ಆಮೀರ್ ಖಾನ್​​ಗಿಂತ ವೇಯ್ಟರ್​ ಉತ್ತಮವಾಗಿ ಆ್ಯಕ್ಟ್​ ಮಾಡಿದ್ದ; ಆರ್​ಜಿವಿ ಹೀಗೆ ಹೇಳಿದ್ದರ ಹಿಂದಿತ್ತು ಬೇರೆ ಉದ್ದೇಶ

| Updated By: Digi Tech Desk

Updated on: May 15, 2021 | 4:32 PM

Ram Gopal Varma: ರಂಗೀಲಾ ತೆರೆಕಂಡ ನಂತರ ರಾಮ್​ಗೋಪಾಲ್​ ವರ್ಮಾ ಸಂದರ್ಶನವೊಂದನ್ನು ನೀಡಿದ್ದರು. ಈ ಸಂದರ್ಶನದಲ್ಲಿ ಮಾತನಾಡಿದ್ದ ಆರ್​ಜಿವಿ, ‘ಆಮೀರ್​ಗಿಂತ ಸಿನಿಮಾದಲ್ಲಿ ಬಂದು ಹೋಗುವ ವೇಯ್ಟರ್​ ಉತ್ತಮವಾಗಿ ಪಾತ್ರ ನಿರ್ವಹಿಸಿದ್ದ’ ಎಂದಿದ್ದರು.

ಆಮೀರ್ ಖಾನ್​​ಗಿಂತ ವೇಯ್ಟರ್​ ಉತ್ತಮವಾಗಿ ಆ್ಯಕ್ಟ್​ ಮಾಡಿದ್ದ; ಆರ್​ಜಿವಿ ಹೀಗೆ ಹೇಳಿದ್ದರ ಹಿಂದಿತ್ತು ಬೇರೆ ಉದ್ದೇಶ
ಆರ್​ಜಿವಿ-ಆಮೀರ್​
Follow us on

Ram Gopal Varma: 1995ರಲ್ಲಿ ತೆರೆಗೆ ಬಂದಿದ್ದ ‘ರಂಗೀಲಾ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಅಂದಿನ ಕಾಲದಲ್ಲಿ ಇದು ದೊಡ್ಡ ಹಿಟ್ ಸಿನಿಮಾ ಕೂಡ ಹೌದು. ರಾಮ್​ ಗೋಪಾಲ್​ ವರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಆಮೀರ್​ ಖಾನ್​ ಹೀರೋ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ತೆರೆಕಂಡ ನಂತರದಲ್ಲಿ ಆಮೀರ್​ ಹಾಗೂ ಆರ್​ಜಿವಿ ನಡುವಿನ ಫ್ರೆಂಡ್​ಶಿಪ್​ ಮುರಿದು ಬಿದ್ದಿತ್ತು. ಇದರಲ್ಲಿ ನನ್ನದೇ ತಪ್ಪಿದೆ ಎಂದು ಆರ್​ಜಿವಿ ಕೊನೆಗೂ ಒಪ್ಪಿಕೊಂಡಿದ್ದಾರೆ.

ರಂಗೀಲಾ ತೆರೆಕಂಡ ನಂತರ ರಾಮ್​ಗೋಪಾಲ್​ ವರ್ಮಾ ಸಂದರ್ಶನವೊಂದನ್ನು ನೀಡಿದ್ದರು. ಈ ಸಂದರ್ಶನದಲ್ಲಿ ಮಾತನಾಡಿದ್ದ ಆರ್​ಜಿವಿ, ‘ಆಮೀರ್​ಗಿಂತ ಸಿನಿಮಾದಲ್ಲಿ ಬಂದು ಹೋಗುವ ವೇಯ್ಟರ್​ ಉತ್ತಮವಾಗಿ ಪಾತ್ರ ನಿರ್ವಹಿಸಿದ್ದ’ ಎಂದಿದ್ದರು. ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ವಿವಾದ ಹುಟ್ಟು ಹಾಕಿತ್ತು. ಇಬ್ಬರೂ ಒಟ್ಟಿಗೆ ಕೆಲಸ ಮಾಡದೇ ಇರಲು ಇದುವೇ ಕಾರಣ ಎನ್ನಲಾಗಿತ್ತು. ಈ ಬಗ್ಗೆ ಆರ್​ಜಿವಿ ಈಗ ಮೌನ ಮುರಿದಿದ್ದಾರೆ.

