ಕೊರೊನಾ ನಂತರ ಚಿತ್ರ ನಿರ್ಮಾಪಕರು ನೇರವಾಗಿ ಒಟಿಟಿಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಲು ಮುಂದಾಗುತ್ತಿದ್ದಾರೆ. ಸಣ್ಣ ಬಜೆಟ್ ಚಿತ್ರಗಳಿಗೆ ಸೀಮಿತ ಚಿತ್ರಮಂದಿರಗಳಿಗಿಂತ ಒಟಿಟಿ ಬಹುದೊಡ್ಡ ವೇದಿಕೆ ಎಂಬುದು ಹಲವರ ಅಭಿಪ್ರಾಯ. ಇಂತಹ ಚಿತ್ರಗಳ ಜೊತೆಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸ್ಟಾರ್ ಚಿತ್ರಗಳೂ, ಕೆಲ ಕಾಲದ ನಂತರ ಒಟಿಟಿಯಲ್ಲಿ ಬಿಡುಗಡೆಯಾಗುತ್ತವೆ. ಅಂತೆಯೇ ಈ ವಾರ ವಿವಿಧ ಭಾಷೆಗಳ ಹಲವು ಚಿತ್ರಗಳು ಒಟಿಟಿ ಮೂಲಕ ಬಿಡುಗಡೆಯಾಗುತ್ತಿವೆ. ಬಹುನಿರೀಕ್ಷಿತ ಸೀರೀಸ್ ಹಾಗೂ ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿದ್ದು, ವೀಕ್ಷಕರಿಗೆ ಮನರಂಜನೆ ನೀಡಲಿವೆ. ಆಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್, ಆಹಾ, ಡಿಸ್ನೆ+ ಹಾಟ್ಸ್ಟಾರ್ ಮೊದಲಾದ ಒಟಿಟಿಗಳ ಮುಖಾಂತರ ಹಲವು ಚಿತ್ರಗಳು, ಸೀರೀಸ್ ತೆರೆಕಾಣುತ್ತಿವೆ. ಅವುಗಳ ಪಟ್ಟಿ ಇಲ್ಲಿದೆ.
‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’:
ಪೂಜಾ ಹೆಗ್ಡೆ ಹಾಗೂ ಅಖಿಲ್ ಅಕ್ಕಿನೇನಿ ಅಭಿನಯದ ಈ ಚಿತ್ರ ದಸರಾ ಸಮಯದಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಈಗಾಗಲೇ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ ಈ ಚಿತ್ರ ನವೆಂಬರ್ 19ರಂದು ಆಹಾ ಒಟಿಟಿ ಹಾಗೂ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ.
‘ಅದ್ಭುತಮ್’:
ತೇಜ ಸಜ್ಜ ಮತ್ತು ಶಿವಾನಿ ರಾಜಶೇಖರ್ ಅಭಿನಯದ ಈ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೇ ನೇರವಾಗಿ ಒಟಿಟಿ ಮೂಲಕ ಬಿಡುಗಡೆಯಾಗುತ್ತಿದೆ. ಡಿಸ್ನೆ+ ಹಾಟ್ಸ್ಟಾರ್ನಲ್ಲಿ ಈ ಚಿತ್ರ ತೆರೆಕಾಣಲಿದೆ.
‘ಧಮಾಕಾ’:
ಕಾರ್ತಿಕ್ ಆರ್ಯನ್ ನಟನೆಯ ಈ ಬಾಲಿವುಡ್ ಚಿತ್ರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ಥ್ರಿಲ್ಲರ್ ಮಾದರಿಯ ಈ ಚಿತ್ರ ನವೆಂಬರ್ 19ರಂದು ಬಿಡುಗಡೆಯಾಗಲಿದೆ.
‘ದಿ ವೀಲ್ ಆಫ್ ಟೈಮ್’:
ಆಮೆಜಾನ್ ಒರಿಜಿನಲ್ ಸೀರೀಸ್ ಆದ ಇದು, ನವೆಂಬರ್ 19ರಂದು ಬಿಡುಗಡೆಯಾಗಲಿದೆ. ಈಗಾಗಲೇ ‘ದಿ ವೀಲ್ ಆಫ್ ಟೈಮ್’ನ ಟ್ರೈಲರ್ ಬಿಡುಗಡೆಯಾಗಿ, ಎಲ್ಲರ ಗಮನ ಸೆಳೆದಿದ್ದು, ಸೈನ್ಸ್ ಫಿಕ್ಷನ್ ಮಾದರಿಯ ಸೀರೀಸ್ ಇದಾಗಿದೆ.
‘ಚುರುಲಿ’:
ಲಿಜೋ ಜೋಸ್ ಪೆಲ್ಲಿಸ್ಸೇರಿ ನಿರ್ದೇಶನದ ಫ್ಯಾಂಟಸಿ- ಅಡ್ವೆಂಚರ್ ಚಿತ್ರವಾದ ‘ಚುರುಲಿ’ ನವೆಂಬರ್ 19ರಂದು ಬಿಡುಗಡೆಯಾಗಲಿದೆ. ‘ಡಿಸ್ನೆ+ ಹಾಟ್ಸ್ಟಾರ್’ನಲ್ಲಿ ಚಿತ್ರ ತೆರೆ ಕಾಣಲಿದೆ.
‘ಯುವರ್ ಹೋಮರ್ ಸೀಸನ್ 2’:
ಈ ಸೀರೀಸ್ ಸೋನಿ ಲಿವ್ನಲ್ಲಿ ನವೆಂಬರ್ 19ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ:
ಥಿಯೇಟರ್ಗೆ ಬರದೆ ಒಟಿಟಿ ಮೊರೆ ಹೋದ ಶಾರುಖ್ ಸಿನಿಮಾ; ಬೇಸರಗೊಂಡ ಫ್ಯಾನ್ಸ್
ಸಲ್ಮಾನ್ ಜೊತೆ ನಟಿಸಲು ಬಹಳ ಆತಂಕಿತರಾಗಿದ್ದ ಆಯುಷ್ ಶರ್ಮಾ; ಇದಕ್ಕೆ ನೆಪೋಟಿಸಂ ಅಪವಾದವೂ ಕಾರಣವಂತೆ!