ಅಲ್ಲು ಅರ್ಜುನ್ ಜೊತೆಗಿನ ‘ಪುಷ್ಪ’ ಮತ್ತು ಸಂದೀಪ್ ರೆಡ್ಡಿ ವಂಗ ನಿರ್ದೇಶನದ ‘ಅನಿಮಲ್’ ಸೇರಿದಂತೆ ಕೆಲವು ಪ್ಯಾನ್-ಇಂಡಿಯನ್ ಸಿನಿಮಾಗಳ ಯಶಸ್ಸಿನಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ತೇಲುತ್ತಿದ್ದಾರೆ. ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡು ಯಶಸ್ಸಿನ ಉತ್ತುಂಗದಲ್ಲಿ ಇರುವ ಅವರು ಈಗ ‘ಪುಷ್ಪ 2’ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಆ ಸಿನಿಮಾ ತೆರೆಕಂಡ ಬಳಿಕ ಅವರು ಧನುಷ್ ಜೊತೆ ‘ಕುಬೇರ’ ಸಿನಿಮಾದಲ್ಲಿ ಬ್ಯುಸಿ ಆಗಲಿದ್ದಾರೆ. ಅದಕ್ಕೂ ಮುನ್ನ ಟಾಲಿವುಡ್ನಲ್ಲಿ ಸೋಲೋ ಸಿನಿಮಾ ಬಗ್ಗೆ ಗಮನ ಹರಿಸಲು ರಶ್ಮಿಕಾ ಮಂದಣ್ಣ ನಿರ್ಧರಿಸಿದ್ದಾರೆ. ರಶ್ಮಿಕಾ ನಟನೆಯ ‘ಗರ್ಲ್ಫ್ರೆಂಡ್’ (Girlfriend) ಸಿನಿಮಾದಿಂದ ಬರ್ತ್ಡೇ (Rashmika Mandanna Birthday) ಗಿಫ್ಟ್ ಸಿಗುವ ನಿರೀಕ್ಷೆ ಇದೆ.
ರಶ್ಮಿಕಾ ಮಂದಣ್ಣ ಅವರ ಜನ್ಮದಿನ ಸಮೀಪಿಸಿದೆ. ಏಪ್ರಿಲ್ 5ರಂದು ಅವರು ಬರ್ತ್ಡೇ ಆಚರಿಸಿಕೊಳ್ಳಲಿದ್ದಾರೆ. ತಮ್ಮ ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲು ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ತಯಾರಿ ಮಾಡಿಕೊಳ್ಳುತ್ತಿದಾರೆ. ಅವರು ನಟಿಸುತ್ತಿರುವ ಸಿನಿಮಾಗಳಿಂದ ವಿಶೇಷ ಪೋಸ್ಟರ್ಗಳು ಬಿಡುಗಡೆ ಆಗುವ ಸಾಧ್ಯತೆ ಹೆಚ್ಚಿದೆ.
ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ‘ಗರ್ಲ್ಫ್ರೆಂಡ್’ ಸಿನಿಮಾದ ಟೀಸರ್. ವರದಿಗಳ ಪ್ರಕಾರ, ‘ಗರ್ಲ್ಫ್ರೆಂಡ್’ ಸಿನಿಮಾ ತಂಡದಿಂದ ಹೊಸ ಟೀಸರ್ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದು ಆಕ್ಷನ್ ಭರಿತ ಲವ್ ಸ್ಟೋರಿ ಸಿನಿಮಾ ಎಂಬ ಸುದ್ದಿ ಇದೆ. ಏಪ್ರಿಲ್ 5ರಂದು ಈ ಸಿನಿಮಾದ ಟೀಸರ್ ಬಿಡುಗಡೆ ಆದರೆ ಆಗ ಕಥಾಹಂದರದ ಬಗ್ಗೆ ಒಂದು ಸುಳಿವು ಸಿಕ್ಕಂತಾಗಲಿದೆ. ಈ ಸಿನಿಮಾ ದಕ್ಷಿಣದ ಎಲ್ಲ ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ‘ಪುಷ್ಪ 2’ ಚಿತ್ರದ ಶ್ರೀವಲ್ಲಿ ಲುಕ್ ಲೀಕ್; ರಶ್ಮಿಕಾ ನೋಡಲು ಮುಗಿಬಿದ್ದ ಫ್ಯಾನ್ಸ್
ಏಪ್ರಿಲ್ 5ರಂದು ರಶ್ಮಿಕಾ ಮಂದಣ್ಣ ಅವರನ್ನು ಭೇಟಿಯಾಗಿ ಹುಟ್ಟುಹಬ್ಬದ ಶುಭಾಶಯ ಕೋರಬೇಕು ಎಂಬುದು ಅಭಿಮಾನಿಗಳ ಆಸೆ. ಆದರೆ ಅದು ಈಡೇರುವುದು ಕಷ್ಟ. ಯಾಕೆಂದರೆ, ಅಂದು ರಶ್ಮಿಕಾ ಮಂದಣ್ಣ ಅವರು ಭಾರತದಲ್ಲಿ ಇರುವುದಿಲ್ಲ ಎನ್ನಲಾಗುತ್ತಿದೆ. ಸಣ್ಣ ಬ್ರೇಕ್ ಪಡೆದು ಅವರು ವಿದೇಶಕ್ಕೆ ಹಾರಲಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಟೀಸರ್ ಹಂಚಿಕೊಳ್ಳಲಿದ್ದು, ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲಿದ್ದಾರೆ ಎಂದು ಸುದ್ದಿ ಆಗಿದೆ.
ಇದನ್ನೂ ಓದಿ: ‘ಇನ್ಮುಂದೆ ಇಂಥ ವಿಡಿಯೋ ಜಾಸ್ತಿ ನೋಡುತ್ತೀರಿ’; ಸ್ಫೂರ್ತಿ ನೀಡಲು ಮುಂದಾದ ರಶ್ಮಿಕಾ
ವಿದೇಶದಲ್ಲೂ ರಶ್ಮಿಕಾ ಮಂದಣ್ಣ ಅವರಿಗೆ ಅಭಿಮಾನಿಗಳು ಇದ್ದಾರೆ. ಕೆಲವೇ ವಾರಗಳ ಹಿಂದೆ ಅವರು ಜಪಾನ್ಗೆ ತೆರಳಿದ್ದರು. ಅಲ್ಲಿನ ಅಭಿಮಾನಿಗಳನ್ನು ಭೇಟಿಯಾಗಿ ಖುಷಿಪಟ್ಟಿದ್ದರು. ‘ಪುಷ್ಪ 2’ ಸಿನಿಮಾ ಬಿಡುಗಡೆ ಆದ ಬಳಿಕ ಅವರ ಫ್ಯಾನ್ ಫಾಲೋಯಿಂಗ್ ಹಿರಿದಾಗಲಿದೆ. ಈ ಸಿನಿಮಾಗಾಗಿ ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.