ವೆಬ್ ಸೀರಿಸ್ ಆಗಿ ಬರಲಿದೆ ‘ಸ್ಟುಡೆಂಟ್ ಆಫ್ ದಿ ಇಯರ್ 3’; ಈ ಬಾರಿ ಲಾಂಚ್ ಆಗೋದು ಯಾವ ಸ್ಟಾರ್ ಕಿಡ್?
ರೀಮಾ ಮಾಯ ಅವರು ‘ಸ್ಟುಡೆಂಟ್ ಆಫ್ ದಿ ಇಯರ್ 3’ ಸೀರಿಸ್ನ ನಿರ್ದೇಶನ ಮಾಡಲಿದ್ದಾರೆ. ಸದ್ಯ ಪಾತ್ರವರ್ಗದ ಬಗ್ಗೆ ಯಾವ ವಿಚಾರವೂ ರಿವೀಲ್ ಆಗಿಲ್ಲ. ‘ಸ್ಟುಡೆಂಟ್ ಆಫ್ ದಿ ಇಯರ್’ ಫ್ರಾಂಚೈಸ್ ಮೂಲಕ ಹಲವು ಸೆಲೆಬ್ರಿಟಿ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಲಾಗಿದೆ.
ಇತ್ತೀಚೆಗೆ ವೆಬ್ ಸೀರಿಸ್ ಟ್ರೆಂಡ್ ಸೀರಿಸ್ ಜೋರಾಗಿದೆ. ಅನೇಕ ಕಥೆಗಳನ್ನು ವೆಬ್ ಸೀರಿಸ್ ಮಾಡಿ ಪ್ರೇಕ್ಷಕರ ಎದುರು ಇಡಲಾಗುತ್ತಿದೆ. ಹಿಟ್ ಸರಣಿ ಎನಿಸಿಕೊಂಡಿರುವ ‘ಸ್ಟುಡೆಂಟ್ ಆಫ್ ದಿ ಇಯರ್’ನ ಮೂರನೇ ಪಾರ್ಟ್ನ ಈಗ ವೆಬ್ ಸೀರಿಸ್ ಮಾಡಲು ಕರಣ್ ಜೋಹರ್ ಮುಂದಾಗಿದ್ದಾರೆ. ಚಂಡೀಘಡದಲ್ಲಿ ನಡೆದ ಫಿಲ್ಮ್ ಫೆಸ್ಟಿವಲ್ನಲ್ಲಿ ಈ ವಿಚಾರವನ್ನು ಕರಣ್ ಜೋಹರ್ (Karan Johar) ರಿವೀಲ್ ಮಾಡಿದ್ದಾರೆ.
ರೀಮಾ ಮಾಯ ಅವರು ‘ಸ್ಟುಡೆಂಟ್ ಆಫ್ ದಿ ಇಯರ್ 3’ ಸೀರಿಸ್ನ ನಿರ್ದೇಶನ ಮಾಡಲಿದ್ದಾರೆ. ಸದ್ಯ ಪಾತ್ರವರ್ಗದ ಬಗ್ಗೆ ಯಾವ ವಿಚಾರವೂ ರಿವೀಲ್ ಆಗಿಲ್ಲ. ‘ಸ್ಟುಡೆಂಟ್ ಆಫ್ ದಿ ಇಯರ್’ ಫ್ರಾಂಚೈಸ್ ಮೂಲಕ ಹಲವು ಸೆಲೆಬ್ರಿಟಿ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಲಾಗಿದೆ. ಈಗ ಈ ಸೀರಿಸ್ ಮೂಲಕ ಮತ್ತಷ್ಟು ಸೆಲೆಬ್ರಿಟಿ ಮಕ್ಕಳು ಚಿತ್ರರಂಗಕ್ಕೆ ಬರಲಿದ್ದಾರೆ ಎನ್ನಲಾಗಿದೆ.
‘ರೀಮಾ ಮಾಯ ಅವರು ಸ್ಟುಡೆಂಟ್ ಆಫ್ ದಿ ಇಯರ್ನ ಡಿಜಿಟಲ್ ವರ್ಷನ್ ನಿರ್ದೇಶನ ಮಾಡಲಿದ್ದಾರೆ. ಇದು ಅವರ ನಿರ್ದೇಶನದ ರೀತಿಯಲ್ಲಿ ಇರುತ್ತದೆ. ಇಲ್ಲಿ ನನ್ನ ಹಸ್ತಕ್ಷೇಪ ಇರುವುದಿಲ್ಲ. ನಾನು ರೀನಾ ಅವರ ಜಗತ್ತಿಗೆ ಕಾಲಿಡುತ್ತಿದ್ದೇನೆ. ನಾನು ಅವರ ಧ್ವನಿ ಆಗುತ್ತೇನೆ’ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ‘ಸ್ಟುಡೆಂಟ್ ಆಫ್ ದಿ ಇಯರ್ 3’ ಬಗ್ಗೆ ವರದಿ ಆಗಿತ್ತು. ಧರ್ಮ ಎಂಟರ್ಟೇನ್ಮೆಂಟ್ ಹಾಗೂ ಈ ಸಿನಿಮಾ ನಿರ್ಮಾಣ ಮಾಡಲಿದೆ, ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಇದು ಪ್ರಸಾರ ಕಾಣಲಿದೆ ಎಂದು ವರದಿ ಆಗಿತ್ತು. ಆದರೆ, ಈಗ ಇದು ಸಿನಿಮಾ ಅಲ್ಲ ಸರಣಿ ಎನ್ನುವ ವಿಚಾರ ರಿವೀಲ್ ಆಗಿದೆ.
ಇದನ್ನೂ ಓದಿ: ಆದಿತ್ಯ ರಾಯ್ ಕಪೂರ್-ಅನನ್ಯಾ ಪಾಂಡೆ ಮದುವೆ ಆದ್ರೆ ಇವರ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ ಆಗುತ್ತೆ?
ಸಂಜಯ್ ಕಪೂರ್ ಹಾಗೂ ಮಹೀಪ್ ಕಪೂರ್ ಮಗಳು ಶನಾಯಾ ಕಪೂರ್ ಚಿತ್ರರಂಗಕ್ಕೆ ಕಾಲಿಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅವರನ್ನು ಮುಖ್ಯವಾಗಿ ಪರಿಚಯಿಸುವ ಆಲೋಚನೆ ಕರಣ್ ಜೋಹರ್ ಅವರಿಗೆ ಇದೆಯಂತೆ ‘ಸ್ಟುಡೆಂಟ್ ಆಫ್ ದಿ ಇಯರ್’ ಸಿನಿಮಾ ಮೂಲಕ ಆಲಿಯಾ ಭಟ್, ವರುಣ್ ಧವನ್, ಸಿದ್ದಾರ್ಥ್ ಮಲ್ಹೋತ್ರ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಎರಡನೇ ಸರಣಿಯಲ್ಲಿ ಅನನ್ಯಾ ಪಾಂಡೆ, ತಾರಾ ಸುನಾರಿಯಾ ನಟಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