‘ದೃಶ್ಯಂ 4’ ಸಿನಿಮಾ ಘೋಷಣೆ; ಸಿಕ್ವೇಲ್ ನಿರ್ಧಾರಕ್ಕೆ ಅಭಿಮಾನಿಗಳ ಕಿಡಿ
Drishyam 4 Announcement: ಮಲಯಾಳಂನ ಸೂಪರ್‌ಹಿಟ್ 'ದೃಶ್ಯಂ' ಸರಣಿಯ ನಾಲ್ಕನೇ ಭಾಗದ ಘೋಷಣೆಗೆ ಅಭಿಮಾನಿಗಳಿಂದ ನಿರಾಸೆ ವ್ಯಕ್ತವಾಗಿದೆ. ಮೂರನೇ ಭಾಗವೇ ನಿರೀಕ್ಷೆ ತಲುಪಲು ವಿಫಲವಾಗಿದ್ದು, ಈಗ ಮತ್ತೆ 'ದೃಶ್ಯಂ 4' ಮಾಡುವ ನಿರ್ಧಾರಕ್ಕೆ ಪ್ರೇಕ್ಷಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಮುಖ್ಯಾಂಶಗಳು
- 'ದೃಶ್ಯಂ 4' ಪ್ರಕಟಣೆ ಬೆನ್ನಲ್ಲೇ ವ್ಯಕ್ತವಾಯ್ತು ತೀವ್ರ ಅಸಮಾಧಾನ
- ಮೂರನೇ ಭಾಗದಲ್ಲೇ ಕಳೆದುಹೋಗಿತ್ತು ಮೊದಲಿನ ಆ ಟ್ವಿಸ್ಟ್ ಮ್ಯಾಜಿಕ್
- ನಿರ್ದೇಶಕ ಜೀತು ಜೋಸೆಫ್ ಮುಂದಿರುವ ಕಠಿಣ ಸವಾಲು
ಮಲಯಾಳಂ ಚಿತ್ರರಂಗದ ಯಶಸ್ವಿ ಸರಣಿ ‘ದೃಶ್ಯಂ’ ಸಿನಿಮಾ ಪ್ರೇಕ್ಷಕರನ್ನು ಅಪಾರವಾಗಿ ರಂಜಿಸಿತ್ತು. ಆದರೆ ಈಗ ನಾಲ್ಕನೇ ಭಾಗದ ಘೋಷಣೆ ಆಗುತ್ತಿದ್ದಂತೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಟ್ ಫ್ರಾಂಚೈಸಿಯನ್ನು ಅನಗತ್ಯವಾಗಿ ಮುಂದುವರಿಸಲಾಗುತ್ತಿದೆ ಎಂದು ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಅಭಿಮಾನಿಗಳು ಈಗಾಗಲೇ ‘ದೃಶ್ಯಂ 3’ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದರು. ಆ ಸಿನಿಮಾ ಕೂಡ ನಿರೀಕ್ಷಿತ ಮಟ್ಟ ತಲುಪಲು ವಿಫಲವಾಗಿತ್ತು. ಮೂರನೇ ಭಾಗವು ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಋಣಾತ್ಮಕ ಪ್ರತಿಕ್ರಿಯೆ ಪಡೆಯಿತು. ಸರಣಿಯಲ್ಲೇ ಇದು ಅತ್ಯಂತ ವೀಕ್ ಸಿನಿಮಾ ಎಂದು ಪ್ರೇಕ್ಷಕರು ಕರೆದಿದ್ದಾರೆ.
ಮೋಹನ್‌ಲಾಲ್ ಅವರ ನಟನೆ ಮತ್ತು ಭಾವನಾತ್ಮಕ ಸನ್ನಿವೇಶಗಳು ಗಮನಸೆಳೆದಿದ್ದವು. ಆದರೆ ಕಥೆಯನ್ನು ಅನಗತ್ಯವಾಗಿ ಎಳೆಯಲಾಗಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಕ್ಲಿಷ್ಟಕರ ನಿರೂಪಣೆ ಪ್ರೇಕ್ಷಕರಿಗೆ ಬೇಸರ ತರಿಸಿತ್ತು. ಕಥೆಯಲ್ಲಿ ಯಾವುದೇ ಹೊಸತನ ಇಲ್ಲದಿರುವುದು ಪ್ರೇಕ್ಷಕರ ನಿರಾಸೆಗೆ ಪ್ರಮುಖ ಕಾರಣವಾಗಿತ್ತು.
#Drishyam4 Officially Announced by Antony Perumbavoor #Mohanlal | Jeethu Joseph | Antony Perumbavoor #AashirvadCinemas pic.twitter.com/ytSf7g6G9W
— Sree_De.th_ (@SreedethS) August 22, 2026
ಮೊದಲ ಎರಡು ಭಾಗಗಳು ಅತ್ಯುತ್ತಮ ಸಸ್ಪೆನ್ಸ್ ಹೊಂದಿದ್ದವು. ಟ್ವಿಸ್ಟ್ ಹಾಗೂ ಡ್ರಾಮಾ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದವು. ಮೂರನೇ ಭಾಗದಲ್ಲಿ ಆ ರೀತಿಯ ಮ್ಯಾಜಿಕ್ ಸಂಪೂರ್ಣವಾಗಿ ಮಾಯವಾಗಿತ್ತು. ಇದರಿಂದಾಗಿ ನಾಲ್ಕನೇ ಭಾಗದ ಮೇಲಿನ ಭರವಸೆ ಸಂಪೂರ್ಣವಾಗಿ ಹುಸಿಯಾಗಿದೆ. ಈ ಸಿನಿಮಾ ಹಣ ಮಾಡುವ ತಂತ್ರ ಎಂದು ಅನೇಕರು ಕಿಡಿಕಾರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.
ಇದನ್ನೂ ಓದಿ: ಮೋಹನ್‌ಲಾಲ್ ನಟನೆಯ ದೃಶ್ಯಂ ಒಟಿಟಿ ರಿಲೀಸ್ ಡೇಟ್ ಫಿಕ್ಸ್? ಇಲ್ಲಿದೆ ಅಪ್‌ಡೇಟ್
ಈಗ ನಿರ್ದೇಶಕ ಜೀತು ಜೋಸೆಫ್ ಅವರ ನಡೆ ಕುತೂಹಲ ಮೂಡಿಸಿದೆ. ಅವರು ಹಳೆಯ ಕಥೆಯನ್ನು ಮುಂದುವರಿಸುತ್ತಾರೋ ಅಥವಾ ಹೊಸ ಕಾನ್ಸೆಪ್ಟ್ ತರುತ್ತಾರೋ ಎಂಬ ಪ್ರಶ್ನೆ ಎದ್ದಿದೆ. ಮುಂದಿನ ದಿನಗಳಲ್ಲಿ ‘ದೃಶ್ಯಂ 4’ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಈ ಹೊಸ ಭಾಗವು ಹಳೆಯ ಯಶಸ್ಸನ್ನು ಮರಳಿ ತರುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




