ನಟಿ ಸಮಂತಾ (Samantha) ಕೇವಲ ಪಕ್ಕದ ಮನೆ ಹುಡುಗಿ ಪಾತ್ರ ಮಾಡಿಕೊಂಡು ಚಿತ್ರರಂಗದಲ್ಲಿ ನೆಲೆಕಂಡುಕೊಂಡಿಲ್ಲ. ಅವರು ವೃತ್ತಿ ಜೀವನದಲ್ಲಿ ಸಾಕಷ್ಟು ಮಹಿಳಾ ಪ್ರಧಾನ ಪಾತ್ರಗಳನ್ನು ಮಾಡಿದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಕಳೆದ ವರ್ಷ ರಿಲೀಸ್ ಆದ ‘ದಿ ಫ್ಯಾಮಿಲಿ ಮ್ಯಾನ್ 2’ (The Family Man 2) ಸರಣಿಯಲ್ಲಿ ಸಮಂತಾ ಆ್ಯಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದರು. ಈ ಬಾರಿ ಅವರು ಮತ್ತೆ ಆ್ಯಕ್ಷನ್ನಲ್ಲಿ ಮಿಂಚೋಕೆ ರೆಡಿ ಆಗಿದ್ದಾರೆ. ಅವರಿಗೆ ತರಬೇತಿ ನೀಡೋಕೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಬಂದಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅಷ್ಟೇ ಅಲ್ಲ, ಸಮಂತಾ ಅವರು ಯಾವ ರೀತಿಯ ಆ್ಯಕ್ಷನ್ ಮೆರೆಯಬಹುದು ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡಿದೆ.
ಸಮಂತಾ ‘ಯಶೋಧಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಹರಿ ಶಂಕರ್ ಹಾಗೂ ಹರಿ ನಾರಾಯಣ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಮಂತಾ ಅವರು ಯಶೋಧಾ ಆಗಿ ನಟಿಸುತ್ತಿದ್ದಾರೆ. ಉನ್ನಿ ಮುಕುಂದನ್, ವರಲಕ್ಷ್ಮೀ ಶರತ್ಕುಮಾರ್ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿದ್ದು, ಸಮಂತಾ ಆ್ಯಕ್ಷನ್ ದೃಶ್ಯಗಳಲ್ಲಿ ಮಿಂಚಲಿದ್ದಾರೆ. ಇದಕ್ಕೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಆಗಮಿಸಿದ್ದಾರೆ.
ಯನ್ನಿಕ್ ಬೇನ್ ಅವರು ‘ಯಶೋಧಾ’ ಸಿನಿಮಾಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಇವರು ‘ಟ್ರಾನ್ಸ್ಪೋರ್ಟರ್ 3’, ‘ಇನ್ಸೆಪ್ಶನ್’, ಭಾರತೀಯ ಸಿನಿಮಾಗಳಾದ ‘ರಯೀಸ್’, ‘ಟೈಗರ್ ಜಿಂದಾ ಹೈ’ ಮೊದಲಾದ ಸಿನಿಮಾಗಳಿಗೆ ಆ್ಯಕ್ಷನ್ ಹೇಳಿಕೊಟ್ಟಿದ್ದಾರೆ. ಈಗ ‘ಯಶೋಧಾ’ ಚಿತ್ರಕ್ಕಾಗಿ ಸಮಂತಾ ಅವರನ್ನು ಟ್ರೇನ್ ಮಾಡಲಿದ್ದಾರೆ ಯನ್ನಿಕ್. ಇತ್ತೀಚೆಗೆ ಸಿನಿಮಾ ತಂಡ ಒಂದು ಹಂತದ ಶೂಟಿಂಗ್ ಪೂರ್ಣಗೊಳಿಸಿದೆ.
ಸಮಂತಾ ಬಗ್ಗೆ ಕೇಳಿ ಬರುತ್ತಿದೆ ಗಾಸಿಪ್
ವಿಚ್ಛೇದನ ಪಡೆದ ನಂತರದಲ್ಲಿ ಸಮಂತಾ ಅವರ ಬಗ್ಗೆ ಹಲವು ಗಾಸಿಪ್ಗಳು ಹುಟ್ಟಿಕೊಂಡಿವೆ. ಈಗ ಅವರು ಬಾಲಿವುಡ್ ಕಡೆ ಕಣ್ಣಿಟ್ಟಿದ್ದು, ಇದಕ್ಕಾಗಿ ದಕ್ಷಿಣ ಭಾರತದ ಸಿನಿಮಾಗಳ ಮೇಲೆ ಗಮನ ಹರಿಸುತ್ತಿಲ್ಲ ಎಂದು ವರದಿ ಆಗಿದೆ. ಬಾಲಿವುಡ್ನಲ್ಲಿ ನಡೆಯುವ ಹಲವು ಅವಾರ್ಡ್ ಫಂಕ್ಷನ್ಗಳಿಗೆ ಸಮಂತಾ ತೆರಳುತ್ತಿದ್ದಾರೆ. ಇದರಿಂದ ಸಮಂತಾ ಒಪ್ಪಿಕೊಂಡ ಸಿನಿಮಾಗಳ ಶೂಟಿಂಗ್ ಮುಂದೂಡುವ ಅನಿವಾರ್ಯತೆ ನಿರ್ದೇಶಕರಿಗೆ ಎದುರಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಸಮಂತಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದನ್ನೂ ಓದಿ:Samantha: ‘ಜನರು ನನ್ನ ಹಳೆಯ ಚಿತ್ರಗಳನ್ನು ಮರೆತೇಬಿಟ್ಟಿದ್ದಾರೆ’; ‘ಊ ಅಂಟಾವಾ’ ಯಶಸ್ಸಿನ ಬಗ್ಗೆ ಸಮಂತಾ ಮಾತು