‘ಹರಿ ಹರ ವೀರ ಮಲ್ಲು’ ಕಲೆಕ್ಷನ್; ಮೊದಲ ದಿನವೇ ಬಾಕ್ಸ್ ಆಫೀಸ್ ಉಡೀಸ್ ಮಾಡಿದ ಪವನ್ ಕಲ್ಯಾಣ್
Hari Hara Veera Mallu Box Office Collection: ಪವನ್ ಕಲ್ಯಾಣ್ ಅವರ ‘ಹರಿ ಹರ ವೀರ ಮಲ್ಲು’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿದೆ. ಮೊದಲ ದಿನವೇ ಭಾರಿ ಕಲೆಕ್ಷನ್ ಮಾಡಿದೆ. ಇದು ಪವನ್ ಕಲ್ಯಾಣ್ ಅವರ ದೊಡ್ಡ ಮಟ್ಟದ ಕಮ್‌ಬ್ಯಾಕ್ ಆಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ಚಿತ್ರದ ಕಥೆ ಮತ್ತು ಪವನ್ ಕಲ್ಯಾಣ್ ಅವರ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ಪವನ್ ಕಲ್ಯಾಣ್ ಅವರು ದೊಡ್ಡ ಮಟ್ಟದ ಕಂಬ್ಯಾಕ್ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪೂರ್ಣ ಪ್ರಮಾಣದ ಹೀರೋ ಆಗಲು ಅವರಿಗೆ ಸಾಧ್ಯವೇ ಆಗಿರಲಿಲ್ಲ. ಈಗ ‘ಹರಿ ಹರ ವೀರ ಮಲ್ಲು’ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಿದ್ದಾರೆ. ಅವರನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಪವನ್ ಕಲ್ಯಾಣ್ (Pawan Kalyan) ಕಂಬ್ಯಾಕ್ ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ಈ ಸಿನಿಮಾ ಅಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದೆ. ಮುಂದಿನ ದಿನಗಳ ಕಲೆಕ್ಷನ್ ಮೇಲೆ ಚಿತ್ರದ ಭವಿಷ್ಯ ನಿರ್ಧಾರ ಆಗಲಿದೆ.
ಪವನ್ ಕಲ್ಯಾಣ್ ಅವರು ದೊಡ್ಡ ಗೆಲುವು ಕಂಡು ಅದೆಷ್ಟೋ ವರ್ಷಗಳೇ ಕಳೆದು ಹೋಗಿವೆ. ಅವರು ಕೊನೆಯದಾಗಿ ಹೀರೋ ಆಗಿ ನಟಿಸಿದ್ದು ‘ಭೀಮ್ಲಾ ನಾಯಕ್’ ಚಿತ್ರದಲ್ಲಿ. ಇದು ಕೂಡ ರಿಮೇಕ್ ಆಗಿತ್ತು. ‘ವಕೀಲ್ ಸಾಬ್’ ಹಿಂದಿಯ ಪಿಂಕ್ ಚಿತ್ರದ ರಿಮೇಕ್. ಈಗ ಅವರು ರಿಮೇಕ್ ಅಲ್ಲದೆ ‘ಹರಿ ಹರ ವೀರ ಮಲ್ಲು’ ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಗೆಲ್ಲುವ ಸೂಚನೆ ಸಿಕ್ಕಿದೆ.
ಬುಧವಾರದ ಪ್ರೀಮಿಯರ್ ಶೋ ಹಾಗೂ ಮೊದಲ ದಿನದ ಗಳಿಕೆಯಿಂದ ಚಿತ್ರಕ್ಕೆ 44 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದರಲ್ಲಿ 12.70 ಕೋಟಿ ರೂಪಾಯಿ ಬುಧವಾರದ್ದಾದರೆ, 31.50 ಕೋಟಿ ರೂಪಾಯಿ ಗುರುವಾರದ್ದು. ಇದು ದೇಶದ ಬಾಕ್ಸ್ ಆಫೀಸ್ ಗಳಿಕೆ ಮಾತ್ರ. ಮುಂದಿನ ಹಂತದಲ್ಲಿ ಈ ಚಿತ್ರ ಮತ್ತಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.
‘ಹರಿ ಹರ ವೀರ ಮಲ್ಲು’ ಚಿತ್ರದಲ್ಲಿ ಪವನ್ ಕಲ್ಯಾಣ್ ಅವರು ಡೈಮಂಡ್ ಕದಿಯೋ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಮೊಘಲರ ಕಾಲದಲ್ಲಿ ನಡೆಯುವ ಕಥೆ ಆಗಿದ್ದು, ಇದು ಪಕ್ಕಾ ಫಿಕ್ಷನಲ್ ಕಥೆ. ಈ ಚಿತ್ರ ವೀಕೆಂಡ್ನಲ್ಲಿ ಯಾವ ರೀತಿ ಕಲೆಕ್ಷನ್ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಖ್ಯಾತ ಖಳ ನಟ ಫಿಶ್ ವೆಂಕಟ್ ನಿಧನ; ಸಹಾಯಕ್ಕೆ ಬರಲಿಲ್ಲ ಪವನ್ ಕಲ್ಯಾಣ್ ಆರ್ಥಿಕ ಬೆಂಬಲ
‘ಹರಿ ಹರ ವೀರ ಮಲ್ಲು’ ಚಿತ್ರ ಸೆಟ್ಟೇರಿದ್ದು 2020ರಲ್ಲಿ. ಸಾಕಷ್ಟು ಬದಲಾವಣೆಗಳಿಂದ ಸಿನಿಮಾದ ಕಥೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇದು ಕೆಲವರಿಗೆ ಇಷ್ಟ ಆಗಿಲ್ಲ. ಇನ್ನು, ಚಿತ್ರದ ಬಜೆಟ್ ಕೂಡ ಹೆಚ್ಚಿದ್ದು, ಇದಕ್ಕೆ ತಕ್ಕಂತೆ ಸಿನಿಮಾ ಕಲೆಕ್ಷನ್ ಮಾಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








