AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿ ‘ದೃಶ್ಯಂ 3’ ಮಲಯಾಳಂನ ರೀಮೇಕ್ ಅಲ್ಲ, ರಿಲೀಸ್ ಯಾವಾಗ?

Drishyam 3 movie: ಹಿಂದಿಯ ಹೊರತಾಗಿ ಇನ್ಯಾವ ಭಾಷೆಯವರೂ ‘ದೃಶ್ಯಂ’ ಸಿನಿಮಾದ ಸರಣಿಯನ್ನು ರೀಮೇಕ್ ಮಾಡಲಿಲ್ಲ. ಮಲಯಾಳಂ ರೀತಿಯಲ್ಲೇ ಹಿಂದಿಯಲ್ಲಿಯೂ ‘ದೃಶ್ಯಂ’ ಸಿನಿಮಾಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವಿದ್ದು, ಮಲಯಾಳಂ ‘ದೃಶ್ಯಂ’ ಸರಣಿಯ ಎರಡು ಸಿನಿಮಾಗಳನ್ನು ಯಥಾವತ್ತು ರೀಮೇಕ್ ಮಾಡಲಾಗಿದೆ. ಇದೀಗ ‘ದೃಶ್ಯಂ 3’ ಸಿನಿಮಾ ಸಹ ಬರುತ್ತಿದೆ. ಆದರೆ ಈ ಸಿನಿಮಾ ಮಲಯಾಳಂ ಸಿನಿಮಾದ ರೀಮೇಕ್ ಆಗಿರುವುದಿಲ್ಲವಂತೆ.

ಹಿಂದಿ ‘ದೃಶ್ಯಂ 3’ ಮಲಯಾಳಂನ ರೀಮೇಕ್ ಅಲ್ಲ, ರಿಲೀಸ್ ಯಾವಾಗ?
Drishyam Mohanlal
ಮಂಜುನಾಥ ಸಿ.
|

Updated on:Aug 30, 2026 | 9:15 PM

Share

ಮಲಯಾಳಂನ ‘ದೃಶ್ಯಂ’ (Drishyam) ಸಿನಿಮಾ (2013) ಬಿಡುಗಡೆ ಆದ ಬಳಿಕ ಭಾರತದ ಹಲವು ಭಾಷೆಗಳಿಗೆ ರೀಮೇಕ್ ಆಗಿತ್ತು. ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಲಯಾಳಂನ ಮೊದಲ ‘ದೃಶ್ಯಂ’ ಸಿನಿಮಾ ರೀಮೇಕ್ ಆಗಿತ್ತು. ಅದಾದ ಬಳಿಕ ‘ದೃಶ್ಯಂ 2’ ಮತ್ತು ಇತ್ತೀಚೆಗಷ್ಟೆ ‘ದೃಶ್ಯಂ 3’ ಸಿನಿಮಾ ಸಹ ಮಲಯಾಳಂನಲ್ಲಿ ನಿರ್ಮಾಣಗೊಂಡವು. ಆದರೆ ಹಿಂದಿಯ ಹೊರತಾಗಿ ಇನ್ಯಾವ ಭಾಷೆಯವರೂ ‘ದೃಶ್ಯಂ’ ಸಿನಿಮಾದ ಸರಣಿಯನ್ನು ರೀಮೇಕ್ ಮಾಡಲಿಲ್ಲ. ಮಲಯಾಳಂ ರೀತಿಯಲ್ಲೇ ಹಿಂದಿಯಲ್ಲಿಯೂ ‘ದೃಶ್ಯಂ’ ಸಿನಿಮಾಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವಿದ್ದು, ಮಲಯಾಳಂ ‘ದೃಶ್ಯಂ’ ಸರಣಿಯ ಎರಡು ಸಿನಿಮಾಗಳನ್ನು ಯಥಾವತ್ತು ರೀಮೇಕ್ ಮಾಡಲಾಗಿದೆ. ಇದೀಗ ‘ದೃಶ್ಯಂ 3’ ಸಿನಿಮಾ ಸಹ ಬರುತ್ತಿದೆ. ಆದರೆ ಈ ಸಿನಿಮಾ ಮಲಯಾಳಂ ಸಿನಿಮಾದ ರೀಮೇಕ್ ಆಗಿರುವುದಿಲ್ಲವಂತೆ.

