‘ಹರಿ ಹರ ವೀರ ಮಲ್ಲು’ ಬಾಕ್ಸ್ ಆಫೀಸ್ ಕಲೆಕ್ಷನ್; ಮೊದಲ ದಿನ ಭರ್ಜರಿ, ಎರಡನೇ ದಿನ ಒಂದಂಕಿ ಗಳಿಕೆ

ಹರಿ ಹರ ವೀರ ಮಲ್ಲು ಸಿನಿಮಾ ಮೊದಲ ದಿನ 47 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನ ಚಿತ್ರದ ಕಲೆಕ್ಷನ್ ಒಂದಂಕಿಗೆ ಕುಸಿದಿದೆ. ಇದರಿಂದ ಸಿನಿಮಾದ ಭವಿಷ್ಯ ಅನಿಶ್ಚಿತವಾಗಿದೆ. ಸಿನಿಮಾ ನೋಡಿದವರು ನೀಡಿದ ನಕಾರಾತ್ಮಕ ಪ್ರತಿಕ್ರಿಯೆ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಆದರೆ, ವಾರಾಂತ್ಯದಲ್ಲಿ ಗಳಿಕೆ ಚೇತರಿಕೆ ಕಾಣುವ ನಿರೀಕ್ಷೆ ಇದೆ.

‘ಹರಿ ಹರ ವೀರ ಮಲ್ಲು’ ಬಾಕ್ಸ್ ಆಫೀಸ್ ಕಲೆಕ್ಷನ್; ಮೊದಲ ದಿನ ಭರ್ಜರಿ, ಎರಡನೇ ದಿನ ಒಂದಂಕಿ ಗಳಿಕೆ
ಪವನ್

Updated on: Jul 26, 2025 | 7:02 AM

‘ಹರಿ ಹರ ವೀರ ಮಲ್ಲು’ ಸಿನಿಮಾ ಮೊದಲ ದಿನ ಭರ್ಜರಿ ಗಳಿಕೆ ಮಾಡಿತ್ತು. ಇದರಿಂದ ಪವನ್ ಕಲ್ಯಾಣ್ (Pawan Kalyan) ಗೆದ್ದರು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಎರಡನೇ ದಿನಕ್ಕೆ ಅದು ಸಂಪೂರ್ಣ ಉಲ್ಟಾ ಆಗಿದೆ. ಈ ಚಿತ್ರ ಎರಡನೇ ದಿನಕ್ಕೆ ಒಂದಂಕಿ ಕಲೆಕ್ಷನ್ ಮಾಡಿದೆ. ಇದರಿಂದ ಸಿನಿಮಾದ ಭವಿಷ್ಯದ ಬಗ್ಗೆ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ. ಸಿನಿಮಾ ನೋಡಿದ ಅನೇಕರು ಅಪಸ್ವರ ತೆಗೆದಿದ್ದಾರೆ. ಸಿನಿಮಾ ಉತ್ತಮವಾಗಿಲ್ಲ ಎಂಬ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ.

‘ಹರಿ ಹರ ವೀರ ಮಲ್ಲು’ ಪ್ರೀಮಿಯರ್ ಶೋ ಹಾಗೂ ಮೊದಲ ದಿನ (ಜುಲೈ 25) ಗಳಿಕೆ ಸೇರಿದರೆ ಬರೋಬ್ಬರಿ 47 ಕೋಟಿ ರೂಪಾಯಿ ಲೆಕ್ಕ ಕಲೆಕ್ಷನ್ ಮಾಡಿತ್ತು. ಆದರೆ, ಎರಡನೇ ದಿನವಾದ ಶುಕ್ರವಾರ ಸಿನಿಮಾಗೆ ಹರಿದು ಬಂದಿದ್ದು ಕೇವಲ 8 ಕೋಟಿ ರೂಪಾಯಿ. 47 ಕೋಟಿ ರೂಪಾಯಿ ಎಲ್ಲಿ, 8 ಕೋಟಿ ರೂಪಾಯಿ ಎಲ್ಲಿ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.

