AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ ಒಟಿಟಿ ರಿಲೀಸ್ ಡೇಟ್ ಫಿಕ್ಸ್? ಇಲ್ಲಿದೆ ಅಪ್‌ಡೇಟ್

ಮೋಹನ್‌ಲಾಲ್ ಅವರ 'ದೃಶ್ಯಂ 3' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 230 ಕೋಟಿಗೂ ಹೆಚ್ಚು ಗಳಿಕೆ ಮಾಡಿ ದಾಖಲೆ ಬರೆದಿದೆ. ಮೊದಲ ಎರಡು ಭಾಗಗಳಿಗೆ ಹೋಲಿಸಿದರೆ ಮಿಶ್ರ ಪ್ರತಿಕ್ರಿಯೆ ಪಡೆದರೂ, ಚಿತ್ರ ಯಶಸ್ವಿಯಾಗಿದೆ. ಇದೀಗ ಚಿತ್ರದ OTT ಬಿಡುಗಡೆಗೆ ಪ್ರೇಕ್ಷಕರು ಕಾತರರಾಗಿದ್ದು, ಅಮೆಜಾನ್ ಪ್ರೈಮ್ ವಿಡಿಯೋ ಡಿಜಿಟಲ್ ಹಕ್ಕುಗಳನ್ನು ಖರೀದಿಸಿದೆ. ಜೂನ್ ಅಂತ್ಯದಲ್ಲಿ ಚಿತ್ರ OTTಗೆ ಬರುವ ಸಾಧ್ಯತೆ ಇದೆ.

ಮೋಹನ್‌ಲಾಲ್ ನಟನೆಯ 'ದೃಶ್ಯಂ 3' ಒಟಿಟಿ ರಿಲೀಸ್ ಡೇಟ್ ಫಿಕ್ಸ್? ಇಲ್ಲಿದೆ ಅಪ್‌ಡೇಟ್
ದೃಶ್ಯಂ 3
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 08, 2026 | 8:08 AM

Share

ಭಾರತೀಯ ಚಿತ್ರರಂಗದ ಅತ್ಯುತ್ತಮ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಪಟ್ಟಿಯನ್ನು ನೋಡಿದರೆ ಅದರಲ್ಲಿ ‘ದೃಶ್ಯಂ’ ಸರಣಿಯ ಚಿತ್ರಗಳು ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಮಾಲಿವುಡ್ ಸೂಪರ್‌ಸ್ಟಾರ್ ಮೋಹನ್ ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಅವರ ಕಾಂಬಿನೇಷನ್‌ನಲ್ಲಿ ಮೂಡಿಬಂದ ಈ ಚಿತ್ರಗಳು ಪ್ರೇಕ್ಷಕರಿಗೆ ರೋಮಾಂಚಕ ಅನುಭವ ನೀಡುವುದರ ಜೊತೆಗೆ ಬಾಕ್ಸ್ ಆಫೀಸ್‌ನಲ್ಲೂ ಕಲೆಕ್ಷನ್ ಸುರಿಮಳೆಗೈದಿವೆ. ಇದೀಗ ಈ ಸೂಪರ್ ಹಿಟ್ ಸರಣಿಯ ಇತ್ತೀಚಿನ ಚಿತ್ರ ‘ದೃಶ್ಯಂ 3’ ಪ್ರೇಕ್ಷಕರ ಮುಂದೆ ಬಂದಿದೆ. ಮೊದಲ ಎರಡು ಭಾಗಗಳನ್ನು ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ ಈ ಮೂರನೇ ಭಾಗವನ್ನೂ ನಿರ್ದೇಶಿಸಿದ್ದು, ನಟ ಮೋಹನ್ ಲಾಲ್ ಅವರ 66 ನೇ ಹುಟ್ಟುಹಬ್ಬದ ವಿಶೇಷ ಸಂದರ್ಭವಾಗಿ ಮೇ 21 ರಂದು ಈ ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ.

