AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್​​ ಮನೆಯಲ್ಲಿ ದರ್ಶನ್ ಸಿನಿಮಾ ಹಾಡು ಹಾಕಲ್ಲ ಏಕೆ? ಸುದೀಪ್ ಕೊಟ್ಟರು ಕಾರಣ

Bigg Boss Kannada season 13: ಕನ್ನಡದ ಹಲವು ನಟರ ಹಾಡುಗಳನ್ನು ಬಿಗ್​​ಬಾಸ್ ಮನೆಯಲ್ಲಿ ಹಾಕಲಾಗುತ್ತದೆ. ಆದರೆ ದರ್ಶನ ಹಾಡುಗಳು ಬಿಗ್​​ಬಾಸ್ ಮನೆಯಲ್ಲಿ ಕೇಳುವುದು ಅಪರೂಪ. ಬಹುತೇಕ ಇಲ್ಲವೆಂದೇ ಹೇಳಬೇಕು. ಈ ಹಿಂದೆ ಕೆಲ ಸ್ಪರ್ಧಿಗಳು ಈ ಬಗ್ಗೆ ಮೆಯ ಒಳಗಡೆಯೇ ಪ್ರಶ್ನೆ ಮಾಡಿದ್ದರು. ಇದೀಗ ಸುದೀಪ್ ಅವರಿಗೆ ನೇರವಾಗಿ ಈ ಪ್ರಶ್ನೆ ಎದುರಾಗಿದೆ. ಸುದೀಪ್ ಅವರು ನೇರವಾಗಿ ಉತ್ತರ ನೀಡಿದ್ದಾರೆ.

ಬಿಗ್​​ಬಾಸ್​​ ಮನೆಯಲ್ಲಿ ದರ್ಶನ್ ಸಿನಿಮಾ ಹಾಡು ಹಾಕಲ್ಲ ಏಕೆ? ಸುದೀಪ್ ಕೊಟ್ಟರು ಕಾರಣ
Kichcha Sudeep
ಮಂಜುನಾಥ ಸಿ.
|

Updated on:Aug 30, 2026 | 5:59 PM

Share

ಮುಖ್ಯಾಂಶಗಳು

  • ಬಿಗ್​​ಬಾಸ್ ಕುರಿತು ಸುದೀಪ್ ಸುದ್ದಿಗೋಷ್ಠಿ ಮಾಡಿದ್ದಾರೆ.
  • ಬಿಗ್​​ಬಾಸ್ ಮನೆಯಲ್ಲಿ ದರ್ಶನ್ ಹಾಡುಗಳ ಹಾಕಲ್ಲ ಏಕೆಂಬ ಪ್ರಶ್ನೆ ಎದುರಾಗಿದೆ
  • ಪ್ರಶ್ನೆಗೆ ಸುದೀಪ್ ಅವರು ನೇರಾ-ನೇರ ಉತ್ತರ ನೀಡಿದ್ದಾರೆ.

ಬಿಗ್​​ಬಾಸ್ (Bigg Boss) ಮನೆಯ ಪ್ರಮುಖ ಆಕರ್ಷಣೆಯೆಂದರೆ ಪ್ರತಿ ದಿನ ಬೆಳಿಗ್ಗೆ ಮನೆಯಲ್ಲಿ ಹಾಕುವ ಹಾಡುಗಳು ಹಾಗೂ ಬಿಗ್​​ಬಾಸ್ ಸ್ಪರ್ಧಿಗಳು ಹಾಡಿಗೆ ತಕ್ಕಂತೆ ಮಾಡುವ ಡ್ಯಾನ್ಸ್. ಬಿಗ್​​ಬಾಸ್ ಸ್ಪರ್ಧಿಗಳಿಗೆ ಬೆಳಕಾಗುವುದೇ ಹಾಡುಗಳ ಮೂಲಕ. ಸಖತ್ ಜೋಶ್ ತುಂಬುವ ಕನ್ನಡ ಹಾಡುಗಳನ್ನು ಬಿಗ್​​ಬಾಸ್ ಮನೆಯಲ್ಲಿ ಹಾಕಲಾಗುತ್ತದೆ. ಕನ್ನಡದ ಹಲವು ನಟರ ಹಾಡುಗಳನ್ನು ಬಿಗ್​​ಬಾಸ್ ಮನೆಯಲ್ಲಿ ಹಾಕಲಾಗುತ್ತದೆ. ಆದರೆ ದರ್ಶನ ಹಾಡುಗಳು ಬಿಗ್​​ಬಾಸ್ ಮನೆಯಲ್ಲಿ ಕೇಳುವುದು ಅಪರೂಪ. ಬಹುತೇಕ ಇಲ್ಲವೆಂದೇ ಹೇಳಬೇಕು. ಈ ಹಿಂದೆ ಕೆಲ ಸ್ಪರ್ಧಿಗಳು ಈ ಬಗ್ಗೆ ಮೆಯ ಒಳಗಡೆಯೇ ಪ್ರಶ್ನೆ ಮಾಡಿದ್ದರು. ಇದೀಗ ಸುದೀಪ್ ಅವರಿಗೆ ನೇರವಾಗಿ ಈ ಪ್ರಶ್ನೆ ಎದುರಾಗಿದೆ.

