ಸೂರ್ಯ ಬರ್ತ್​ಡೇಗೆ ಸಿಕ್ತು ಅತಿ ದೊಡ್ಡ ಗಿಫ್ಟ್​; ಇದನ್ನು ಎಂದಿಗೂ ಅವರು ಮರೆಯೋಕಾಗಲ್ಲ

Happy Birthday Suriya: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಜುಲೈ 22ರಂದು ಪ್ರಕಟ ಮಾಡಲಾಗಿದೆ. ‘ಸೂರರೈ ಪೋಟ್ರು’ ಚಿತ್ರದ ನಟನೆಗೆ ಸೂರ್ಯ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಬರ್ತ್​ಡೇ ಹಿಂದಿನ ದಿನ ಈ ಘೋಷಣೆ ಆಗಿರುವುದು ಅವರ ಪಾಲಿಗೆ ಅತಿ ದೊಡ್ಡ ಗಿಫ್ಟ್​.

ಸೂರ್ಯ ಬರ್ತ್​ಡೇಗೆ ಸಿಕ್ತು ಅತಿ ದೊಡ್ಡ ಗಿಫ್ಟ್​; ಇದನ್ನು ಎಂದಿಗೂ ಅವರು ಮರೆಯೋಕಾಗಲ್ಲ
ಸೂರ್ಯ
Edited By:

Updated on: Jul 23, 2022 | 9:36 AM

ನಟ ಸೂರ್ಯ (Actor Suriya Birthday) ಅವರು ಇಂದು (ಜುಲೈ 23) 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಬರ್ತ್​ಡೇ ವಿಶ್​ಗಳು ಬರುತ್ತಿವೆ. ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಸೂರ್ಯ ಅವರ ಫೋಟೋವನ್ನು ಪೋಸ್ಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಸೂರ್ಯ ಅವರು ಕುಟುಂಬದ ಜತೆ ಮಧ್ಯರಾತ್ರಿಯೇ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಮಯದಲ್ಲಿ ಸೂರ್ಯ ಅವರಿಗೆ ಅತಿ ದೊಡ್ಡ ಗಿಫ್ಟ್ ಸಿಕ್ಕಿದೆ. ಇದನ್ನು ಅವರು ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ಫ್ಯಾನ್ಸ್ ಪಾಲಿಗಂತೂ ಈ ಉಡುಗೊರೆ ತುಂಬಾನೇ ಅತ್ಯಮೂಲ್ಯವಾದದ್ದು.

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಜುಲೈ 22ರಂದು ಪ್ರಕಟ ಮಾಡಲಾಗಿದೆ. ‘ಸೂರರೈ ಪೋಟ್ರು’ ಚಿತ್ರದ ನಟನೆಗೆ ಸೂರ್ಯ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಬರ್ತ್​ಡೇ ಹಿಂದಿನ ದಿನ ಈ ಘೋಷಣೆ ಆಗಿರುವುದು ಅವರ ಪಾಲಿಗೆ ಅತಿ ದೊಡ್ಡ ಗಿಫ್ಟ್​. ಇದನ್ನು ಫ್ಯಾನ್ಸ್ ಕೂಡ ಸಂಭ್ರಮಿಸುತ್ತಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿ ಸಾಕಷ್ಟು ಮಂದಿ ಸೂರ್ಯ ಅವರಿಗೆ ಶುಭಾಶಯ ತಿಳಿಸಿದ್ದಾರೆ.

ಇನ್ನೊಂದು ಕಾರಣಕ್ಕೆ ಸೂರ್ಯ ಅವರಿಗೆ ಬರ್ತ್​ಡೇ ವಿಶೇಷವಾಗಿದೆ. ಅವರ ನಟನೆಯ ‘ವಿಕ್ರಮ್’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಈ ಸಿನಿಮಾದಲ್ಲಿ ಸೂರ್ಯ ಅವರು ರೊಲೆಕ್ಸ್ ಹೆಸರಿನ ಪಾತ್ರ ಮಾಡಿದ್ದಾರೆ. ಇದು ಅತಿಥಿ ಪಾತ್ರ. ಆದರೆ, ಅವರ ಪಾತ್ರ ಬೀರಿರುವ ಪ್ರಭಾವ ತುಂಬಾನೇ ದೊಡ್ಡದು. ‘ವಿಕ್ರಮ್​’ ಸಿನಿಮಾದ ಗೆಲುವಿನಲ್ಲಿ ಅವರ ಪಾತ್ರವೂ ದೊಡ್ಡದಿದೆ. ಗೆಲುವಿನೊಂದಿಗೆ ಅವರು ಬರ್ತ್​ಡೇ ಆಚರಿಸಿಕೊಳ್ಳುತ್ತಿರುವುದು ವಿಶೇಷ.

ಇದನ್ನೂ ಓದಿ
National Award: ರಾಷ್ಟ್ರ ಪ್ರಶಸ್ತಿ ಪಡೆದ ಕರುನಾಡ ಸಿನಿಮಾಗಳು; ಹೆಮ್ಮೆ ತಂದ ಡೊಳ್ಳು, ತಲೆದಂಡ, ಜೀಟಿಗೆ, ನಾದದ ನವನೀತ
68th National Film Awards: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ‘ಡೊಳ್ಳು’ ಕನ್ನಡದ ಅತ್ಯುತ್ತಮ ಚಿತ್ರ
Suriya: ನಟ ಸೂರ್ಯ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ; ಕಾರಣವೇನು? ಇಲ್ಲಿದೆ ಮಾಹಿತಿ
Puneeth Rajkumar: ಪುನೀತ್​ ಸಮಾಧಿಗೆ ನಟ ಸೂರ್ಯ ಭೇಟಿ; ಅಪ್ಪು ನೆನೆದು ಕಂಬನಿ ಮಿಡಿದ ಕಾಲಿವುಡ್​ ಸ್ಟಾರ್​ ಹೀರೋ

ಇದನ್ನೂ ಓದಿ: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ‘ಡೊಳ್ಳು’ ಕನ್ನಡದ ಅತ್ಯುತ್ತಮ ಚಿತ್ರ

ಇತ್ತೀಚಿನ ವರ್ಷಗಳಲ್ಲಿ ಸೂರ್ಯ ಅವರು ಭಿನ್ನ ಕಥಾಹಂದರದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.  ಸದ್ಯ ಅವರು ತಮಿಳಿನ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ‘ವಿಕ್ರಮ್​’ ಚಿತ್ರದ ಸೀಕ್ವೆಲ್​ನಲ್ಲಿ ಸೂರ್ಯ ಅವರು ಪ್ರಮುಖ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಬರ್ತ್​ಡೇ ದಿನ ಈ ಬಗ್ಗೆ ಅಪ್​ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಬಗ್ಗೆ ಯಾವುದಾದರೂ ಘೋಷಣೆ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇದಲ್ಲದೆ, ‘ಸೂರರೈ ಪೋಟ್ರು’ ಚಿತ್ರದ ಹಿಂದಿ ರಿಮೇಕ್​ಗೆ ಸೂರ್ಯ ಅವರು ಬಂಡವಾಳ ಹೂಡುತ್ತಿದ್ದಾರೆ. ಅಕ್ಷಯ್ ಕುಮಾರ್ ಈ ಚಿತ್ರಕ್ಕೆ ಹೀರೋ.