ಆದಾಗ್ಯೂ, ಮೊದಲ ಎರಡು ಭಾಗಗಳಿಗೆ ಹೋಲಿಸಿದರೆ ಈ ಮೂರನೇ ಭಾಗಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ಮೊದಲಿನಷ್ಟು ಸಸ್ಪೆನ್ಸ್ ಮತ್ತು ರೋಮಾಂಚಕ ಅಂಶಗಳು ಕಂಡುಬಂದಿಲ್ಲ ಎಂಬ ವಿಮರ್ಶೆಗಳು ಕೇಳಿಬಂದಿವೆ. ಹಾಗಿದ್ದರೂ, ಈ ಚಿತ್ರವು ಕಲೆಕ್ಷನ್ ವಿಚಾರದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತ ಮುನ್ನುಗ್ಗುತ್ತಿದೆ. ವ್ಯಾಪಾರ ಮೂಲಗಳ ಪ್ರಕಾರ, ದೃಶ್ಯಂ 3 ಸಿನಿಮಾ ಇದುವರೆಗೆ ವಿಶ್ವಾದ್ಯಂತ ಬರೋಬ್ಬರಿ 230.23 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿದೆ. ಈ ಚಿತ್ರವು ಕರ್ನಾಟಕದಲ್ಲಿ ಅಷ್ಟಾಗಿ ಸದ್ದು ಮಾಡದಿದ್ದರೂ, ಮಲಯಾಳಂನಲ್ಲಿ ಮಾತ್ರ ಇಂದಿಗೂ ಹೌಸ್‌ಫುಲ್ ಪ್ರದರ್ಶನಗಳೊಂದಿಗೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಇನ್ನು ಚಿತ್ರಮಂದಿರಗಳಲ್ಲಿ ಅಬ್ಬರಿಸಿದ ‘ದೃಶ್ಯಂ 3’ ಚಿತ್ರವನ್ನು ಒಟಿಟಿಯಲ್ಲಿ ನೋಡಲು ಸಿನಿಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಚಿತ್ರದ ಒಟಿಟಿ ಬಿಡುಗಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ದೊಡ್ಡ ಅಪ್‌ಡೇಟ್ ವೈರಲ್ ಆಗಿದೆ. ‘ದೃಶ್ಯಂ 3’ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪ್ರಮುಖ ಒಟಿಟಿ ಸಂಸ್ಥೆಯಾದ ಅಮೆಜಾನ್ ಪ್ರೈಮ್ ವಿಡಿಯೋ ಭಾರಿ ಮೊತ್ತಕ್ಕೆ ಖರೀದಿಸಿದೆ. ಥಿಯೇಟರ್‌ನಲ್ಲಿ ರಿಲೀಸ್ ಆದ ಆರು ಅಥವಾ ಎಂಟು ವಾರಗಳ ನಂತರ ಒಟಿಟಿಗೆ ತರಬೇಕು ಎಂಬ ಚಿತ್ರರಂಗದ ನಿಯಮವು ಈ ಸಿನಿಮಾಗೂ ಅನ್ವಯಿಸುವುದರಿಂದ, ಜೂನ್ ಕೊನೆಯ ವಾರದಲ್ಲಿ ಇದು ಒಟಿಟಿಗೆ ಬರುವ ಸಾಧ್ಯತೆಯಿದೆ. ಸದ್ಯದ ಮಾಹಿತಿ ಪ್ರಕಾರ, ಜೂನ್ 18 ಅಥವಾ ಜೂನ್ 25 ರಂದು ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದ್ದು, ಈ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದೆ.

ಇದನ್ನೂ ಓದಿ: ಬುಧವಾರವೂ ಜಾರ್ಜ್‌ಕುಟ್ಟಿ ಕಮಾಲ್; 7 ದಿನಕ್ಕೆ ‘ದೃಶ್ಯಂ 3’ ಗಳಿಕೆ ಎಷ್ಟು?

ಆಶೀರ್ವಾದ್ ಸಿನಿಮಾಸ್, ಪನೋರಮಾ ಸ್ಟುಡಿಯೋಸ್ ಮತ್ತು ಪೆನ್ ಸ್ಟುಡಿಯೋಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಮೋಹನ್ ಲಾಲ್ ಅವರಿಗೆ ಜೋಡಿಯಾಗಿ ನಟಿ ಮೀನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಅನ್ಸಿಬಾ ಹಾಸನ್, ಎಸ್ತರ್ ಅನಿಲ್, ಕಲಾಭವನ್ ಶಾಜನ್, ಸಿದ್ದಿಕ್, ಮುರಳಿ ಗೋಪಿ, ಆಶಾ ಶರತ್ ಹಾಗೂ ಬಿಜು ಮೆನನ್ ಒಳಗೊಂಡ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಇನ್ನು ಚಿತ್ರದ ಕಥೆಗೆ ತಕ್ಕಂತೆ ಅನಿಲ್ ಜಾನ್ಸನ್ ಅವರು ಅದ್ಭುತವಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More