ಬಿಗ್​​ಬಾಸ್ ಕನ್ನಡ ಸೀಸನ್ 13 ಕೆಲವೇ ದಿನಗಳಲ್ಲಿ ಪ್ರಾರಂಭ ಆಗಲಿದ್ದು, ಇಂದು (ಆಗಸ್ಟ್ 20) ಬಿಗ್​​ಬಾಸ್ ಪ್ರೀ ಲಾಂಚ್ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿತ್ತು. ಧೀರ್ಘವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ನಾನಾ ರೀತಿಯ ಪ್ರಶ್ನೆಗಳನ್ನು ಸುದೀಪ್ ಅವರಿಗೆ ಕೇಳಿದರು. ಸುದೀಪ್ ಸಹ ಕೆಲವೊಮ್ಮೆ ನೇರವಾಗಿ, ಕೆಲವೊಮ್ಮ ಪರೋಕ್ಷವಾಗಿ. ಕೆಲವು ಪ್ರಶ್ನೆಗಳಿಗೆ ತಮಾಷೆಯಾಗಿ, ಕೆಲವಕ್ಕೆ ಗಂಭೀರವಾಗಿ ಉತ್ತರಗಳನ್ನು ನೀಡಿದರು. ಬಿಗ್​​ಬಾಸ್ ಮನೆಯಲ್ಲಿ ದರ್ಶನ್ ಹಾಡು ಹಾಕಲ್ಲ ಎಂಬ ಪ್ರಶ್ನೆ ಸಹ ಸುದೀಪ್ ಅವರಿಗೆ ಎದುರಾಯ್ತು.

ಪ್ರಶ್ನೆ ಕೇಳಿದ ಕೂಡಲೇ, ‘ಇದು ಕಾನೂನು ಪರಿಣಿತಿ ಬೇಡುವ ಪ್ರಶ್ನೆ, ಕಾನೂನು ಪ್ರಶ್ನೆ, ಕಾನೂನು ತಂಡವನ್ನು ಸಂಪರ್ಕಿಸಿ ಉತ್ತರ ಕೊಡುತ್ತೇನೆ’ ಎಂದು ಕಾಲೆಳೆದರು. ಮಾತು ಮುಂದುವರಿಸಿದ ಸುದೀಪ್, ‘ಇದು ‘ಟಾಕ್ಸಿಕ್’ ಪ್ರಶ್ನೆ. ಉದ್ದೇಶಪೂರ್ವಕವಾಗಿ ಕೇಳಲಾದ ಪ್ರಶ್ನೆಯಂತೆ ತೋರುತ್ತಿದೆ ಎಂದು ಸುದೀಪ್, ‘ನನಗೆ ಯಾರ ಮೇಲೂ ದ್ವೇಷ ಎಂಬುದು ಇಲ್ಲ. ಬದಲಿಗೆ ಎಲ್ಲರ ಬಗ್ಗೆಯೂ ಪ್ರೀತಿ, ಗೌರವಗಳೇ ಇದೆ. ಎಲ್ಲರೂ ಚೆನ್ನಾಗಿರಲಿ ಎಂದೇ ನಾನು ಬಯಸುತ್ತೀನಿ. ದರ್ಶನ್ ಹಾಡುಗಳನ್ನು ಹಾಕುತ್ತಿಲ್ಲ ಎಂದರೆ ಅದಕ್ಕೆ ಕಾರಣಗಳು ಇರಬಹುದು. ಒಂದೊಮ್ಮೆ ಆ ಹಾಡುಗಳನ್ನು ಹಾಕಬೇಡಿ ಎಂಬ ಒತ್ತಡವೂ ಬಂದಿರಬಹುದು, ಬೆದರಿಕೆಯೂ ಬಂದಿರಬಹುದು’ ಎಂದರು ಸುದೀಪ್.

