AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವನ್, ನವಿಲಾ ಜೋ, ನವೀನ್ ನಟನೆಯ ‘ಮನ ಮನ ಮಿಡಿದಿದೆ’ ಆಲ್ಬಂ ಸಾಂಗ್

ಜೀವನ್ ಹಳ್ಳಿಕಾರ್, ನವಿಲಾ ಜೋ ಮತ್ತು ನವೀನ್ ಅವರು ಅಭಿನಯಿಸಿರುವ ‘ಮನ ಮನ ಮಿಡಿದಿದೆ’ ಹಾಡು ಬಿಡುಗಡೆ ಆಗಿದೆ. ಈ ಆಲ್ಬಂ ಹಾಡಿನ ವಿಶೇಷತೆಗಳ ಬಗ್ಗೆ ತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ಜೀವನ್ ಹಳ್ಳಿಕಾರ್ ಅವರ ಯೂಟ್ಯೂಬ್ ಚಾನೆಲ್‌ ಮೂಲಕ ಹಾಡು ಲಭ್ಯವಾಗಿದೆ.

ಜೀವನ್, ನವಿಲಾ ಜೋ, ನವೀನ್ ನಟನೆಯ ‘ಮನ ಮನ ಮಿಡಿದಿದೆ’ ಆಲ್ಬಂ ಸಾಂಗ್
Mana Mana Mididide
ಮದನ್​ ಕುಮಾರ್​
|

Updated on: Oct 06, 2026 | 9:44 PM

Share

ಕನ್ನಡದ ಆಲ್ಬಂ ಹಾಡುಗಳ ಸಾಲಿಗೆ ‘ಮನ ಮನ ಮಿಡಿದಿದೆ’ ಎಂಬ ಹೊಸ ಗೀತೆ ಕೂಡ ಸೇರ್ಪಡೆ ಆಗಿದೆ. ಇದು ಸಂಗೀತ, ನೃತ್ಯ, ಭಾವನೆ ಮತ್ತು ದೃಶ್ಯಕಥನವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಸುಮಧುರ ಸಂಗೀತ ಪಯಣ ಎಂದು ಈ ಟೀಮ್ ಹೇಳಿದೆ. ಸಂಗೀತದೊಂದಿಗೆ ಡ್ರಮ್ ವಾದನ ಹಾಗೂ ಗಾಯನದ ಸೊಗಸನ್ನು ಕೂಡ ಒಳಗೊಂಡಿರುವ ಈ ಹಾಡು, ಪ್ರೇಕ್ಷಕರಿಗೆ ವಿಭಿನ್ನವಾದ ಸಂಗೀತ ಮತ್ತು ದೃಶ್ಯಾನುಭವವನ್ನು ನೀಡುವ ಪ್ರಯತ್ನವಾಗಿದೆ ಎನ್ನುವುದರೊಂದಿಗೆ ಈ ಹಾಡನ್ನು ಇತ್ತೀಚೆಗೆ ರಿಲೀಸ್ ಮಾಡಲಾಯಿತು.

‘ಮನ ಮನ ಮಿಡಿದಿದೆ’ ಹಾಡಿನಲ್ಲಿ ಜೀವನ್ ಹಳ್ಳಿಕಾರ್ ಅವರು ಮುಖ್ಯ ಪಾತ್ರದಲ್ಲಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ಅಭಿನಯದ ಜೊತೆಗೆ ಅವರು ಈ ಹಾಡಿನ ಸಾಹಿತ್ಯ ರಚನೆ, ನೃತ್ಯ ಸಂಯೋಜನೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನೂ ಕೂಡ ನಿಭಾಯಿಸಿದ್ದಾರೆ. ನೃತ್ಯ ಸಂಯೋಜಕ ಹಾಗೂ ಚಿತ್ರ ನಿರ್ದೇಶಕರಾಗಿ ತಮ್ಮ ಅನುಭವವನ್ನು ಬಳಸಿಕೊಂಡು ಈ ಹಾಡನ್ನು ರೂಪಿಸಿದ್ದಾರೆ.

ಈ ಹಾಡಿಗೆ ಸಿದ್ಧಾರ್ಥ್ ಕಾಮತ್ ಅವರು ಸಂಗೀತ ಸಂಯೋಜಿಸಿದ್ದಾರೆ. ಸಾಕ್ಷಿ ಭಾಗವತ್ ಹಾಗೂ ಸಿದ್ಧಾರ್ಥ್ ಕಾಮತ್ ಅವರು ಜೊತೆಯಾಗಿ ಧ್ವನಿ ನೀಡಿದ್ದಾರೆ. ಈ ಗೀತೆಯ ಕಲಾವಿದರ ಬಳಗದಲ್ಲಿ ನವಿಲಾ ಜೋ ಮತ್ತು ನವೀನ್ ಕೂಡ ಇದ್ದಾರೆ. ತಮ್ಮ ಅಭಿನಯದ ಮೂಲಕ ಮೆರುಗು ಹೆಚ್ಚಿಸಿದ್ದಾರೆ. ಜೀವನ್ ಹಳ್ಳಿಕಾರ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಲಭ್ಯವಾಗಿದೆ.

‘ಗ್ಲಿಟ್ಟರರ್ಸ್‌ ಸ್ಟಾರ್ ಹೌಸ್ ಪ್ರೊಡಕ್ಷನ್ಸ್’ ಮೂಲಕ ‘ಮನ ಮನ ಮಿಡಿದಿದೆ’ ಹಾಡನ್ನು ನಿರ್ಮಿಸಲಾಗಿದೆ. ಸಂಗೀತ, ಪ್ರದರ್ಶನ ಹಾಗೂ ದೃಶ್ಯಕಥನವನ್ನು ಒಟ್ಟುಗೂಡಿಸಿ ವಿಭಿನ್ನವಾದ ಮೂಲ ಸಂಗೀತ ಕಂಟೆಂಟ್‌ಗಳನ್ನು ರೂಪಿಸುವ ತಮ್ಮ ಸಂಸ್ಥೆಯ ಪ್ರಯತ್ನದ ಮುಂದುವರಿದ ಭಾಗವಾಗಿ ಈ ಆಲ್ಬಂ ಸಾಂಗ್ ಮೂಡಿಬಂದಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸರಳ, ಸುಂದರ ಪ್ರೇಮಕಥೆ ಹೇಳುವ ‘ಕನಸಲು’ ಆಲ್ಬಂ ಹಾಡು ಬಿಡುಗಡೆ

ಎಡಿಟರ್ ಆಕಾಶ್ ಎಸ್. ಮಹೇಂದ್ರಕರ್ ಅವರು ಹಾಡಿನ ದೃಶ್ಯಕಥನಕ್ಕೆ ಅಂತಿಮ ರೂಪ ನೀಡಿದ್ದಾರೆ. ಕಲರಿಸ್ಟ್ ಕಿಶೋರ್ ಅಕ್ಕನ್ನ ಅವರು ಬಣ್ಣ ಸಂಯೋಜನೆಯಿಂದ ದೃಶ್ಯಗಳಿಗೆ ಇನ್ನಷ್ಟು ಆಕರ್ಷಕ ಹಾಗೂ ವಿಶಿಷ್ಟ ಸ್ಪರ್ಶ ನೀಡಿದ್ದಾರೆ. ಈ ಹಾಡನ್ನು ವೀಕ್ಷಿಸಿದವರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದು ತಂಡಕ್ಕೆ ಖುಷಿ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