AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರಿಕೆ ಆಗುತ್ತಿದೆ ‘ರಾಮಾಯಣ’ ಗಳಿಕೆ, ಮೂರು ದಿನಕ್ಕೆ ಗಳಿಸಿದ್ದೆಷ್ಟು?

ಭಾರಿ ನಿರೀಕ್ಷೆಗಳ ಮೂಲಕ ಬಿಡುಗಡೆ ಆದ ‘ರಾಮಾಯಣ’ ಸಿನಿಮಾ ಮೊದಲ ದಿನ ನಿರೀಕ್ಷಿತ ಗಳಿಕೆಯನ್ನು ಮಾಡಿರಲಿಲ್ಲ. ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 129 ಕೋಟಿ ರೂಪಾಯಿ ಗಳಿಸಿದ್ದು, ಇದು ಸಾಧಾರಣ ಮೊತ್ತ ಎನ್ನಲಾಗಿತ್ತು. ಆದರೆ ಆ ನಂತರದ ಎರಡು ದಿನಗಳಲ್ಲಿ ಗಳಿಕೆಯಲ್ಲಿ ಏರಿಕೆ ಕಂಡಿದೆ. ಶನಿವಾರ ಒಂದೇ ದಿನ 45% ಏರಿಕೆ ಆಗಿದೆ. ಆ ಮೂಲಕ ಮೂರು ದಿನಕ್ಕೆ ಉತ್ತಮ ಮೊತ್ತದ ಗಳಿಕೆಯನ್ನು ಮಾಡಿದೆ ಸಿನಿಮಾ.

ಏರಿಕೆ ಆಗುತ್ತಿದೆ ‘ರಾಮಾಯಣ’ ಗಳಿಕೆ, ಮೂರು ದಿನಕ್ಕೆ ಗಳಿಸಿದ್ದೆಷ್ಟು?
Ramayana
ಮಂಜುನಾಥ ಸಿ.
|

Updated on: Nov 08, 2026 | 9:57 AM

Share

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್
  • ಮೂರು ದಿನಕ್ಕೆ ಸಿನಿಮಾ ಗಳಿಕೆ ಮಾಡಿದ್ದೆಷ್ಟು?
  • ಏರಿಕೆ ಆಗಿದೆ ‘ರಾಮಾಯಣ’ ಸಿನಿಮಾ ಗಳಿಕೆ

ರಣ್​​ಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟಿಸಿ ನಿತೇಶ್ ತಿವಾರಿ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ‘ರಾಮಾಯಣ: ಭಾಗ 1’ ಇದೇ ಗುರುವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಭಾರಿ ನಿರೀಕ್ಷೆಗಳ ಮೂಲಕ ಬಿಡುಗಡೆ ಆದ ಈ ಸಿನಿಮಾ ಮೊದಲ ದಿನ ನಿರೀಕ್ಷಿತ ಗಳಿಕೆಯನ್ನು ಮಾಡಿರಲಿಲ್ಲ. ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 129 ಕೋಟಿ ರೂಪಾಯಿ ಗಳಿಸಿದ್ದು, ಇದು ಸಾಧಾರಣ ಮೊತ್ತ ಎನ್ನಲಾಗಿತ್ತು. ಆದರೆ ಆ ನಂತರದ ಎರಡು ದಿನಗಳಲ್ಲಿ ಗಳಿಕೆಯಲ್ಲಿ ಏರಿಕೆ ಕಂಡಿದೆ. ಶನಿವಾರ ಒಂದೇ ದಿನ 45% ಏರಿಕೆ ಆಗಿದೆ. ಆ ಮೂಲಕ ಮೂರು ದಿನಕ್ಕೆ ಉತ್ತಮ ಮೊತ್ತದ ಗಳಿಕೆಯನ್ನು ಮಾಡಿದೆ ಸಿನಿಮಾ.

