ಯದ್ಧದ ಕತೆ ಹೊಂದಿರುವ ನೋಡಲೇ ಬೇಕಾದ ಅದ್ಭುತ ಸಿನಿಮಾಗಳಿವು

Movies: ಯುದ್ಧಕ್ಕೆ ಹಲವು ಕೋನಗಳಿವೆ. ಯುದ್ಧವನ್ನು ಇಡಿಯಾಗಿ ಕಟ್ಟಿಕೊಡಲು ಯಾವ ಕಲೆಗೂ ಸಾಧ್ಯವಾಗಿಲ್ಲ. ಆದರೂ ಕೆಲವು ಸಿನಿಮಾಗಳು ವಿವಿಧ ಯುದ್ಧಗಳ ಬಗ್ಗೆ ಸಿನಿಮಾಗಳನ್ನು ಮಾಡಿದ್ದು, ಯುದ್ಧವನ್ನು ಬೇರೆ ಬೇರೆ ದೃಷ್ಟಿಕೋನದಿಂದ ನೋಡುವ ಪ್ರಯತ್ನ ಮಾಡಿವೆ. ಯುದ್ಧದ ಬಗ್ಗೆ ನಿರ್ಮಾಣವಾಗಿರುವ ಕೆಲ ಅದ್ಭುತ ಸಿನಿಮಾಗಳ ಪಟ್ಟಿ ಇಲ್ಲಿದೆ.

ಯದ್ಧದ ಕತೆ ಹೊಂದಿರುವ ನೋಡಲೇ ಬೇಕಾದ ಅದ್ಭುತ ಸಿನಿಮಾಗಳಿವು
Movies On War

Updated on: May 09, 2025 | 11:33 AM

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಎರಡೂ ದೇಶಗಳ ನಡುವೆ ವೈಮಾನಿಕ ದಾಳಿಗಳು ನಡೆಯುತ್ತಿವೆ. ಯಾವಾಗ ಬೇಕಾದರೂ ಅಧಿಕೃತವಾಗಿ ಯುದ್ಧ ಘೋಷಣೆ ಆಗಬಹುದಾಗಿದೆ. ಮನುಷ್ಯ ಹುಟ್ಟಿದಾಗಿನಿಂದಲೂ ಒಂದಲ್ಲ ಒಂದು ಯುದ್ಧಗಳನ್ನು ಮಾಡುತ್ತಲೇ ಬಂದಿದ್ದಾನೆ. ಯುದ್ಧಕ್ಕೆ ಹಲವು ಕೋನಗಳಿವೆ. ಯುದ್ಧವನ್ನು ಇಡಿಯಾಗಿ ಕಟ್ಟಿಕೊಡಲು ಯಾವ ಕಲೆಗೂ ಸಾಧ್ಯವಾಗಿಲ್ಲ. ಆದರೂ ಕೆಲವು ಸಿನಿಮಾಗಳು ವಿವಿಧ ಯುದ್ಧಗಳ ಬಗ್ಗೆ ಸಿನಿಮಾಗಳನ್ನು ಮಾಡಿದ್ದು, ಯುದ್ಧವನ್ನು ಬೇರೆ ಬೇರೆ ದೃಷ್ಟಿಕೋನದಿಂದ ನೋಡುವ ಪ್ರಯತ್ನ ಮಾಡಿವೆ. ಯುದ್ಧದ ಬಗ್ಗೆ ಸಾವಿರಾರು ಸಿನಿಮಾಗಳು ವಿಶ್ವದಾದ್ಯಂತ ನಿರ್ಮಾಣವಾಗಿವೆ. ಇಲ್ಲಿ ಐಎಂಡಿಬಿಯ ಅತ್ಯುತ್ತಮ ಸಿನಿಮಾಗಳ ಪಟ್ಟಿಯಿಂದ ಈ ಟಾಪ್ 10 ಸಿನಿಮಾಗಳನ್ನು ಆಯ್ಕೆ ಮಾಡಿ ಪಟ್ಟಿ ನೀಡಲಾಗಿದೆ.

