‘ವಿಂಟೇಜ್ ಪವನ್ ಕಲ್ಯಾಣ್’; ‘ಹರಿ ಹರ ವೀರ ಮಲ್ಲು’ ವಿಮರ್ಶೆ ಕೊಟ್ಟ ಅಭಿಮಾನಿಗಳು

ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಇಂದು ಬಿಡುಗಡೆ ಆಗಿದೆ. ಐದು ವರ್ಷಗಳ ಕಾಲ ನಿರ್ಮಾಣ ಹಂತದಲ್ಲಿ ಇದ್ದ ಈ ಚಿತ್ರಕ್ಕೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಮೊಘಲರ ಕಾಲದಲ್ಲಿ ನಡೆಯುವ ಕಾಲ್ಪನಿಕ ಕಥೆಯನ್ನು ಹೊಂದಿದೆ. ಚಿತ್ರದ ಬಜೆಟ್ 250 ಕೋಟಿ ರೂಪಾಯಿಗಳನ್ನು ಮೀರಿದೆ. ಚಿತ್ರದ ಟ್ವಿಟರ್ ವಿಮರ್ಶೆ ಇಲ್ಲಿದೆ.

‘ವಿಂಟೇಜ್ ಪವನ್ ಕಲ್ಯಾಣ್’; ‘ಹರಿ ಹರ ವೀರ ಮಲ್ಲು’ ವಿಮರ್ಶೆ ಕೊಟ್ಟ ಅಭಿಮಾನಿಗಳು
ಪವನ್ ಕಲ್ಯಾಣ್

Updated on: Jul 24, 2025 | 7:33 AM

‘ಹರಿ ಹರ ವೀರ ಮಲ್ಲು’ ಸಿನಿಮಾ ಇಂದು (ಜುಲೈ 24) ರಿಲೀಸ್ ಆಗಿದೆ. ಪವನ್ ಕಲ್ಯಾಣ್ (Pawan Kalyan) ಫ್ಯಾನ್ಸ್ ಈ ಚಿತ್ರಕ್ಕಾಗಿ ಹಲವು ವರ್ಷಗಳಿಂದ ಕಾದಿದ್ದರು. ಈಗ ಸಿನಿಮಾ ನೋಡಿ ವಿಂಟೇಜ್ ಪವನ್ ಕಲ್ಯಾಣ್ ಎಂದು ಕರೆಯುತ್ತಿದ್ದಾರೆ. ಸಿನಿಮಾ ಒಳ್ಳೆಯ ರೀತಿಯಲ್ಲಿ ಮೂಡಿ ಬಂದಿದೆ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಚಿತ್ರವನ್ನು ತೆಗಳುವ ಕೆಲಸ ಮಾಡುತ್ತಿದ್ದಾರೆ.