‘ರಾಮಾಯಣ’ ಸಿನಿಮಾ ಬಿಡುಗಡೆಯಾದ ಮೂರು ದಿನಗಳಲ್ಲೇ ಭಾರತದಲ್ಲಿ 182.70 ಕೋಟಿ ನೆಟ್ ಗಳಿಕೆ ಮಾಡಿದೆ ಎಂದು ಸಿನಿಮಾ ಗಳಿಕೆ ಟ್ರ್ಯಾಕ್ ಮಾಡುವ ಸ್ಯಾಕ್ನಿಲ್ಕ್ ಅಂದಾಜಿಸಿದೆ. ಮೊದಲ ದಿನ ಭಾರತದಲ್ಲಿ 64.85 ಕೋಟಿ ಗಳಿಸಿದ್ದ ಚಿತ್ರ, ಎರಡನೇ ದಿನ 48.05 ಕೋಟಿಗೆ ಇಳಿದಿತ್ತು. ಆದರೆ ಶನಿವಾರ ಮೂರನೇ ದಿನ ಶೇ 45ರಷ್ಟು ಜಿಗಿತ ಕಂಡು 69.80 ಕೋಟಿ ಬಾಚಿಕೊಂಡಿದೆ. ಇದು ಮೊದಲ ದಿನದ ಗಳಿಕೆಯನ್ನೂ ಮೀರಿಸಿದೆ. ಆ ಮೂಲಕ ‘ರಾಮಾಯಣ’ ಸಿನಿಮಾಕ್ಕೆ ಜನ ಸ್ಪಂದನೆ ದೊರಕುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ವಿಶ್ವ ಬಾಕ್ಸ್ ಆಫೀಸ್​​ ಗಳಿಕೆ ನೋಡುವುದಾದರೆ ಮೂರು ದಿನಗಳಲ್ಲಿ ಸುಮಾರು 375.50 ಕೋಟಿ ಗಳಿಕೆ ಮಾಡಿದೆ ಈ ಸಿನಿಮಾ. ಮೊದಲ ದಿನವೇ ವಿಶ್ವಾದ್ಯಂತ 130 ಕೋಟಿ ಗಳಿಸಿರುವುದಾಗಿ ಚಿತ್ರತಂಡ ತಿಳಿಸಿತ್ತು. ವಿದೇಶಗಳಲ್ಲಿ ಎರಡೇ ದಿನದಲ್ಲಿ 10 ಮಿಲಿಯನ್ ಡಾಲರ್ ಗಡಿ ದಾಟಿದ್ದು, ಉತ್ತರ ಅಮೆರಿಕ ಮುಂಚೂಣಿಯಲ್ಲಿದೆ.

ಇದನ್ನೂ ಓದಿ:ಎರಡೇ ದಿನಕ್ಕೆ 221 ಕೋಟಿ ರೂಪಾಯಿ ಗಳಿಸಿದ ‘ರಾಮಾಯಣ’ ಸಿನಿಮಾ; ಕನ್ನಡದಲ್ಲೆಷ್ಟು?

ಸಿನಿಮಾದ ಕನ್ನಡ ಆವೃತ್ತಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು. ಮೂರನೇ ದಿನ ಕನ್ನಡದಲ್ಲಿ 6.30 ಕೋಟಿ ರೂ ಗಳಿಕೆಯಾಗಿದ್ದು, ಥಿಯೇಟರ್ ಭರ್ತಿ ಪ್ರಮಾಣ ಶೇ 66.5ರಷ್ಟಿತ್ತು. ತೆಲುಗಿನಲ್ಲಿ 6 ಕೋಟಿ ಗಳಿಕೆಯಾಗಿದೆ. ತಮಿಳು ಮತ್ತು ಮಲಯಾಳಂ ಆವೃತ್ತಿಗಳಲ್ಲಿ ಭರ್ತಿ ಪ್ರಮಾಣ ಕ್ರಮವಾಗಿ ಶೇ 78.5 ಮತ್ತು ಶೇ 83ರಷ್ಟಿತ್ತು. ಒಟ್ಟು ನೆಟ್ ಗಳಿಕೆಯಲ್ಲಿ ಹಿಂದಿ ಆವೃತ್ತಿಯ ಪಾಲು ಸುಮಾರು ಶೇ 74ರಷ್ಟಿದೆ.

ದೀಪಾವಳಿ ರಜೆ ಮತ್ತು ವಾರಾಂತ್ಯದ ಕಾರಣ ಭಾನುವಾರವೂ ಚಿತ್ರಮಂದಿರಗಳಲ್ಲಿ ಉತ್ತಮ ಜನಸಂದಣಿ ನಿರೀಕ್ಷಿಸಲಾಗಿದೆ. ಹೀಗಾಗಿ ಮೊದಲ ವಾರಾಂತ್ಯದ ಗಳಿಕೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎಂಬುದು ವಿಶ್ಲೇಷಕರ ಲೆಕ್ಕಾಚಾರ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಹಾಸನಾಂಬೆ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಮುಗಿಬಿದ್ದ ಭಕ್ತರು
ಹಾಸನಾಂಬೆ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಮುಗಿಬಿದ್ದ ಭಕ್ತರು
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