ಹರಿ ಹರ ವೀರ ಮಲ್ಲು ಕಾಲ್ಪನಿಕ ಕಥೆ. ಮೊಘಲರ ಕಾಲದಲ್ಲಿ ಈ ಕಥೆ ಸಾಗುತ್ತದೆ. ಡೈಮಂಡ್ ಕದಿಯೋ ವ್ಯಕ್ತಿಯಾಗಿ ಪವನ್ ಕಲ್ಯಾಣ್ ಅವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಬುಕ್ ಮೈ ಶೋನಲ್ಲಿ 8.4 ರೇಟಿಂಗ್ ಸಿಕ್ಕಿದೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾನ ತೆಗಳೋ ಕೆಲಸ ಆಗುತ್ತಿದೆ. ಈ ಕಾರಣದಿಂದಲೇ ಫ್ಯಾನ್ಸ್ ಸಿನಿಮಾದ ಮರ್ಯಾದೆ ಉಳಿಸಲು ಒಳ್ಳೆಯ ರೇಟಿಂಗ್ ಕೊಡುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ
ಪ್ರೀತಿ-ಪ್ರೇಮಗಳಿಂದ ಮನಸ್ಸು ಒಡೆದು ಪಾಠ ಕಲಿತಿದ್ದೇ ಹೆಚ್ಚು ನಿತ್ಯಾ ಮೆನನ್
‘ಹರಿ ಹರ ವೀರ ಮಲ್ಲು’ ಕಲೆಕ್ಷನ್;  ಮೊದಲ ದಿನವೇ ಬಾಕ್ಸ್ ಆಫೀಸ್ ಉಡೀಸ್
Exclusive: ಅಳಿಯ ಚಂದು ಚಿತ್ರಕ್ಕೆ ವಿಲನ್ ಆದ ದರ್ಶನ್; ದಿನಕರ್ ನಿರ್ದೇಶನ
ದರ್ಶನ್​ಗೆ​ ಜಾಮೀನು ಕೊಟ್ಟ ಹೈಕೋರ್ಟ್ ಬಗ್ಗೆ ಅಸಮಾಧಾನ ಹೊರಹಾಕಿದ ಸುಪ್ರೀಂ

ಇದನ್ನೂ ಓದಿ: ‘ಹರಿ ಹರ ವೀರ ಮಲ್ಲು’ ಕಲೆಕ್ಷನ್;  ಮೊದಲ ದಿನವೇ ಬಾಕ್ಸ್ ಆಫೀಸ್ ಉಡೀಸ್ ಮಾಡಿದ ಪವನ್ ಕಲ್ಯಾಣ್

‘ಹರಿ ಹರ ವೀರ ಮಲ್ಲು’ ಸಂಪೂರ್ಣವಾಗಿ ಭರವಸೆ ಕಳೆದುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಸಿನಿಮಾ ರಿಲೀಸ್ ಆಗಿದ್ದು ಗುರುವಾರ. ಹೀಗಾಗಿ, ಸಹಜವಾಗಿಯೇ ಶುಕ್ರವಾರದ ಗಳಿಕೆ ಇಳಿಕೆ ಆಗಿದೆ. ಶನಿವಾರ ಹಾಗೂ ಭಾನುವಾರ ಸಿನಿಮಾ ಎರಡಂಕಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಪವನ್ ಕಲ್ಯಾಣ್ ಅವರು ಹಲವು ವರ್ಷಗಳ ಬಳಿಕ ದೊಡ್ಡ ಪರದೆ ಮೇಲೆ ಬಂದಿದ್ದು. ಈ ಸಿನಿಮಾದ ಬಜೆಟ್ 250 ಕೋಟಿ ರೂಪಾಯಿ ಇದೆ. ಹೀಗಾಗಿ, ಸಿನಿಮಾ ಒಳ್ಳೆಯ ಗಳಿಕೆ ಮಾಡಲೇಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.