ದೀಪಾವಳಿ ಹಬ್ಬದ ಖರೀದಿ ಭರಾಟೆ: ಮುಂಜಾನೆ 3 ಗಂಟೆಯಿಂದಲೇ ಬೆಂಗಳೂರಿನ ಕೆ.ಆರ್.ಮಾರ್ಕೆಟ್ನಲ್ಲಿ ಜನಸಾಗರ
ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರಿನ ಕೆ.ಆರ್.ಮಾರ್ಕೆಟ್ಗೆ ಬೆಳಗ್ಗೆ 3 ಗಂಟೆಯಿಂದಲೇ ಗ್ರಾಹಕರು ಹೂವು, ಹಣ್ಣು, ದೀಪಗಳ ಖರೀದಿಗೆ ಆಗಮಿಸಿದ್ದಾರೆ. ಮಾರುಕಟ್ಟೆ ಜನರಿಂದ ಕಿಕ್ಕಿರಿದು ತುಂಬಿದ್ದು, ಹೆಜ್ಜೆ ಇಡಲೂ ಸಹ ಜಾಗವಿಲ್ಲದಷ್ಟು ಜನದಟ್ಟಣೆಯಾಗಿದೆ. ಹಬ್ಬದ ಖರೀದಿ ಭರಾಟೆಯಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಕೂಡ ಕಂಡುಬಂದಿದೆ.
ಬೆಂಗಳೂರು, ನವೆಂಬರ್ 08: ದೀಪಾವಳಿ ಹಬ್ಬದ ಹಿನ್ನೆಲೆ ಬೆಂಗಳೂರಿನ ಕೆ.ಆರ್. ಮಾರ್ಕೆಟ್ನಲ್ಲಿ ಹಬ್ಬಕ್ಕೆ ಪೂಜಾ ಸಾಮಗ್ರಿ, ಹಣ್ಣು, ಹೂವಿನ ಖರೀದಿ ಜೋರಾಗಿ ನಡೆದಿದೆ. ಮುಂಜಾನೆ 3 ಗಂಟೆಯಿಂದಲೇ ಮಾರ್ಕೆಟ್ಗೆ ಗ್ರಾಹಕರು ಬರುತ್ತಿದ್ದು, ತೀವ್ರ ಜನಜಂಗುಳಿ ಕಂಡುಬಂದಿದೆ. ಇನ್ನು ಹಬ್ಬದ ಹಿನ್ನೆಲೆ ಹೂವಿನ ದರ ಗಗನಕ್ಕೇರಿದ್ದು, ಬೆಲೆ ಏರಿಕೆ ನಡುವೆಯೂ ಗ್ರಾಹಕರು ಖರೀದಿಯಲ್ಲಿ ತೊಡಗಿದ್ದಾರೆ. ಕೆಜಿ ಸೇವಂತಿಗೆ ಹೂವು 250 ರೂ.ನಿಂದ 300 ರೂ.ಗೆ ಮಾರಾಟವಾಗುತ್ತಿದರೆ, ಗುಲಾಬಿ ಕೆಜಿಗೆ 300 ರೂ., ಮಲ್ಲಿಗೆ ಒಂದು ಕೆಜಿ 1,500 ರೂ., ಒಂದು ಕೆಜಿ ಕನಕಾಂಬರ ಹೂವು 2000 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