ಅಪಾಕಲಿಪ್ಸಿ ನೌ

ಯುದ್ಧದ ಬಗೆಗಿನ ಸಿನಿಮಾಗಳ ಚರ್ಚೆ ಬಂದಾಗಲೆಲ್ಲ ‘ಅಪಾಕೆಲಿಪ್ಸಿ ನೌ’ ಸಿನಿಮಾದ ಚರ್ಚೆ ಬಂದೇ ಬರುತ್ತದೆ. ಅಮೆರಿಕನ್ನರು ವಿಯೆಟ್ನಾಮ್ ಯುದ್ಧದಲ್ಲಿ ತೋರಿದ ಭೀಕರತೆ, ದೌರ್ಜನ್ಯ ಜೊತೆಗೆ ಶೌರ್ಯದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ‘ಅಪಾಕಲಿಪ್ಸಿ ನೌ’ ವಿಯೆಟ್ನಾಮ್ ಯುದ್ಧದ ಭೀಕರತೆಯನ್ನು ಜನರಿಗೆ ತೋರಿದ ಸಿನಿಮಾ. ಈ ಸಿನಿಮಾಕ್ಕೆ ಎರಡು ಆಸ್ಕರ್ ಲಭಿಸಿವೆ.

ಫುಲ್ ಮೆಟಲ್ ಜಾಕೆಟ್

ಅತ್ಯುತ್ತಮ ನಿರ್ದೇಶಕ ಸ್ಟ್ಯಾನ್ಸಿ ಕ್ಯೂಬ್ರಿಕ್ ನಿರ್ದೇಶನ ಮಾಡಿರುವ ‘ಫುಲ್ ಮೆಟಲ್ ಜಾಕೆಟ್’. ರಾಜಕಾರಣಿಗಳ ರಾಜಕೀಯಕ್ಕೆ ಅಮೆರಿಕ ಸೈನಿಕರು, ವಿಯೇಟ್ನಾಮ್​ನ ಕಠಿಣ ಪ್ರದೇಶಗಳಲ್ಲಿ ಹೇಗೆ ಕಷ್ಟಪಡಬೇಕಾಗಿ ಬಂತು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

ಸೇವಿಂಗ್ ಪ್ರೈವೇಟ್ ರ್ಯಾನ್

ಸ್ಟಿಫನ್ ಸ್ಪೀಲ್​ಬರ್ಗ್ ನಿರ್ದೇಶಿಸಿರವ ಸೇವಿಂಗ್ ಪ್ರೈವೇಟ್ ರ್ಯಾನ್, ಎರಡನೇ ವಿಶ್ವ ಯುದ್ಧದ ಬಗ್ಗೆ ಬಂದಿರುವ ಅತ್ಯದ್ಭುತ ಸಿನಿಮಾಗಳಲ್ಲಿ ಒಂದು. ಹಲವು ಸ್ಟಾರ್ ನಟರು ನಟಿಸಿರುವ ಈ ಸಿನಿಮಾ ಯುದ್ಧದ ಭೀಕರತೆಯನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ. ಈ ಸಿನಿಮಾಕ್ಕೆ ಐದು ಆಸ್ಕರ್ ಲಭಿಸಿವೆ.

ಡಂಕಿರ್ಕ್

ಖ್ಯಾತ ನಿರ್ದೇಶಕ ಕ್ರಿಸ್ಟೊಫರ್ ನೋಲನ್ ನಿರ್ದೇಶನ ಮಾಡಿರುವ ಡಂಕಿರ್ಕ್ ಸಿನಿಮಾ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಡಂಕಿರ್ಕ್​ನಲ್ಲಿ ಸಿಲುಕಿಕೊಂಡಿದ್ದ ಸೈನಿಕರನ್ನು ಅಲ್ಲಿಂದ ತೆರವು ಗೊಳಿಸುವ ರೋಚಕ ಘಟನೆಯ ಕತೆಯನ್ನು ಒಳಗೊಂಡಿದೆ. ಅಂದಹಾಗೆ ಡಂಕಿರ್ಕ್​ನಲ್ಲಿ ಭಾರತೀಯ ಸೈನಿಕರು ಸಹ ಸಿಲುಕಿಕೊಂಡಿದ್ದರು.