ಇದನ್ನೂ ಓದಿ:ಬಿಗ್​​ಬಾಸ್ ಅಗ್ನಿಪರೀಕ್ಷೆ: ಗೋಲ್ಡನ್ ಟಿಕೆಟ್ ಪಡೆಯಲು ಸ್ಪರ್ಧಿಗಳ ಹರಸಾಹಸ

‘ಕೆಟ್ಟದ್ದನ್ನೇ ಬಯಸಲು ಕೂತಿದ್ದಾರೇನೋ ಎಂಬ ಅನುಮಾವನ್ನು ಬಿಡಿ, ಮತ್ತೊಂದು ತುದಿಯಿಂದ ಒಳ್ಳೆಯದು ಆಗಲೆಂದು ಬಯಸಿ. ಯಾರೂ ಸಹ ಯಾರನ್ನೂ ಸಹ ತುಳಿಯಲು ಆಗುವುದೇ ಇಲ್ಲ. ಅದು ಸಾಧ್ಯವೇ ಇಲ್ಲ. ಎಷ್ಟೋ ಕಲಾವಿದರ ಹಾಡುಗಳನ್ನು ಹಾಕುತ್ತಾರೆ. ಅದರ ಬಗ್ಗೆ ಯಾರೂ ಕೇಳುವುದಿಲ್ಲ. ಇಂಥಹಾ ಕಲಾವಿದರ ಹಾಡು ಹಾಕಬೇಕು, ಇಂಥಹವರದ್ದು ಹಾಕಬಾರದು ಎಂದೆಲ್ಲ ಪೂರ್ವಾಗ್ರಹಗಳಿಲ್ಲ, ಕೆಲವು ಹಾಡುಗಳನ್ನು ಹಾಕಲು, ಹಾಕದೇ ಇರಲು ಕೆಲವು ಕಾರಣಗಳಿರಬಹುದು. ತೀರಾ ಓಪನ್ ಆಗಿ ಮಾತನಾಡುತ್ತಾ ಹೋದರೆ ವಿಷಯ ಎಲ್ಲೆಲ್ಲಿಗೋ ಹೋಗುತ್ತದೆ’ ಎಂದು ಮಾರ್ಮಿಕವಾಗಿ ಹೇಳಿದರು ಸುದೀಪ್.

ಬಿಗ್​​ಬಾಸ್ ಮನೆಯಲ್ಲಿ ದರ್ಶನ್ ಹಾಡುಗಳು ಕೇಳುವುದು ಕಡಿಮೆ. ಹಾಗೆಂದು ಹಾಡುಗಳನ್ನು ಹಾಕುವುದೇ ಇಲ್ಲ ಎಂದೂ ಅಲ್ಲ. ಹಿಂದೆ ಹಲವು ಬಾರಿ ದರ್ಶನ್ ಸಿನಿಮಾದ ಹಾಡುಗಳನ್ನು ಸಹ ಬಿಗ್​​ಬಾಸ್ ಮನೆಯಲ್ಲಿ ಹಾಕಲಾಗಿದೆ. ಕೆಲಬಾರಿ ಸ್ಪರ್ಧಿಗಳು ಸಹ ಈ ಬಗ್ಗೆ ಪ್ರಶ್ನೆ ಮಾಡಿದ್ದಿದೆ. ವಾಹಿನಿಯರು, ತಮ್ಮ ಬಳಿ ಹಕ್ಕುಗಳು ಇರುವ ಸಿನಿಮಾಗಳ ಹಾಡುಗಳನ್ನಷ್ಟೆ ಹಾಕುತ್ತಾರೆ, ಹಕ್ಕುಗಳು ಇಲ್ಲದ ಸಿನಿಮಾಗಳ ಹಾಡುಗಳನ್ನು ಕಾನೂನಾತ್ಮಕ ಕಾರಣಕ್ಕೆ ಹಾಕುವುದಿಲ್ಲ ಎನ್ನಲಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Sun, 30 August 26

Follow Us
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಪಾರಾಗಿ 54 ಕನ್ನಡಿಗರು ವಾಪಸ್​​
ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಪಾರಾಗಿ 54 ಕನ್ನಡಿಗರು ವಾಪಸ್​​