ಅಮೆರಿಕದ ಕಿರುತೆರೆಯ ಪ್ರತಿಷ್ಠಿತ ‘ಎಮಿ ಅವಾರ್ಡ್ಸ್’ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. 76ನೇ ವಾರ್ಷಿಕ ಪ್ರೈಮ್ ಟೈಮ್ ಎಮಿ ಅವಾರ್ಡ್ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಸಾಕ್ಷಿ ಆಗಿದ್ದಾರೆ. ‘ಶೋಗನ್’ ಮತ್ತು ‘ದಿ ಬೇರ್’ ಸೀರಿಸ್ಗಳು ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಲಾಸ್ ಏಂಜಲಿಸ್ನಲ್ಲಿ ಈ ಸಮಾರಂಭ ನಡೆದಿದ್ದು ರೆಡ್ ಕಾರ್ಪೆಟ್ನಲ್ಲಿ ಅನೇಕ ತಾರೆಯರು ಹೆಜ್ಜೆ ಹಾಕಿದ್ದಾರೆ. ಪ್ರಶಸ್ತಿ ಬಾಚಿಕೊಂಡ ಸೆಲೆಬ್ರಿಟಿಗಳಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಯಾರಿಗೆಲ್ಲ ಈ ಬಾರಿ ‘ಎಮಿ ಅವಾರ್ಡ್ಸ್’ ಸಿಕ್ಕಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ..
25 ವಿಭಾಗಗಳಲ್ಲಿ ‘ಶೋಗನ್’ ನಾಮಿನೇಟ್ ಆಗಿತ್ತು. ‘ದಿ ಬೇರ್’ 23 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು. ಅತ್ಯುತ್ತಮ ಡ್ರಾಮಾ ಸೀರಿಸ್ ಪ್ರಶಸ್ತಿಯನ್ನು ಶೋಗನ್ ಪಡೆದುಕೊಂಡಿದೆ. ‘ಹ್ಯಾಕ್ಸ್’ಗೆ ಅತ್ಯುತ್ತಮ ಕಾಮಿಡಿ ಸೀರಿಸ್ ಪ್ರಶಸ್ತಿ ಸಿಕ್ಕಿದೆ. ಡ್ರಾಮಾ ಸೀರಿಸ್ನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಿರೋಯುಕಿ ಸನಾಡ (ಶೋಗನ್) ಪಡೆದುಕೊಂಡಿದ್ದಾರೆ. ಡ್ರಾಮಾ ಸೀರಿಸ್ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯು ಆ್ಯನಾ ಸವಾಯಿ (ಶೋಗನ್) ಅವರ ಪಾಲಾಗಿದೆ.
ಕಾಮಿಡಿ ಸಿರೀಸ್ ವಿಭಾಗದಲ್ಲಿ ‘ದಿ ಬೇರ್’ನಲ್ಲಿನ ಅಭಿನಯಕ್ಕಾಗಿ ಜೆರೆಮಿ ಅಲೆನ್ ವೈಟ್ ಅವರು ಅತ್ಯುತ್ತ,ಮ ನಟ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ‘ಹ್ಯಾಕ್ಸ್’ ನಟಿ ಜೀನ್ ಸ್ಮಾರ್ಟ್ ಅವರಿಗೆ ಕಾಮಿಡಿ ಸಿರೀಸ್ ವಿಭಾಗದ ಅತ್ಯುತ್ತಮ ನಟಿ ಅವಾರ್ಡ್ ನೀಡಲಾಗಿದೆ. ಡ್ರಾಮಾ ಸೀರಿಸ್ ವಿಭಾಗದಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯು ‘ದಿ ಮಾರ್ನಿಂಗ್ ಶೋ’ ಸಿರೀಸ್ಗಾಗಿ ಬಿಲ್ಲಿ ಕ್ರಡಪ್ ಅವರಿಗೆ ಸಿಕ್ಕಿದೆ. ಇದೇ ವಿಭಾಗದಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ‘ದಿ ಕ್ರೌನ್’ ಸಿರೀಸ್ನ ಎಲಿಝಬೆತ್ ಡೆಮಿಕಿ ಅವರು ಪಡೆದುಕೊಂಡಿದ್ದಾರೆ.
Congratulations to all of tonight’s #Emmy winners! Visit https://t.co/WpdTUXaUgK to view the full list of winners and stream the 76th #Emmys on @hulu. 🎉 #Emmys #TelevisionAcademy pic.twitter.com/1xweVuDHTK
— Television Academy (@TelevisionAcad) September 16, 2024
ನಟ ಎಬಾನ್ ಮಾಸ್ ಬ್ಯಾಕಾರ್ಕ್ ಅವರು ‘ದಿ ಬೇರ್’ನಲ್ಲಿನ ಅಭಿನಯಕ್ಕಾಗಿ ಕಾಮಿಡಿ ಸಿರೀಸ್ನ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೇ ಸಿರೀಸ್ನಲ್ಲಿ ಅಭಿನಯಿಸಿದ ಲೈಝಾ ಕೊಲೊನ್ ಝಯಾಸ್ ಅವರು ಈ ವಿಭಾಗದ ಅತ್ಯುತ್ತಮ ಫೋಷಕ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಲಿಮಿಡೆಟ್ ಸಿರೀಸ್ ವಿಭಾಗದಲ್ಲಿ ‘ಬೇಬಿ ರೇಂಡರ್’ ನಟ ರಿಚರ್ಡ್ ಗ್ಯಾಡ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಇದೇ ವಿಭಾಗದಲ್ಲಿ ‘ಟ್ರೂ ಡಿಟೆಕ್ಟಿವ್: ನೈಟ್ ಕಂಟ್ರಿ’ ಸಿರೀಸ್ನ ನಟಿ ಜೂಡಿ ಫಾಸ್ಟರ್ ಅವರು ‘ಅತ್ಯುತ್ತಮ ನಟಿ’ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ಸೈಮಾನಲ್ಲಿ ಪ್ರಶಸ್ತಿಗಳ ಬಾಚಿದ ‘ಸಪ್ತ ಸಾಗರದಾಚೆ ಎಲ್ಲೋ’, ಇಲ್ಲಿದೆ ಪಟ್ಟಿ
ಲಮೋರ್ನ್ ಮೋರಿಸ್ ಅವರು ‘ಫಾರ್ಗೋ’ ಸಿರೀಸ್ನಲ್ಲಿನ ನಟನೆಗಾಗಿ ಮಿಲಿಡೆಟ್ ಸಿರೀಸ್ ವಿಭಾಗದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವಿಭಾಗದಲ್ಲಿ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿಯು ‘ಬೇಬಿ ರೇಂಡರ್’ ನಟಿ ಜೆಸ್ಸಿಕಾ ಗನ್ನಿಂಗ್ ಅವರ ಪಾಲಾಗಿದೆ. ‘ಮಿಸ್ಟರ್ ಮಾಂಕ್ಸ್ ಲಾಸ್ಟ್ ಕೇಸ್’ಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ‘ದ ಡೈಲಿ ಶೋ’ ಅತ್ಯುತ್ತಮ ಟಾಕ್ ಸಿರೀಸ್ ಪ್ರಶಸ್ತಿ ಪಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.