ಅಂದು ಆರ್​ಜಿವಿ ಆ ರೀತಿಯಲ್ಲಿ ಮಾತನ್ನೇ ಆಡಿರಲಿಲ್ಲವಂತೆ. ‘ಆಮೀರ್​ಗಿಂತ ವೇಯ್ಟರ್ ಉತ್ತಮವಾಗಿ ನಟಿಸಿದ್ದಾನೆ ಎಂದು ನಾನು ಹೇಳಲೇ ಇಲ್ಲ. ಅಂದು ನಾನು ಹೇಳಿದ ಹೇಳಿಕೆಯನ್ನು ಪತ್ರಿಕೆಗಳು ತಪ್ಪಾಗಿ ಅರ್ಥೈಸಿಕೊಂಡವು. ಅದೇ ರೀತಿಯಲ್ಲಿ ಹೆಡ್​ಲೈನ್​ ನೀಡಿದರು. ಅದನ್ನೇ ಆಮೀರ್ ನಂಬಿಕೊಂಡರು’ ಎಂದಿದ್ದಾರೆ ಆರ್​ಜಿವಿ.

‘ಸಿನಿಮಾ ವಿಮರ್ಶಕ ಮೊಹ್ಮದ್​ ಖಾಲಿದ್​ಗೆ ನಾನು ಸಂದರ್ಶನ ನೀಡುತ್ತಿದ್ದೆ. ಅದೊಂದು ಹೋಟೆಲ್​ ದೃಶ್ಯ. ನಾನು ಪ್ರಮುಖವಾಗಿ ಆ ಸೀನ್​ ಬಗ್ಗೆ ಮಾತ್ರ ಮಾತನಾಡುತ್ತಿದ್ದೆ. ಅಲ್ಲಿ ಆಮೀರ್​ ಮಾತಿಗೆ ವೇಯ್ಟರ್​ ಉತ್ತಮವಾಗಿ ಸ್ಪಂದಿಸಿದ್ದರು. ನಾನು ಈ ದೃಶ್ಯವನ್ನು ಮಾತ್ರ ಉಲ್ಲೇಖಿಸಿ ಹೇಳಿದ್ದೆ. ಆದರೆ,  ಮೊಹ್ಮದ್​ ಬೇರೆ ರೀತಿಯಲ್ಲಿ ಬರೆದರು. ನನಗೆ ಈ ಬಗ್ಗೆ ಸ್ಪಷ್ಟನೆ ನೀಡೋಕೂ ಸಮಯ ಸಿಕ್ಕಿಲ್ಲ. ನಾನು ಆ ರೀತಿ ಹೇಳಿಲ್ಲ ಎಂದು ಅನೇಕ ಸಂದರ್ಶನದಲ್ಲಿ ಹೇಳಿದ್ದೆ. ಆದರೆ, ಆಗ ಸಮಯ ಮಿಂಚಿತ್ತು. ಟೆಕ್ನಿಕಲ್​ ವಿಚಾರಗಳನ್ನು ಮೊಹ್ಮದ್​ಗೆ ಅರ್ಥಮಾಡಿಸಲು ಹೋಗಿದ್ದು ನನ್ನ ತಪ್ಪು’ ಎಂದು ಆರ್​ಜಿವಿ ಹೇಳಿಕೊಂಡಿದ್ದಾರೆ.

ಆಮೀರ್​ ಖಾನ್​ ಸದ್ಯ ಲಾಲ್​ ಸಿಂಗ್​ ಚಡ್ಡಾ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್​ಗಾಗಿ ಅವರು ಲೇಹ್-ಲಡಾಕ್​ಗೆ ತೆರಳಿದ್ದಾರೆ. 50 ದಿನಗಳ ಕಾಲ ಅವರು ಅಲ್ಲಿಯೇ ಇರಲಿದ್ದಾರಂತೆ. ಹಾಲಿವಡ್​​ನ ‘ಫಾರೆಸ್ಟ್​ ಗಂಪ್’​ ಚಿತ್ರದ ರಿಮೇಕ್​ ಆಗಿ ಈ ಸಿನಿಮಾ ಮೂಡಿ ಬರುತ್ತಿದೆ.

ಇದನ್ನೂ ಓದಿ:

 Ram Gopal Varma Birthday: ಇದು ನನ್ನ ಬರ್ತ್​ಡೇ ಅಲ್ಲ; ಡೆತ್​ ಡೇ! ಹುಟ್ಟುಹಬ್ಬದ ದಿನವೇ ರಾಮ್​ ಗೋಪಾಲ್​ ವರ್ಮಾ ಶಾಕಿಂಗ್​ ಮಾತು

ಬೀದಿಯಲ್ಲಿ ಪೋಸ್ಟರ್​ ಹಚ್ಚುತ್ತಿದ್ದ ಆಮೀರ್​ ಖಾನ್​ ವಿಡಿಯೋ ವೈರಲ್​; ಅಂದು ಸಿಗುತ್ತಿದ್ದ ಸಂಬಳ ಎಷ್ಟು?

Published On - 4:15 pm, Sat, 15 May 21