ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಕಲಾವಿದ ಮೋಹನ್ಲಾಲ್ ಅವರಿಗೆ ಇಂದು (ಮೇ 21) ಜನ್ಮದಿನದ ಸಂಭ್ರಮ. 1980ರ ದಶಕದಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ಅವರು ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ಕೇರಳದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಮೋಹನ್ಲಾಲ್ ಸಿನಿಮಾಗಳೆಂದರೆ ಜನರು ಮುಗಿಬಿದ್ದು ನೋಡುತ್ತಾರೆ. ಎಲ್ಲರಿಂದಲೂ ಅವರಿಗೆ ಇಂದು ಜನ್ಮದಿನದ ಶುಭಾಶಯ ಕೋರಲಾಗುತ್ತಿದೆ.
ಮಾಲಿವುಡ್ನಲ್ಲಿ ಇಂದು ಮಿಂಚುತ್ತಿರುವ ಹೊಸ ಹೀರೋಗಳಿಗೂ ಸಖತ್ ಪೈಪೋಟಿ ನೀಡುತ್ತಿರುವ ಮೋಹನ್ಲಾಲ್ ಅವರು 61ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2019ರಲ್ಲಿ ಬಂದ ಲೂಸಿಫರ್ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಈ ವರ್ಷ ಓಟಿಟಿಯಲ್ಲಿ ಬಿಡುಗಡೆಯಾದ ‘ದೃಶ್ಯಂ 2’ ಚಿತ್ರ ಕೂಡ ಸೂಪರ್ ಹಿಟ್ ಆಯಿತು. ದೇಶಾದ್ಯಂತ ಇರುವ ಪ್ರೇಕ್ಷಕರು ಈ ಚಿತ್ರವನ್ನು ಮುಗಿಬಿದ್ದು ನೋಡಿದರು. ಆ ಮೂಲಕ ಮೋಹನ್ಲಾಲ್ ಸ್ಟಾರ್ಗಿರಿ ಇನ್ನಷ್ಟು ಹೆಚ್ಚಿತು.
ಇಂದು ಬರ್ತ್ಡೇ ಸಲುವಾಗಿ ಬಿಡುಗಡೆ ಮಾಡಿರುವ ಕಾಮನ್ ಡಿಪಿ ಪೋಸ್ಟರ್ನಲ್ಲಿಯೂ ಮೋಹನ್ಲಾಲ್ ಅವರ ‘ದೃಶ್ಯಂ 2’ ಸಿನಿಮಾದ ಗೆಟಪ್ ಹೈಲೈಟ್ ಆಗಿದೆ. ಇದನ್ನು ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಕೊರೊನಾ ವೈರಸ್ ಹಾವಳಿ ಹೆಚ್ಚುತ್ತಿರುವುದರಿಂದ ಸಾರ್ವಜನಿಕವಾಗಿ ಸಂಭ್ರಮಿಸಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಅದರ ಬದಲು ಸಾಮಾಜಿಕ ಜಾಲತಾಣಗಳ ಮೂಲಕ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.
This was Day 1 of Lucifer shoot. If not for the pandemic, we should have been shooting Empuraan by now. Will hopefully get there soon enough. Happy birthday Stephen! Happy birthday AbRaam. Happy birthday Laletta! ❤️ @Mohanlal pic.twitter.com/qD1S1E0isH
— Prithviraj Sukumaran (@PrithviOfficial) May 20, 2021
Happy Birthday Laletta!❤️❤️ @Mohanlal #HappyBirthdayLalettan #HappyBirthdayMohanlal pic.twitter.com/gbK4DGwCV2
— Tovino Thomas (@ttovino) May 20, 2021
ಅಭಿಮಾನಿಗಳು ಮಾತ್ರವಲ್ಲದೆ, ವಿವಿಧ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಮೋಹನ್ಲಾಲ್ಗೆ ಶುಭಾಶಯ ತಿಳಿಸುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ಟೊವಿನೋ ಥಾಮಸ್ ಸೇರಿದಂತೆ ಅನೇಕ ನಟರು ಮೋಹನ್ಲಾಲ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಬರ್ತ್ಡೇ ವಿಶ್ ಮಾಡಿದ್ದಾರೆ. 61ನೇ ವಯಸ್ಸಿನಲ್ಲೂ ಮೋಹನ್ಲಾಲ್ ಹದಿಹರೆಯದ ಯುವಕನಂತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮರಕ್ಕರ್, ಆರಾಟ್ಟು ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿವೆ. ದೃಶ್ಯಂ ರೀತಿಯೇ ‘ದೃಶ್ಯಂ 2’ ಸಿನಿಮಾ ಕೂಡ ಹಲವು ಭಾಷೆಗಳಿಗೆ ರಿಮೇಕ್ ಆಗುತ್ತಿದೆ. ಕನ್ನಡ ರಿಮೇಕ್ನಲ್ಲಿ ರವಿಚಂದ್ರನ್ ನಟಿಸಲಿದ್ದಾರೆ.
ಇದನ್ನೂ ಓದಿ:
ದೃಶ್ಯಂ ಸಿನಿಮಾ ನೋಡಿ ದರೋಡೆಗೆ ಪ್ಲ್ಯಾನ್.. ಇದು ನಿಮ್ಮ ಊಹೆಗೂ ನಿಲುಕದಂಥ ‘ಶೂ’ ಮ್ಯಾನ್ ಥ್ರಿಲ್ಲರ್!
‘ದೃಶ್ಯ 2’ ಮಾಡೋಕೆ ರವಿಚಂದ್ರನ್ ರೆಡಿ! ಯುಗಾದಿ ಹಬ್ಬದ ದಿನವೇ ‘ಕ್ರೇಜಿ ಸ್ಟಾರ್’ ಅಭಿಮಾನಿಗಳಿಗೆ ಸಿಹಿ ಸುದ್ದಿ
Published On - 8:18 am, Fri, 21 May 21