‘ಹರಿ ಹರ ವೀರ ಮಲ್ಲು’ ಸಿನಿಮಾ 2020ರಲ್ಲಿ ಅನೌನ್ಸ್ ಆಯಿತು. ಆರಂಭದಲ್ಲಿ ಚಿತ್ರವನ್ನು ಕ್ರಿಶ್ ಕೈಗೆ ಎತ್ತಿಕೊಂಡಿದ್ದರು. ಆದರೆ, ಕೊರೊನಾ-ಲಾಕ್​ಡೌನ್​ನಿಂದ ಸಿನಿಮಾ ಕೊಂಚ ತಡವಾಯಿತು. ಆ ಬಳಿಕ ಪವನ್ ಕಲ್ಯಾಣ್ ಕಾಲ್​ಶೀಟ್ ಪಡೆಯೋದು ಕಷ್ಟವಾಗಿ ಸಿನಿಮಾ ಮುಂದಕ್ಕೆ ಹೋಗುತ್ತಾ ಬಂತು. ಪವನ್ ಕಲ್ಯಾಣ್ ಉಪಮುಖ್ಯಮಂತ್ರಿ ಆದ ಬಳಿಕ ಸಿನಿಮಾ ಶೂಟ್ ಮಾಡೋದೇ ಕಷ್ಟ ಎಂಬಂತಾಯಿತು. ಕೊನೆಗೆ ಚಿತ್ರವನ್ನು ಜ್ಯೋತಿ ಕೃಷ್ಣ ಕೈಗೆತ್ತಿಕೊಂಡರು. ಅವರು ಸಿನಿಮಾದ ಕಥೆಯನ್ನು ಬದಲಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ
ಆರೇ ದಿನಕ್ಕೆ 150 ಕೋಟಿ ಕಲೆಕ್ಷನ್ ಮಾಡಿದ ‘ಸೈಯಾರಾ’; ಹರಿಯುತ್ತಲೇ ಇದೆ ಹಣ
‘ನಾನು ಒಳ್ಳೆಯ ತಂದೆಯಲ್ಲ’; ಶಾರುಖ್ ಖಾನ್ ಬೇಸರ
ಮಂಗಳವಾರ ಹೇಗಿದೆ ‘ಜೂನಿಯರ್’ ಹಾಗೂ ‘ಎಕ್ಕ’ ಸಿನಿಮಾ ಕಲೆಕ್ಷನ್?
ಈ ದಿನಂದು ‘ಕಣ್ಣಪ’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ?

ಬರೋಬ್ಬರಿ ಐದು ವರ್ಷಗಳ ಪ್ರಯತ್ನದ ಬಳಿಕ ‘ಹರಿ ಹರ ವೀರ ಮಲ್ಲು’ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿದ ಅನೇಕರು ‘ವಿಂಟೇಜ್ ಪವನ್ ಕಲ್ಯಾಣ್ ಅವರನ್ನು ನೋಡಿದಂತೆ ಆಯಿತು’ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಮಧ್ಯಂತರದಲ್ಲಿ ಸಿನಿಮಾಗೆ ದೊಡ್ಡ ಟ್ವಿಸ್ಟ್ ಇದೆ ಎಂದಿದ್ದಾರೆ.

ಇದನ್ನೂ ಓದಿ: ನಟನೆಯನ್ನು ಬಹುತೇಕ ತ್ಯಜಿಸಿದ ಪವನ್ ಕಲ್ಯಾಣ್; ದಿಟ್ಟ ನಿರ್ಧಾರ ಘೋಷಿಸಿದ ನಟ

‘ಹರಿ ಹರ ವೀರ ಮಲ್ಲು’ ಸಿನಿಮಾ ಮೊಘಲರ ಕಾಲದಲ್ಲಿ ಸಾಗುವ ಕಥೆ. ವೀರ ಮಲ್ಲು ಮತ್ತು ಅವನ ತಂಡವು ಗೋಲ್ಕೊಂಡ ಮಂತ್ರಿಗಳೊಂದಿಗೆ ಸೇರಿ ಮೊಘಲರಿಂದ ಕೋಹಿನೂರ್ ವಜ್ರವನ್ನು ಕದಿಯುವ ಕೆಲಸವನ್ನು ವಹಿಸಿಕೊಳ್ಳುತ್ತದೆ. ಆ ಬಳಿಕ ಏನೆಲ್ಲ ಆಗುತ್ತದೆ ಎಂಬುದೇ ಸಿನಿಮಾದ ಕಥೆ. ಈ ಚಿತ್ರವು ಕಾಲ್ಪನಿಕ ಸ್ಟೋರಿ ಎಂದು ಪವನ್ ಕಲ್ಯಾಣ್ ಈಗಾಗಲೇ ಅನೇಕ ಬಾರಿ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾ ವಿಳಂಬದಿಂದಾಗಿ ಚಿತ್ರದ ಬಜೆಟ್ ಹೆಚ್ಚಿದೆ. 250 ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ಸಿನಿಮಾಗೆ ಸುರಿಯಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.