ಪ್ರೀತಿ-ಪ್ರೇಮಗಳಿಂದ ಮನಸ್ಸು ಒಡೆದು ಪಾಠ ಕಲಿತಿದ್ದೇ ಹೆಚ್ಚು ನಿತ್ಯಾ ಮೆನನ್
ನಿತ್ಯಾ ಮೆನನ್ ಅವರು ತಮ್ಮ 37ನೇ ವಯಸ್ಸಿನಲ್ಲಿ ಮದುವೆಯಾಗದಿರುವ ಬಗ್ಗೆ ಮಾತನಾಡಿದ್ದಾರೆ. ಪ್ರೀತಿಯಲ್ಲಿ ಹೃದಯವೇದನೆ ಅನುಭವಿಸಿದ್ದರೂ ಅದು ತಮ್ಮನ್ನು ಬಲಪಡಿಸಿದೆ ಎನ್ನುತ್ತಾರೆ. "ತಲೈವ ತಲೈವಿ" ಚಿತ್ರದ ಪ್ರಚಾರದ ವೇಳೆ ಅವರು ಈ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರು ಕನ್ನಡ ಸಿನಿಮಾ ಮಾಡಲಿ ಎಂಬುದು ಫ್ಯಾನ್ಸ್ ಕೋರಿಕೆ.

ನಿತ್ಯಾ ಮೆನನ್ (Nitya Menen) ಅವರಿಗೆ ಈಗ 37 ವರ್ಷ ವಯಸ್ಸು. ಅವರು ಇಲ್ಲಿಯವರೆಗೆ ಮದುವೆ ಬಗ್ಗೆ ಆಲೋಚನೆ ಮಾಡಿದಂತೆ ಇಲ್ಲ. ಅವರ ಹೆಸರು ಈ ಮೊದಲು ಅನೇಕ ಸೆಲೆಬ್ರಿಟಿಗಳ ಜೊತೆ ತಳುಕು ಹಾಕಿಕೊಂಡಿತ್ತಾದರೂ ಯಾವುದೂ ವಿವಾಹದ ಹಂತಕ್ಕೆ ಹೋಗಿಲ್ಲ ಎಂದೇ ಹೇಳಬಹುದು. ಹಾಗಾದರೆ, ನಿತ್ಯಾ ಮೆನನ್ ಅವರು ವಿವಾಹ ಆಗದೆ ಇರಲು ಕಾರಣ ಏನು? ಆ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಿತ್ಯಾ ಮೆನನ್ ಅವರು ‘ತಲೈವ್ ತಲೈವಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ವಾರ ಸಿನಿಮಾ ತೆರೆಗೆ ಬಂದಿದೆ. ಹಾಸ್ಯ ರೀತಿಯಲ್ಲಿ ಚಿತ್ರ ಮೂಡಿ ಬಂದಿದೆ. ಅವರು ತಮ್ಮ ಸಿನಿಮಾ ಪ್ರಚಾರಕ್ಕಾಗಿ ವಿವಿಧ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಇತ್ತೀಚೆಗೆ ಶೋ ಒಂದಕ್ಕೆ ಬಂದಿದ್ದರು. ಆಗ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.
‘ನಾನು ಚಿಕ್ಕವಳಿದ್ದಾಗ ಪಾರ್ಟ್ನರ್ ಹುಡುಕೋದು ಮುಖ್ಯ ಎಂದುಕೊಂಡಿದ್ದೆ. ಆದರೆ, ವರ್ಷಗಳು ಬದಲಾದಂತೆ ನನ್ನ ಆಲೋಚನೆ ಬದಲಾಯಿತು. ನನಗೆ ಯಾರಾದರೂ ಸಿಕ್ಕರೆ ಖುಷಿ. ಸಿಗಲಿಲ್ಲ ಎಂದರೂ ಖುಷಿ. ನನಗೆ ಅದು ದುಃಖ ನೀಡುವುದಿಲ್ಲ’ ಎಂದು ಅವರು ಹೇಳಿದರು.
ಸಾಮಾನ್ಯವಾಗಿ ಹಾರ್ಟ್ ಬ್ರೇಕ್ ಆದಾಗ ಯಾರಿಗಾದರೂ ಬೇಸರ ಆಗಿಯೇ ಆಗುತ್ತದೆ. ನಿತ್ಯಾ ಮೆನನ್ ಕೂಡ ಹಾಗೆಯೇ ಹೇಳಿದ್ದಾರೆ. ‘ಪ್ರತಿ ಹಂತದಲ್ಲೂ ನನಗೆ ಹಾರ್ಟ್ ಬ್ರೇಕ್ ಆಗಿದೆ. ಅದು ನನಗೆ ಪ್ರತಿ ಬಾರಿಯೂ ನನಗೆ ಮನಸ್ಸು ಒಡೆದಗ ಅದು ಜನರ ಉದ್ದೇಶಗಳ ಬಗ್ಗೆ ನನಗೆ ಕಲಿಸಿತು. ನಾನು ಹುಡುಕುತ್ತಿರುವುದು ತಪ್ಪೆಂದು ಅರಿತುಕೊಳ್ಳಲು ಸಹಾಯ ಮಾಡಿತು’ ಎಂದು ನಿತ್ಯಾ ಅವರು ಹೇಳಿದರು. ಆದರೆ, ಅವರು ಎಲ್ಲಿಯೂ ಯಾರನ್ನು ಪ್ರೀತಿ ಮಾಡಿದ್ದೆ, ಯಾರು ಮೋಸ ಮಾಡಿದರು ಎಂಬಿತ್ಯಾದಿ ವಿಚಾರಗಳ ಬಗ್ಗೆ ಅವರು ಮಾತನಾಡಿಲ್ಲ. ಈ ವಿಚಾರವನ್ನು ಅವರು ಗುಟ್ಟಾಗಿಯೇ ಇಟ್ಟಿದ್ದಾರೆ ಎನ್ನಬಹುದು.
ಇದನ್ನೂ ಓದಿ: ಸಣ್ಣ ಮಕ್ಕಳಂತೆ ಮಾತನಾಡುತ್ತಾರೆ ನಿತ್ಯಾ ಮೆನನ್; ಎಷ್ಟು ಕ್ಯೂಟ್ ನೋಡಿ
ನಿತ್ಯಾ ಮೆನನ್ ನಟನೆಯ ‘ಇಡ್ಲಿ ಕಡಾಯಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಅಕ್ಟೋಬರ್ನಲ್ಲಿ ತೆರೆಗೆ ಬರಲಿದೆ. ಈ ಇತ್ರದಲ್ಲಿ ಧನುಷ್ ನಾಯಕ. ಈ ಚಿತ್ರದಲ್ಲಿ ನಿತ್ಯಾ ಕೂಡ ನಟಿಸಿದ್ದಾರೆ. ನಿತ್ಯಾ ಅವರು ‘ಕೋಟಿಗೊಬ್ಬ 2’ ಬಳಿಕ ಕನ್ನಡಕ್ಕೆ ಬರಲಿಲ್ಲ. ಅವರು ಕನ್ನಡ ಸಿನಿಮಾ ಮಾಡಲಿ ಎಂಬುದು ಫ್ಯಾನ್ಸ್ ಕೋರಿಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







