ದಳಪತಿ ವಿಜಯ್ ನಟನೆಯ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ (GOAT) ಚಿತ್ರದ ಗಳಿಕೆ ದಿನ ಕಳೆದಂತೆ ಇಳಿಕೆ ಕಾಣುತ್ತಿದೆ. ಸಿನಿಮಾ ನೋಡಲು ಹೋಗಿ ಕುರಿ (GOAT) ಆದವರು ನಾವು ಎನ್ನುವ ಅಭಿಪ್ರಾಯವನ್ನು ಕೆಲವರು ಹೊರಹಾಕುತ್ತಿದ್ದಾರೆ. ಈ ಚಿತ್ರದ ಗಳಿಕೆ ದಿನ ಕಳೆದಂತೆ ಕುಗ್ಗುತ್ತಿದೆ. ವೀಕೆಂಡ್ನಲ್ಲಾದರೂ ಸಿನಿಮಾ ಒಳ್ಳೆಯ ರೀತಿಯಲ್ಲಿ ಗಳಿಕೆ ಮಾಡಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಿದೆ. ವೀಕೆಂಡ್ ಬಳಿಕ ಸಹಜವಾಗಿಯೇ ಚಿತ್ರದ ಕಲೆಕ್ಷನ್ ಕುಗ್ಗಲಿದೆ.
ಮೊದಲ ದಿನ ‘GOAT’ ಚಿತ್ರ 44 ಕೋಟಿ ರೂಪಾಯಿ ಬಾಚಿಕೊಂಡಿತ್ತು. ತಮಿಳಿನಲ್ಲಿ 39 ಕೋಟಿ ರೂಪಾಯಿ, ಹಿಂದಿಯಿಂದ 1.85 ಕೋಟಿ ರೂಪಾಯಿ ಹಾಗೂ ತೆಲುಗು ಭಾಷೆಯಿಂದ ಚಿತ್ರಕ್ಕೆ ಮೂರು ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಈಗ ಎರಡನೇ ದಿನದ ಗಳಿಕೆ ಲೆಕ್ಕ ಸಿಕ್ಕಿದೆ. ಸೆಪ್ಟೆಂಬರ್ 6ರಂದು 24.75 ಕೋಟಿ ರೂಪಾಯಿ ಬಾಚಿಕೊಂಡಿದೆ. ಅಂದರೆ ಗಳಿಕೆ ಶೇ. 43ರಷ್ಟು ಕುಸಿದಂತೆ ಆಗಿದೆ.
‘GOAT’ ಸಿನಿಮಾ ಸದ್ಯ 68.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಂದು (ಸೆಪ್ಟೆಂಬರ್ 7) ಹಾಗೂ ಭಾನುವಾರ (ಸೆಪ್ಟೆಂಬರ್ 8) ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಆದರೆ, ಮುಂಬರುವ ದಿನಗಳಲ್ಲಿ ಸಿನಿಮಾ ಮುಗ್ಗರಿಸೋದು ಖಚಿತ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾಗಾಗಿ ಬಂದ ನಯನತಾರಾ; ಬೆಂಗಳೂರಲ್ಲಿ ‘GOAT’ ನೋಡಿದ ತಮಿಳು ನಟಿ
ಇನ್ನು ‘GOAT’ ಸಿನಿಮಾದ ರೇಟಿಂಗ್ ಕೂಡ ಕುಸಿಯುತ್ತಿದೆ. ಈ ಸಿನಿಮಾಗೆ ಬುಕ್ ಮೈ ಶೋನಲ್ಲಿ ಸೆಪ್ಟೆಂಬರ್ 6ರಂದು 8.2 ರೇಟಿಂಗ್ ಇತ್ತು. ಅದು ಈಗ 8ಕ್ಕೆ ಇಳಿಕೆ ಆಗಿದೆ. ಐಎಂಡಿಬಿಯಲ್ಲೂ ನಿಧಾನಕ್ಕೆ ರೇಟಿಂಗ್ ಕಡಿಮೆ ಆಗುತ್ತಾ ಇದೆ. ಹೀಗೆ ಮುಂದುವರಿದರೆ ಪರಿಸ್ಥಿತಿ ಕಷ್ಟವಾಗಲಿದೆ. ದಳಪತಿ ವಿಜಯ್ ಅವರು ಇನ್ನು ಒಂದು ಸಿನಿಮಾದಲ್ಲಿ ಮಾತ್ರ ನಟಿಸಲಿದ್ದಾರೆ. ಆ ಬಳಿಕ ರಾಜಕೀಯದಲ್ಲಿ ಬ್ಯುಸಿ ಆಗಲಿದ್ದಾರೆ. ಅವರ ಕೊನೆಯ ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.