಲೀಸ್ ಆಗಿವೆ. ಆದರೆ, ಅವುಗಳು ಅಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಸಾಧ್ಯವಾಗಿಲ್ಲ. ‘ಪುಷ್ಪ 2’ ಚಿತ್ರ ರಿಲೀಸ್ ಆಗುವುದಕ್ಕೂ ಮೊದಲು ದೊಡ್ಡ ಮಟ್ಟದ ಟಾಕ್ ಇತ್ತು. ಆದರೆ, ಆ ರೀತಿಯ ಟಾಕ್ ‘ಗೇಮ್ ಚೇಂಜರ್’ ಚಿತ್ರಕ್ಕೆ ಸಿಗುತ್ತಿಲ್ಲ. ಒಂದೊಮ್ಮೆ ಟ್ರೇಲರ್ ಪವರ್​ಫುಲ್ ಆಗಿದ್ದರೆ ಮಾತ್ರ ಸಿನಿಮಾಗೆ ಹೈಪ್ ಸೃಷ್ಟಿ ಆಗಲಿದೆ ಎಂಬುದು ಅನೇಕರ ಅಭಿಪ್ರಾಯ.

ಇದನ್ನೂ ಓದಿ: ಗೇಮ್ ಚೇಂಜರ್: 256 ಅಡಿ ಎತ್ತರದ ಕಟೌಟ್ ನಿಲ್ಲಿಸಿ ದಾಖಲೆ ಮಾಡಿದ ರಾಮ್ ಚರಣ್ ಫ್ಯಾನ್ಸ್

‘ಗೇಮ್ ಚೇಂಜರ್’ ಸಿನಿಮಾ ಜನವರಿ 10ರಂದು ಬಿಡುಗಡೆ ಕಾಣುತ್ತಿದೆ. ಆದರೆ, ಈಗಿರುವ ಪರಿಸ್ಥಿತಿ ನೋಡಿದರೆ ಚಿತ್ರ ಸಣ್ಣ ಓಪನಿಂಗ್ ಪಡೆಯಬಹುದು ಎನ್ನಲಾಗುತ್ತಿದೆ. ಟ್ರೇಲರ್ ಈ ಚಿತ್ರದ ಭವಿಷ್ಯವನ್ನು ಬದಲಿಸಬಹುದೇ ಎನ್ನುವ ಕುತೂಹಲ ಮೂಡಿದೆ.

‘ಗೇಮ್ ಚೇಂಜರ್’ ಸಿನಿಮಾ ಕೆಲಸಗಳು ಸಾಕಷ್ಟು ವಿಳಂಬ ಆಗಿದೆ. ಚಿತ್ರದ ಮೇಲೆ ಇದು ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. ಸಿನಿಮಾ ಉತ್ತಮವಾಗಿ ಮೂಡಿ ಬರಲಿ ಎಂಬುದು ಫ್ಯಾನ್ಸ್ ಕೋರಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:54 pm, Thu, 2 January 25