ಮೊದಲಿನಂತಿಲ್ಲ ಸಮಂತಾ?; ನಟಿಯ ನಡವಳಿಕೆ ಕಂಡು ನಿರ್ದೇಶಕರ ಬೇಸರ
‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿ ಬಳಿಕ ಸಮಂತಾಗೆ ಬೇಡಿಕೆ ಹೆಚ್ಚಿದೆ. ಆ ಬಳಿಕ ಬಾಲಿವುಡ್ ಕಡೆಯಿಂದ ಹೆಚ್ಚೆಚ್ಚು ಆಫರ್ ಬರುತ್ತಿದೆ. ಹೀಗಾಗಿ, ಅತ್ತ ಕಡೆ ಅವರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
Updated on: Mar 19, 2022 | 5:23 PM

ನಟಿ ಸಮಂತಾ ಅವರು ವಿಚ್ಛೇದನದ ನಂತರ ಚಿತ್ರರಂಗದಲ್ಲಿ ಶೈನ್ ಆಗುತ್ತಿದ್ದಾರೆ. ಅವರಿಗೆ ಟಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಬೇಡಿಕೆ ಹೆಚ್ಚುತ್ತಿದೆ. ಅವರು ಈಗ ಬಾಲಿವುಡ್ನಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರೋಕೆ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ದಿನ ಕಳೆದಂತೆ ಅವರು ಬದಲಾಗುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ದಕ್ಷಿಣ ಭಾರತದ ನಿರ್ದೇಶಕರಿಗೆ ಕಿರಿಕಿರಿ ಉಂಟಾಗಿದೆ ಎಂದು ವರದಿ ಆಗಿದೆ.

‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿ ಬಳಿಕ ಸಮಂತಾಗೆ ಬೇಡಿಕೆ ಹೆಚ್ಚಿದೆ. ಆ ಬಳಿಕ ಬಾಲಿವುಡ್ ಕಡೆಯಿಂದ ಹೆಚ್ಚೆಚ್ಚು ಆಫರ್ ಬರುತ್ತಿದೆ. ಹೀಗಾಗಿ, ಅತ್ತ ಕಡೆ ಅವರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದರಿಂದ ದಕ್ಷಿಣ ಭಾರತದ ನಿರ್ದೇಶಕರಿಗೆ ತೊಂದರೆ ಆಗುತ್ತಿದೆ.

ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂದರೆ ಸಿನಿಮಾದಲ್ಲಿ ನಟಿಸಿದರೆ ಮಾತ್ರ ಸಾಧ್ಯವಾಗುವುದಿಲ್ಲ. ಹೆಚ್ಚೆಚ್ಚು ಅವಾರ್ಡ್ ಫಂಕ್ಷನ್ ಹಾಗೂ ಸಿನಿಮಾಗೆ ಸಂಬಂಧಿಸಿದ ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಸಿನಿಮಾ ಮಂದಿಯ ಜತೆ ಗೆಳೆತನ ಬೆಳೆಸಿಕೊಳ್ಳಬೇಕು. ಸಮಂತಾ ಕೂಡ ಇದನ್ನೇ ಮಾಡುತ್ತಿದ್ದಾರೆ.

ಬಾಲಿವುಡ್ನಲ್ಲಿ ನಡೆಯುವ ಹಲವು ಅವಾರ್ಡ್ ಫಂಕ್ಷನ್, ಕೆಲ ಸಿನಿಮಾ ಕಾರ್ಯಕ್ರಮಗಳಲ್ಲಿ ಸಮಂತಾ ಪಾಲ್ಗೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ನಿರಂತರವಾಗಿ ಮುಂಬೈಗೆ ತೆರಳುತ್ತಿದ್ದಾರೆ. ಇದರ ಪರಿಣಾಮ ದಕ್ಷಿಣ ಭಾರತದಲ್ಲಿ ಅವರು ಒಪ್ಪಿಕೊಂಡ ಸಿನಿಮಾಗಳ ಮೇಲೆ ಆಗುತ್ತಿದೆ.

ಸಮಂತಾ ಮೊದಲು ಸೆಟ್ನಲ್ಲಿ ಕೂಲ್ ಆಗಿ, ಹಂಬಲ್ ಆಗಿ ಇರುತ್ತಿದ್ದರು. ಆದರೆ, ಈ ನಡವಳಿಕೆ ಕೂಡ ನಿಧಾನವಾಗಿ ಬದಲಾಗುತ್ತಿದೆಯಂತೆ. ಇದರಿಂದ ನಿರ್ದೇಶಕರಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.




