‘ಅನಿಮಲ್’ ಸಿನಿಮಾದಲ್ಲಿ ಮಿತಿ ಮೀರಿತು ರಶ್ಮಿಕಾ ಬೋಲ್ಡ್ನೆಸ್; ದೃಶ್ಯಗಳು ಲೀಕ್
‘ಅನಿಮಲ್’ ಸಿನಿಮಾಗೆ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಇದೆ. ಈ ಚಿತ್ರದಲ್ಲಿ ರಶ್ಮಿಕಾ ಅವರು ಕಥಾ ನಾಯಕ ರಣಬಿರ್ ಕಪೂರ್ ಅವರ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಸಂದೀಪ್ ರೆಡ್ಡಿ ವಂಗ (Sandeep Reddy Vanga) ಸಿನಿಮಾದಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳು ಇರುತ್ತವೆ. ‘ಅರ್ಜುನ್ ರೆಡ್ಡಿ’ ಸಿನಿಮಾ ಮೂಲಕ ಈ ವಿಚಾರ ಗೊತ್ತಾಗಿತ್ತು. ಈಗ ಅವರ ನಿರ್ದೇಶನದ ‘ಅನಿಮಲ್’ ಸಿನಿಮಾದಲ್ಲೂ ಅದು ಮುಂದುವರಿದಿದೆ. ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಖತ್ ಬೋಲ್ಡ್ ಆಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಕೆಲ ಪ್ರಮುಖ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿವೆ. ಇದಕ್ಕೆ ಅಭಿಮಾನಿಗಳು ಬಗೆ ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನು ಟ್ರೋಲ್ ಮಾಡುವ ಕೆಲಸ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ ಮಾಡಿದ ಪಾತ್ರಗಳು ಸಿಂಪಲ್ ಆಗಿಯೇ ಇವೆ. ಅವರು ತೆಲುಗಿಗೆ ಹೋದ ಬಳಿಕ ಬೋಲ್ಡ್ ಪಾತ್ರಗಳನ್ನು ಒಪ್ಪಿಕೊಳ್ಳಲು ಶುರು ಮಾಡಿದರು. ‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ಲಿಪ್ ಲಾಕ್ ದೃಶ್ಯಗಳು ಇದ್ದವು. ‘ಅನಿಮಲ್’ ಸಿನಿಮಾದಲ್ಲಿ ಅವರು ಸಖತ್ ಹಾಟ್ ಅವತಾರ ತಾಳಿದ್ದಾರೆ. ಇದಕ್ಕೆ ಸಾಕ್ಷಿ ಒದಗಿಸುವಂತ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿವೆ. ಇದು ಚಿತ್ರಕ್ಕೆ ಹಿನ್ನಡೆ ಉಂಟು ಮಾಡುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಪೈರಸಿ ಕಾಟ ಜೋರಾಗಿದೆ. ಹಲವು ಸಿನಿಮಾಗಳು ರಿಲೀಸ್ ಆದ ದಿನವೇ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಆಗುತ್ತವೆ. ಇನ್ನು, ಥಿಯೇಟರ್ಗೆ ತೆರಳಿದ ಅನೇಕ ಫ್ಯಾನ್ಸ್ ಪ್ರಮುಖ ದೃಶ್ಯಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದು ಕೂಡ ಸಿನಿಮಾ ಕಲೆಕ್ಷನ್ಗೆ ಹೊಡೆತ ನೀಡುತ್ತದೆ.
‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಅವರು ಕಥಾ ನಾಯಕ ರಣಬಿರ್ ಕಪೂರ್ ಅವರ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಪತಿಯ ಎದುರು ವಿವಸ್ತ್ರಳಾಗುವಂಥ ದೃಶ್ಯಗಳು ಸಿನಿಮಾಗಳಲ್ಲಿ ಇವೆ. ಈ ದೃಶ್ಯ ನೋಡಿ ಅನೇಕರು ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ರಶ್ಮಿಕಾ ತೆಲೆಕೆಡಿಸಿಕೊಂಡಿಲ್ಲ. ‘ಅನಿಮಲ್’ ಸಿನಿಮಾ ಗೆದ್ದಿರುವುದರಿಂದ ಅವರ ಬೇಡಿಕೆ ಹೆಚ್ಚಿದೆ.
‘ಅನಿಮಲ್’ ಸಿನಿಮಾ ಮೊದಲ ದಿನ ಹಿಂದಿಯಲ್ಲಿ 54 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾ ಅಬ್ಬರಿಸಿದೆ. ಇಂದು (ಡಿಸೆಂಬರ್ 2) ಹಾಗೂ ನಾಳೆ (ಡಿಸೆಂಬರ್ 3) ಸಿನಿಮಾ ಅಬ್ಬರದ ಗಳಿಕೆ ಮಾಡುವ ನಿರೀಕ್ಷೆ ಇದೆ. ಈ ಮೂಲಕ ಚಿತ್ರ ಅನಾಯಾಸವಾಗಿ 300 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರ ಊಹಿಸುತ್ತಿದ್ದಾರೆ.
High expected scene in #Animal#RashmikaMandanna @iamRashmika 😘 @ActressWorld14 #AnimalReview #AnimalTheMovie #RashmikaMandannahot #Rashmika #Rashmikahot #Actressworld pic.twitter.com/XxXUPDy0Fb
— Actress World 💃 (@ActressWorld14) December 2, 2023
ಇದನ್ನೂ ಓದಿ: ಮೊದಲ ದಿನ 61 ಕೋಟಿ ರೂಪಾಯಿ ಗಳಿಸಿದ ‘ಅನಿಮಲ್’; ಅತಿ ದೊಡ್ಡ ಗೆಲುವು ಕಂಡ ರಣಬೀರ್, ರಶ್ಮಿಕಾ
I Knew It, Just #SandeepReddyVanga Things🙂#Animal #AnimalTheFilm #AnimalMovieReview #RanbirKapoor𓃵 #RashmikaMandanna pic.twitter.com/wVkU0JNgyu
— Sakil Rahman SRK (@Sakil_Rahmanz) December 1, 2023
‘ಅನಿಮಲ್’ ಸಿನಿಮಾಗೆ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಇದೆ. ‘ಕಬೀರ್ ಸಿಂಗ್’ ಬಳಿಕ ಇದು ಬಾಲಿವುಡ್ನಲ್ಲಿ ಅವರ ನಿರ್ದೇಶನದ ಎರಡನೇ ಸಿನಿಮಾ. ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಜೊತೆ ಬಾಬಿ ಡಿಯೋಲ್, ಅನಿಲ್ ಕಪೂರ್ ಮೊದಲಾದವರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರ ಹಿಂದಿ, ತೆಲುಗು, ಕನ್ನಡ ಸೇರಿ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Sat, 2 December 23