AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡ್ಯಾನ್ಸರ್​’ ಟೈಟಲ್ ನೋಂದಣಿ ಮಾಡಿಸಿದ ಗೀತಾ ಆರ್ಟ್ಸ್​; ಅಲ್ಲು ಅರ್ಜುನ್-ಹೃತಿಕ್ ಮಧ್ಯೆ ಯಾರ ಆಯ್ಕೆ?

ಗೀತಾ ಆರ್ಟ್ಸ್​ ತೆಲುಗು ಫಿಲ್ಮ್​ ಚೇಂಬರ್​ನಲ್ಲಿ ‘ಡ್ಯಾನ್ಸರ್​’ ಟೈಟಲ್​ನ ನೋಂದಣಿ ಮಾಡಿಸಿದ ವಿಚಾರ ಲೀಕ್ ಆಗಿದೆ. ಇದು ಡ್ಯಾನ್ಸ್ ಕುರಿತ ಸಿನಿಮಾ ಅನ್ನೋದನ್ನು ಶೀರ್ಷಿಕೆಯೇ ಹೇಳುತ್ತಿದೆ.

‘ಡ್ಯಾನ್ಸರ್​’ ಟೈಟಲ್ ನೋಂದಣಿ ಮಾಡಿಸಿದ ಗೀತಾ ಆರ್ಟ್ಸ್​; ಅಲ್ಲು ಅರ್ಜುನ್-ಹೃತಿಕ್ ಮಧ್ಯೆ ಯಾರ ಆಯ್ಕೆ?
ಅಲ್ಲು ಅರ್ಜುನ್-ಹೃತಿಕ್
ರಾಜೇಶ್ ದುಗ್ಗುಮನೆ
|

Updated on: Mar 31, 2023 | 6:30 AM

Share

ಟಾಲಿವುಡ್​ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಗೀತಾ ಆರ್ಟ್ಸ್ (Geetha Arts) ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಈ ನಿರ್ಮಾಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಈಗ ಅವರು ‘ಡ್ಯಾನ್ಸರ್​’ ಟೈಟಲ್ (Dance Title) ನೋಂದಣಿ ಮಾಡಿಸಿದ್ದಾರೆ. ಈ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಹೀರೋ ಆಗಿ ನಟಿಸೋದು ಯಾರು ಎನ್ನುವ ಪ್ರಶ್ನೆ ಮೂಡಿದೆ. ಕೆಲವರು ಅಲ್ಲು ಅರ್ಜುನ್ ಹೆಸರನ್ನು ಹೇಳಿದರೆ, ಇನ್ನೂ ಕೆಲವರು ಹೃತಿಕ್ ಅವರನ್ನು ಆಯ್ಕೆ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ.

ಗೀತಾ ಆರ್ಟ್ಸ್​ ತೆಲುಗು ಫಿಲ್ಮ್​ ಚೇಂಬರ್​ನಲ್ಲಿ ‘ಡ್ಯಾನ್ಸರ್​’ ಟೈಟಲ್​ನ ನೋಂದಣಿ ಮಾಡಿಸಿದ ವಿಚಾರ ಲೀಕ್ ಆಗಿದೆ. ಇದು ಡ್ಯಾನ್ಸ್ ಕುರಿತ ಸಿನಿಮಾ ಅನ್ನೋದನ್ನು ಶೀರ್ಷಿಕೆಯೇ ಹೇಳುತ್ತಿದೆ. ಈ ಚಿತ್ರದಲ್ಲಿ ಯಾರು ನಟಿಸಲಿದ್ದಾರೆ ಎನ್ನುವ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ರಿವೀಲ್ ಆಗಬೇಕಿದೆ.

ಹೃತಿಕ್ ರೋಷನ್ ಅವರು ಚಂದು ಮೊಂಡೇಟಿ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾಗಾಗಿ ಈ ಶೀರ್ಷಿಕೆ ನೋಂದಣಿ ಮಾಡಿಸಲಾಗಿದೆ ಎಂದು ಕೆಲವರು ಹೇಳಿದ್ದಾರೆ. ಅಲ್ಲು ಅರ್ಜುನ್​ ಚಿತ್ರಕ್ಕೆ ಗೀತಾ ಆರ್ಟ್ಸ್ ಬಂಡವಾಳ ಹೂಡುತ್ತಿದೆ. ಇದಕ್ಕಾಗಿ ಈ ಟೈಟಲ್ ನೋಂದಣಿ ಆಗಿದೆ ಎಂಬ ವರದಿ ಕೂಡ ಇದೆ. ಈ ವಿಚಾರದಲ್ಲಿ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಇದನ್ನೂ ಓದಿ: Kangana Ranaut: ಹೃತಿಕ್​ ರೋಷನ್​ಗೆ ನಟನೆ ಬರಲ್ಲ ಎಂದು ನೇರವಾಗಿ ಹೇಳಿದ ಕಂಗನಾ​; ತಿರುಗೇಟು ನೀಡಿದ ಫ್ಯಾನ್ಸ್​  

ಅಲ್ಲು ಅರ್ಜುನ್ ಅವರು ‘ಪುಷ್ಪ’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈಗ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸುಕುಮಾರ್ ಅವರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ದೊಡ್ಡ ಬಜೆಟ್​ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಈ ಸಿನಿಮಾ ಈ ವರ್ಷ ತೆರೆಗೆ ಬರೋದು ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ:

ಇನ್ನು, ಹೃತಿಕ್ ರೋಷನ್ ಅವರು ‘ಫೈಟರ್​’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ದೀಪಿಕಾ ಪಡುಕೋಣೆ ಚಿತ್ರದ ನಾಯಕಿ. ಕಳೆದ ವರ್ಷ ರಿಲೀಸ್ ಆದ ಅವರ ನಟನೆಯ ‘ವಿಕ್ರಂ ವೇದ’ ಸಿನಿಮಾ ಫ್ಲಾಪ್ ಆಯಿತು. ತಮಿಳಿನಲ್ಲಿ ಹಿಟ್ ಆದ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲಾಯಿತು. ಆದರೆ, ಸಿನಿಮಾ ಬಾಲಿವುಡ್ ಮಂದಿಗೆ ಇಷ್ಟವಾಗಲೇ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