ಅಜಯ್ ದೇವಗನ್, ಶ್ರೆಯಾ ಮತ್ತು ಟಬು ನಟಿಸಲಿರುವ ‘ದೃಶ್ಯಂ 3’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆದ ಮಲಯಾಳಂ ‘ದೃಶ್ಯಂ 3’ ಸಿನಿಮಾದ ನೇರ ರೀಮೇಕ್ ಆಗಿರುವುದಿಲ್ಲ ಬದಲಿಗೆ ಆ ಸಿನಿಮಾದ ಸ್ಪೂರ್ತಿಯಿಂದ ಮಾಡಲಾದ ಭಿನ್ನ ಕತೆ ಮತ್ತು ಭಿನ್ನ ರೀತಿಯ ಟ್ವಿಸ್ಟ್​​ಗಳುಳ್ಳ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆಯಂತೆ. ಸಿನಿಮಾದ ಪೋಸ್ಟರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ‘ದೃಶ್ಯಂ 3’ ಸಿನಿಮಾ ಅಕ್ಟೋಬರ್ 2ರ ಗಾಂಧಿ ಜಯಂತಿಯಂತು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.

ಇತ್ತೀಚೆಗಷ್ಟೆ ಬಿಡುಗಡೆ ಆದ ಮಲಯಾಳಂನ ‘ದೃಶ್ಯಂ 3’ ಸಿನಿಮಾ ನಿರೀಕ್ಷಿತ ಮಟ್ಟದ ಪ್ರದರ್ಶನವನ್ನು ಬಾಕ್ಸ್ ಆಫೀಸ್​​ನಲ್ಲಿ ಕಾಣಲಿಲ್ಲ. ಸಿನಿಮಾದ ಕತೆಯ ಬಗ್ಗೆಯೂ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ‘ದೃಶ್ಯಂ’ ಸಿನಿಮಾ ತನ್ನ ಥ್ರಿಲ್ಲರ್ ಗುಣವನ್ನು ಕಳೆದುಕೊಂಡಿದೆ ಎಂದು ಕೆಲವರು ವಿಮರ್ಶೆ ಮಾಡಿದ್ದರು. ಇದೇ ಕಾರಣಕ್ಕೆ ಹಿಂದಿ ತಂಡವು ‘ದೃಶ್ಯಂ 3’ ಸಿನಿಮಾವನ್ನು ಯಥಾವತ್ತು ರೀಮೇಕ್ ಮಾಡದೆ ತಮ್ಮದೇ ಆದ ಸ್ವಂತ ಟ್ವಿಸ್ಟು, ಟರ್ನುಗಳನ್ನು ಸಿನಿಮಾಕ್ಕೆ ಸೇರಿಸಲು ಮುಂದಾಗಿದೆ. ಅಲ್ಲದೆ, ‘ದೃಶ್ಯಂ 3’ ಸಿನಿಮಾ ಹಿಂದಿಯಲ್ಲಿ ಬರುವ ಕೊನೆಯ ‘ದೃಶ್ಯಂ’ ಸರಣಿಯ ಸಿನಿಮಾ ಎನ್ನಲಾಗಿದೆ.

ಇದನ್ನೂ ಓದಿ:ಬಿಗ್​​ಬಾಸ್​​ ಮನೆಯಲ್ಲಿ ದರ್ಶನ್ ಸಿನಿಮಾ ಹಾಡು ಹಾಕಲ್ಲ ಏಕೆ? ಸುದೀಪ್ ಕೊಟ್ಟರು ಕಾರಣ

ಮಲಯಾಳಂನಲ್ಲಿ ಇತ್ತೀಚೆಗಷ್ಟೆ ‘ದೃಶ್ಯಂ 4’ ಸಿನಿಮಾವನ್ನು ಸಹ ಘೋಷಣೆ ಮಾಡಲಾಗಿದೆ. ‘ದೃಶ್ಯಂ 3’ ಸಿನಿಮಾಕ್ಕೆ ಸಾಕಷ್ಟು ಟೀಕೆ, ವ್ಯಂಗ್ಯ ವ್ಯಕ್ತವಾಗಿದೆ. ಆದರೆ ಈಗ ನಿರ್ದೇಶಕರು ‘ದೃಶ್ಯಂ 4’ ಸಹ ಘೋಷಣೆ ಮಾಡಿರುವುದು ಮತ್ತಷ್ಟು ಟ್ರೋಲಿಂಗ್​​ಗೆ ಕಾರಣವಾಗಿದೆ. ಆದರೆ ಹಿಂದಿ ತಂಡ ‘ದೃಶ್ಯಂ 3’ ಸಿನಿಮಾದ ಮೂಲಕ ಈ ಸರಣಿಯನ್ನು ಮುಕ್ತಾಯ ಮಾಡಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:15 pm, Sun, 30 August 26

Follow Us
ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!
ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