ರಶ್ಮಿಕಾ ಮಂದಣ್ಣ, ವಿಜಯ್​ ದೇವರಕೊಂಡ ಫೋಟೋ ದುರ್ಬಳಕೆ: ಕ್ಷಮೆ ಕೇಳಿದ ನಟ ನಾನಿ

|

Updated on: Dec 04, 2023 | 5:08 PM

ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ಅವರು ಮಾಲ್ಡೀವ್ಸ್​ಗೆ ತೆರಳಿದ್ದ ಸಂದರ್ಭದ ಫೋಟೋವನ್ನು ‘ಹಾಯ್​ ನಾನ್ನ’ ಸಿನಿಮಾದ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿತ್ತು. ಆ ಘಟನೆಗೆ ಸಂಬಂಧಿಸಿದಂತೆ ನಟ ನಾನಿ ಅವರು ಈಗ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.

ರಶ್ಮಿಕಾ ಮಂದಣ್ಣ, ವಿಜಯ್​ ದೇವರಕೊಂಡ ಫೋಟೋ ದುರ್ಬಳಕೆ: ಕ್ಷಮೆ ಕೇಳಿದ ನಟ ನಾನಿ
ನಾನಿ, ರಶ್ಮಿಕಾ ಮಂದಣ್ಣ, ವಿಜಯ್​ ದೇವರಕೊಂಡ
Follow us on

ಟಾಲಿವುಡ್​ನ ಖ್ಯಾತ ನಟ ನಾನಿ (Nani) ಅಭಿನಯದ ‘ಹಾಯ್​ ನಾನ್ನ’ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರ ಫೋಟೋವನ್ನು ಬಿತ್ತರ ಮಾಡಲಾಗಿತ್ತು. ಆ ಚಿತ್ರತಂಡದ ಜೊತೆ ರಶ್ಮಿಕಾ ಮತ್ತು ವಿಜಯ್​ ದೇವರಕೊಂಡ (Vijay Deverakonda) ಅವರಿಗೆ ಯಾವುದೇ ಸಂಬಂಧ ಇಲ್ಲ. ಹಾಗಿದ್ದರೂ ಕೂಡ ವೇದಿಕೆಯ ಎಲ್​ಇಡಿ ಪರದೆಯಲ್ಲಿ ಇಬ್ಬರ ವೈಯಕ್ತಿಕ ಫೋಟೋ ಬಿತ್ತರ ಆಗಿದ್ದು ಯಾಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಅದಕ್ಕೆ ಈಗ ನಟ ನಾನಿ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರತಂಡದಿಂದ ಆದ ಪ್ರಮಾದಕ್ಕೆ ಅವರು ಕ್ಷಮೆ ಕೇಳಿದ್ದಾರೆ.

‘ಹಾಯ್​ ನಾನ್ನ’ ಸಿನಿಮಾದಲ್ಲಿ ನಾನಿ ಮತ್ತು ಮೃಣಾಲ್​ ಠಾಕೂರ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ನಡೆಯುವಾಗ ರಶ್ಮಿಕಾ ಮಂದಣ್ಣ ಮತ್ತು ನಾನಿ ಅವರ ಫೋಟೋ ಯಾಕೆ ಬಿತ್ತರ ಆಯಿತು ಎಂಬುದು ಯಾರಿಗೂ ತಿಳಿದಿಲ್ಲ. ಪ್ರಚಾರದ ಹುಚ್ಚಿನಿಂದ ‘ಹಾಯ್​ ನಾನ್ನ’ ತಂಡವೇ ಈ ರೀತಿ ಗಿಮಿಕ್​ ಮಾಡಿರಬಹುದು ಎಂಬುದು ಕೆಲವರ ಆರೋಪ. ಒಟ್ಟಿನಲ್ಲಿ ಆ ಘಟನೆಗೆ ನಾನಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಅನಿಮಲ್’ ಸಿನಿಮಾದಲ್ಲಿ ಮಿತಿ ಮೀರಿತು ರಶ್ಮಿಕಾ ಬೋಲ್ಡ್​ನೆಸ್​; ದೃಶ್ಯಗಳು ಲೀಕ್

‘ಆ ರೀತಿ ಆಗಿದ್ದು ದುರದೃಷ್ಟಕರ. ಏನಾಯಿತು ಎಂಬುದು ಗೊತ್ತಾಗುವುದರೊಳಗೆ ಫೋಟೋ ಕಣ್ಮರೆ ಆಯಿತು. ನಾವೆಲ್ಲರೂ ಆಪ್ತ ಸ್ನೇಹಿತರು. ಹೀಗೆಲ್ಲ ಆಗುವುದು ಸಹಜ ಎಂಬುದನ್ನು ರಶ್ಮಿಕಾ ಮತ್ತು ವಿಜಯ್​ ದೇವರಕೊಂಡ ಅರ್ಥ ಮಾಡಿಕೊಳ್ಳಲಿದ್ದಾರೆ. ಒಂದು ವೇಳೆ ಯಾರಿಗಾದರೂ ನಿಜವಾಗಿಯೂ ನೋವಾಗಿದ್ದರೆ ನಾನು ಮತ್ತು ನನ್ನ ತಂಡದವರು ಕ್ಷಮೆ ಕೇಳುತ್ತೇವೆ’ ಎಂದು ನಾನಿ ಹೇಳಿದ್ದಾರೆ.

ಇದನ್ನೂ ಓದಿ: ವಿಜಯ್ ದೇವರಕೊಂಡ-ಮೃಣಾಲ್ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ

‘ಇಂಥ ಇವೆಂಟ್​ನ ಹಿಂದೆ ಸಾಕಷ್ಟು ಜನರು ಕೆಲಸ ಮಾಡುತ್ತಾರೆ. ಈ ರೀತಿ ಆಗಬಾರದಿತ್ತು. ಹೀಗೆ ಮಾಡಿದ್ದು ಯಾರು ಅಂತ ತಿಳಿಯಲು ಪ್ರಯತ್ನಿಸಿದೆವು. ಆದರೆ ಆ ಕೆಲಸ ಮಾಡಿದವರು ಈಗಾಗಲೇ ಭಯಬಿದ್ದಿದ್ದರು. ಹೋಗಲಿ ಬಿಡಿ ಅಂತ ಸುಮ್ಮನಾದೆವು. ಅದು ಸಿನಿಮಾ ಕಾರ್ಯಕ್ರಮ. ಅಂಥ ಫೋಟೋ ಹಾಕಿ ಸಾಹಸ ಮಾಡಲು ಯಾವುದೋ ಗಾಸಿಪ್​ ವೆಬ್​ಸೈಟ್​ ಅಲ್ಲ’ ಎಂದಿದ್ದಾರೆ ನಾನಿ.

ಈ ವಿಚಾರದ ಬಗ್ಗೆ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಪ್ರತಿಕ್ರಿಯೆ ನೀಡುವುದು ಇನ್ನೂ ಬಾಕಿ ಇದೆ. ‘ಹಾಯ್​ ನಾನ್ನ’ ಸಿನಿಮಾ ಡಿಸೆಂಬರ್​ 7ರಂದು ಬಿಡುಗಡೆ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.