Genelia Deshmukh: ಮತ್ತೆ ಕಂಬ್ಯಾಕ್ ಮಾಡೋಕೆ ಜೆನಿಲಿಯಾ ರೆಡಿ; ಪತಿ ರಿತೇಶ್ ಏನಂದ್ರು?
Genelia D'Souza: ಜೆನಿಲಿಯಾ ಎರಡು ಮಕ್ಕಳ ತಾಯಿ ಆದರೂ ಅವರು ಫಿಟ್ನೆಸ್ ಕಳೆದುಕೊಂಡಿಲ್ಲ. ನಿತ್ಯ ಜಿಮ್ ಮಾಡುತ್ತಾರೆ. ಈ ಮೂಲಕ ತಮ್ಮ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ.
ನಟಿ ಜೆನಿಲಿಯಾ ಡಿಸೋಜಾ 2012ರಲ್ಲಿ ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರನ್ನು ಮದುವೆ ಆಗಿದ್ದರು. ಅದಾದ ನಂತರ ಅವರು ಕೆಲವೇ ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡಿದ್ದು ಬಿಟ್ಟರೆ ಮತ್ತಾವುದೇ ಚಿತ್ರಗಳಲ್ಲಿ ಜೆನಿಲಿಯಾ ಬಣ್ಣ ಹಚ್ಚಿಲ್ಲ. ಈಗ ಅವರು ಕಂಬ್ಯಾಕ್ ಮಾಡೋಕೆ ರೆಡಿ ಆಗಿದ್ದಾರೆ! ಈ ವಿಚಾರ ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ.
ಜೆನಿಲಿಯಾ ಮದುವೆ ಆಗಿ ಸುಮಾರು 9 ವರ್ಷ ಕಳೆದಿದೆ. ಜೆನಿಲಿಯಾ ಹಾಗೂ ರಿತೇಶ್ ಜೋಡಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಜೆನಿಲಿಯಾ ಹಾಗೂ ರಿತೇಶ್ ಸಾಕಷ್ಟು ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಿದೆ. ಈಗ ಅವರು ಸಿನಿಮಾ ಕ್ಷೇತ್ರದಲ್ಲಿ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸೋಕೆ ರೆಡಿ ಆಗಿದ್ದಾರೆ.
ಜೆನಿಲಿಯಾ ಚಿತ್ರರಂಗಕ್ಕೆ ಮರಳಬೇಕು ಎನ್ನುವ ಹಂಬಲವನ್ನು ಪತಿ ರಿತೇಶ್ ಬಳಿ ವ್ಯಕ್ತಪಡಿಸಿದ್ದಳು. ಇದಕ್ಕೆ ರಿತೇಶ್ ಕೂಡ ಒಕೆ ಎಂದಿದ್ದಾರೆ. ಹೀಗಾಗಿ ಉತ್ತಮ ಕಥೆ ಸಿಕ್ಕರೆ ಅವರು ಮತ್ತೆ ನಟನೆಗೆ ಕಂಬ್ಯಾಕ್ ಮಾಡಲಿದ್ದಾರೆ.
ನಟಿ ಜೆನಿಲಿಯಾ ಹಿಂದಿ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ನಟಿಸಿದ್ದಾರೆ. ತೆಲುಗು ಚಿತ್ರರಂಗ ಅವರ ಸಿನೆಮಾ ಕೆರಿಯರ್ಗೆ ದೊಡ್ಡ ಬ್ರೇಕ್ ನೀಡಿತ್ತು. ಹೀಗಾಗಿ, ಈಗ ಅವರು ಹಿಂದಿ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡುತ್ತಾರೋ ಅಥವಾ ತೆಲುಗು ಚಿತ್ರರಂಗದ ಮೂಲಕವೋ ಎನ್ನುವುದನ್ನು ಕಾದು ನೋಡಬೇಕಿದೆ.
ಜೆನಿಲಿಯಾ ಎರಡು ಮಕ್ಕಳ ತಾಯಿ ಆದರೂ ಅವರು ಫಿಟ್ನೆಸ್ ಕಳೆದುಕೊಂಡಿಲ್ಲ. ನಿತ್ಯ ಜಿಮ್ ಮಾಡುತ್ತಾರೆ. ಈ ಮೂಲಕ ತಮ್ಮ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಹೀಗಾಗಿ, ಅವರು ಚಿತ್ರರಂಗಕ್ಕೆ ಮರಳೋಕೆ ಸಾಕಷ್ಟು ಉತ್ಸುಕರಾಗಿದ್ದಾರಂತೆ.
ಇದನ್ನೂ ಓದಿ: ನಟ ಕಿಚ್ಚ ಸುದೀಪ್ ಮನೆಯಲ್ಲಿ ಭೋಜನ ಸವಿದ ಬಾಲಿವುಡ್ ಕ್ಯೂಟ್ ಕಪಲ್
Published On - 7:44 pm, Thu, 6 May 21