ಇದನ್ನೂ ಓದಿ: ಭಾರತೀಯ ಮಿಲಿಟರಿ ಆಪರೇಷನ್ ಬಗ್ಗೆ ಬಂದಿರುವ ಸಿನಿಮಾಗಳಿವು

ಕ್ಯಾಶುವಲ್ಟೀಸ್ ಆಫ್ ವಾರ್

ವಿಯೇಟ್ನಾಮ್ ಯುದ್ಧದಲ್ಲಿ ಅಮೆರಿಕನ್ನರು ಮಾಡಿದ ಅನಾಚಾರಗಳ ಕತೆಯನ್ನು ಹೇಳುತ್ತದೆ ‘ಕ್ಯಾಶುಯೆಲ್ಟೀಸ್ ಆಫ್ ವಾರ್’ ಸಿನಿಮಾ. 1969ರಲ್ಲಿ ವಿಯೆಟ್ನಾಮ್​ನ ಹಿಲ್ 196 ಮೇಲೆ ನಡೆದ ನಿಜ ಘಟನೆಯನ್ನು ಆಧರಿಸಿದೆ ಈ ಸಿನಿಮಾ.

ಆಲ್ ಕ್ವೈಟ್ ಆನ್ ವೆಸ್ಟರ್ನ್ ಫ್ರಂಟ್

ಇದೊಂದು ಜರ್ಮನ್ ಸಿನಿಮಾ. 17 ವರ್ಷದ ಯುವಕನೊಬ್ಬ ಭಾರಿ ಉತ್ಸಾಹದಿಂದ ದೇಶದ ಪರವಾಗಿ ಮೊದಲ ವಿಶ್ವ ಯುದ್ಧದಲ್ಲಿ ಪಾಲ್ಗೊಳ್ಳುತ್ತಾನೆ. ಆದರೆ ಅಲ್ಲಿ ಹೋದ ಬಳಿಕ ಆತನಿಗೆ ಯುದ್ಧದ ಭೀಕರತೆ, ರಾಜಕಾರಣಿಗಳ ಚಾಲಾಕಿತನ, ಮನುಷ್ಯತ್ವದ ಸೆಲೆ ಅರ್ಥವಾಗುತ್ತದೆ. ಈ ಸಿನಿಮಾ ನೆಟ್​ಫ್ಲಿಕ್ಸ್​​ನಲ್ಲಿ ಲಭ್ಯವಿದೆ.

ಇನ್ನೂ ಕೆಲ ಪ್ರಮುಖ ಸಿನಿಮಾಗಳು

‘ಪಾಥ್ಸ್ ಆಫ್ ಗ್ಲೋರ’, ‘ದಿ ಥ್ರೀ ಕಿಂಗ್ಸ್’, ‘ದಿ ಥಿನ್ ರೆಡ್ ಲೈನ್’, ‘ಲೆಟರ್ಸ್ ಫ್ರಮ್ ಇವೊ ಜಿಮಾ’, ‘ಪರ್ಲ್ ಹಾರ್ಬರ್’, ‘ನೋ ಮ್ಯಾನ್ಸ್ ಲ್ಯಾಂಡ್’, ‘1917’, ‘ದಿ ಹರ್ಟ್ ಲಾಕರ್’, ‘ಹಾಕ್​ಸಾ ರಿಡ್ಜ್’, ‘ದಿ ಲಾಂಗೆಸ್ಟ್ ಡೇ’, ‘ದಿ ಡೀರ್ ಹಂಟರ್’, ‘ದಿ ಗ್ರೇಟ್ ಎಸ್ಕೇಪ್’, ‘ಪ್ಲಟೂನ್’.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:23 am, Fri, 9 May 25