ಗಣೇಶ್ ಜನ್ಮದಿನ: ಮನೆ ಬಳಿ ಬರಬೇಡಿ ಎಂದು ಕೋರಿದ ಗೋಲ್ಡನ್ ಸ್ಟಾರ್

ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಜುಲೈ 2 47ನೇ ಜನ್ಮದಿನ. ಈ ಬಾರಿ ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ‘ಪಿನಾಕ’ ಮತ್ತು ‘ಯುವರ್ ಸಿನ್ಸಿಯರ್ಲಿ’ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿರುವುದರಿಂದ ಅವರು ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯವಿಲ್ಲ. ಆದಾಗ್ಯೂ, ಅಭಿಮಾನಿಗಳು ಮನೆಗೆ ಬಾರದೆ, ಬದಲಾಗಿ ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ತಮ್ಮ ಆಶೀರ್ವಾದವನ್ನು ಕಳುಹಿಸುವಂತೆ ಅವರು ವಿನಂತಿಸಿದ್ದಾರೆ.

ಗಣೇಶ್ ಜನ್ಮದಿನ: ಮನೆ ಬಳಿ ಬರಬೇಡಿ ಎಂದು ಕೋರಿದ ಗೋಲ್ಡನ್ ಸ್ಟಾರ್
ಗಣೇಶ್

Updated on: Jun 30, 2025 | 10:24 AM

ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಜುಲೈ 2 ಜನ್ಮದಿನ. ಅವರಿಗೆ 47 ವರ್ಷ ತುಂಬಲಿದೆ. ಪ್ರತಿ ಬಾರಿ ಬರ್ತ್​ಡೇ ಬಂದಾಗ ಅಭಿಮಾನಿಗಳು ಅವರ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ನೋಡುತ್ತಾರೆ. ಆ ರೀತಿ ಕಾದು ಕುಳಿತ ಅಭಿಮಾನಿಗಳಿಗೆ ಈ ಬಾರಿ ನಿರಾಸೆ ಆಗಿದೆ. ಈ ವರ್ಷ ಬರ್ತ್​ಡೇನ ಫ್ಯಾನ್ಸ್ ಜೊತೆ ಆಚರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗಣೇಶ್ ಹೇಳಿದ್ದಾರೆ. ಇದು ಫ್ಯಾನ್ಸ್​ಗೆ ಬೇಸರ ಮೂಡಿದೆ.

ಅಭಿಮಾನಿಗಳಿಗೆ ನೆಚ್ಚಿನ ನಟನ ಬರ್ತ್​ಡೇ ಬಂತು ಎಂದರೆ ಅದು ಹಬ್ಬವೇ ಸರಿ. ಆ ಸಂದರ್ಭದಲ್ಲಿ ಅಭಿಮಾನಿಗಳು ಹೀರೋ ಜೊತೆ ಕೇಕ್ ಕಟ್ ಮಾಡಿ, ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂದು ಬಯಸುತ್ತಾರೆ. ಈ ಬಾರಿ ಗಣೇಶ್ ಫ್ಯಾನ್ಸ್​ ಕೂಡ ಈ ಅವಕಾಶಕ್ಕಾಗಿ ಕಾದಿದ್ದರು. ಆದರೆ, ಅವರಿಗೆ ನಿರಾಸೆ ಆಗಿದೆ. ಈ ಬಗ್ಗೆ ಗಣೇಶ್ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ
ಚಿರಂಜೀವಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್; ಅಸಮಾಧಾನ ಹೊರಹಾಕಿದ ಫ್ಯಾನ್ಸ್
ಭಾನುವಾರವೂ ಹೆಚ್ಚಿಲ್ಲ ಕಣ್ಣಪ್ಪ ಕಲೆಕ್ಷನ್; ನೂರಾರು ಕೋಟಿ ರೂ. ನೀರಲ್ಲಿ ಹೋಮ
ಹೃದಯಾಘಾತ, ಇಂಜಂಕ್ಷನ್ ಅಲ್ಲ; ಶೆಫಾಲಿ ಸಾವಿನ ಹಿಂದಿನ ರಹಸ್ಯ ತಿಳಿಸಿದ
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ

‘ಆತ್ಮೀಯ ಅಭಿಮಾನಿ ಸ್ನೇಹಿತರೆ, ಜುಲೈ 2 ನಾನು ಹುಟ್ಟಿದ ದಿನ. ಸಹಜವಾಗಿ ನನಗದು ನಿಮ್ಮ ಪ್ರೀತಿ ಹಾಗೂ ಅಭಿಮಾನವನ್ನು ಅತ್ಯಂತ ಸಮೀಪದಿಂದ ಕಣ್ಣುಂಬಿಕೊಂಡು ಸಂಭ್ರಮಿಸುವ ದಿನ. ಆದರೆ ಈ ಬಾರಿ ನಾನು ‘ಪಿನಾಕ’ ಹಾಗೂ ‘ಯುವರ್ ಸಿನ್ಸಿಯರ್ಲಿ’ ಚಿತ್ರದ ಹೊರಾಂಗಣ ಚಿತ್ರೀಕರಣಗಳಲ್ಲಿ ಭಾಗವಹಿಸಬೇಕಿದೆ’ ಎಂದು ಗಣೇಶ್ ಪತ್ರ ಆರಂಭಿಸಿದ್ದಾರೆ.

‘ಹೀಗಾಗಿ, ಜುಲೈ2 ರಂದು ನಾನು ನಿಮ್ಮೆಲ್ಲರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮನ್ನು ರಂಜಿಸುವುದಕ್ಕಿಂತ ದೊಡ್ಡ ಹಬ್ಬ ನನಗೆ ಮತ್ತೊಂದಿಲ್ಲ. ಆದ ಕಾರಣ ಯಾರೂ ಮನೆಯ ಬಳಿ ಬರದೆ, ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ತಾವುಗಳು ಇದ್ದಲ್ಲಿದಂಲೇ ನನಗೆ ಆಶಿಸಿ ಆಶೀರ್ವದಿಸಬೇಕೆಂದು ಈ ಮೂಲಕ ವಿನಂತಿಸುತ್ತೇನೆ’ ಎಂದು ಹೇಳಿದ್ದಾರೆ ಗಣೇಶ್.

ಇದನ್ನೂ ಓದಿ: ಮಂಗಳೂರಿನ ಜೊತೆ ನಟ ಗೋಲ್ಡನ್ ಸ್ಟಾರ್​ ಗಣೇಶ್​ಗೆ ಅವಿನಾಭಾವ ಸಂಬಂಧ

ಇತ್ತೀಚೆಗೆ ಆರ್​ಸಿಬಿ ಸೆಲೆಬ್ರೇಷನ್ ಘಟನೆ ಸಾಕಷ್ಟು ಶಾಕಿಂಗ್ ಆಗಿತ್ತು. ಈ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟರು. ಈ ಘಟನೆ ಬಳಿಕ ಅಭಿಮಾನಿಗಳನ್ನು ಸೇರಿಸುವಾಗ ಎಲ್ಲರೂ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ. ಗಣೇಶ್ ಕೂಡ ಈ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಂಡಿರಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.