ಸೈಮಾ ತೆಲುಗು ಸಿನಿಮಾ ಪ್ರಶಸ್ತಿ, ತೆಲುಗಿನಲ್ಲೂ ಕನ್ನಡಿಗರ ಮಿಂಚು

ಸೈಮಾ 2024 ಪ್ರಶಸ್ತಿ ಪ್ರದಾನ ಸಮಾರಂಭ ದುಬೈನಲ್ಲಿ ನಿನ್ನೆ ನಡೆದಿದೆ. ಮೊದಲ ದಿನ ಕನ್ನಡ ಮತ್ತು ತೆಲುಗು ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಸೈಮಾ 2024 ಪ್ರಶಸ್ತಿ ಪಡೆದ ತೆಲುಗಿನ ಸಿನಿಮಾಗಳ ಪಟ್ಟಿ ಇಲ್ಲಿದೆ. ಅಂದಹಾಗೆ ತೆಲುಗಿನಲ್ಲಿ ನಾಲ್ವರು ಕನ್ನಡಿಗರಿಗೆ ಪ್ರಶಸ್ತಿ ಬಂದಿದೆ.

ಸೈಮಾ ತೆಲುಗು ಸಿನಿಮಾ ಪ್ರಶಸ್ತಿ, ತೆಲುಗಿನಲ್ಲೂ ಕನ್ನಡಿಗರ ಮಿಂಚು
Follow us
|

Updated on: Sep 15, 2024 | 9:21 AM

ಸೈಮಾ 2024 (ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್) ನಿನ್ನೆ ಸಂಜೆ ಅದ್ಧೂರಿಯಾಗಿ ದುಬೈನಲ್ಲಿ ನಡೆದಿದೆ. ಮೊದಲ ದಿನ ಕನ್ನಡ ಮತ್ತು ತೆಲುಗಿನಿಂದ ನಾಮಿನೇಟ್ ಆದ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯ್ತು. ಭಾನುವಾರದಂದು ತಮಿಳು ಹಾಗೂ ಮಲಯಾಳಂ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಕನ್ನಡದಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’, ‘ಕಾಟೇರ’ ಇನ್ನಿತರೆ ಸಿನಿಮಾಗಳು ಹೆಚ್ಚು ಪ್ರಶಸ್ತಿ ಬಾಚಿಕೊಂಡಿವೆ. ತೆಲುಗಿನಲ್ಲಿ ‘ದಸರಾ’, ‘ಬಲಗಂ’ ಸಿನಿಮಾಗಳು ಹೆಚ್ಚು ಪ್ರಶಸ್ತಿ ಬಾಚಿಕೊಂಡಿವೆ. ಅಂದಹಾಗೆ ತೆಲುಗಿನಲ್ಲೂ ಸಹ ಕನ್ನಡದ ನಟರು, ತಂತ್ರಜ್ಞರು ಮುಂಚೂಣಿಯಲ್ಲಿದ್ದಾರೆ.

ಅತ್ಯುತ್ತಮ ನಟ- ನಾನಿ (ದಸರಾ)

ಅತ್ಯುತ್ತಮ ನಟಿ- ಕೀರ್ತಿ ಸುರೇಶ್ (ದಸರಾ)

ಅತ್ಯುತ್ತಮ ನಟ (ಕ್ರಿಟಿಕ್)- ಆನಂದ್ ದೇವರಕೊಂಡ (ಬೇಬಿ)

ಅತ್ಯುತ್ತಮ ನಟಿ (ಕ್ರಿಟಿಕ್)- ಮೃಣಾಲ್ ಠಾಕೂರ್ (ಹಾಯ್ ನಾನ್ನ)

ಅತ್ಯುತ್ತಮ ನಿರ್ದೇಶಕ- ಶ್ರೀಕಾಂತ ಒಡೆಲಾ (ದಸರಾ)

ಅತ್ಯುತ್ತಮ ನಿರ್ದೇಶಕ (ಕ್ರಿಟಿಕ್ಸ್)- ಸಾಯಿ ರಾಜೇಶ್ (ಬೇಬಿ)

ಅತ್ಯುತ್ತಮ ವಿಲನ್- ದುನಿಯಾ ವಿಜಯ್ (ಭಗವಂತ ಕೇಸರಿ)

ಅತ್ಯುತ್ತಮ ಗಾಯಕ- ರಾಮ್ ಮಿರಿಯಾಲ (ಬಲಗಂ)

ಅತ್ಯುತ್ತಮ ಪೋಷಕ ನಟ- ದೀಕ್ಷಿತ್ ಶೆಟ್ಟಿ (ದಸರಾ)

ಅತ್ಯುತ್ತಮ ಪೋಷಕ ನಟಿ- ಕಿಯಾರಾ ಖನ್ನಾ (ಹೈ ನಾನ್ನ)

ಅತ್ಯುತ್ತಮ ಹೊಸ ನಿರ್ದೇಶಕ- ಶೌರ್ಯ (ಹೈ ನಾನ್ನ)

ಅತ್ಯುತ್ತಮ ಹೊಸ ನಟ- ಸಂಗೀತ್ (ಮ್ಯಾಡ್)

ಅತ್ಯುತ್ತಮ ಭರವಸೆಯ ನಟ- ಸುಮಂತ್ ಪ್ರಭಾಸ್ (ಮೇಮು ಫೇಮಸ್)

ಇದನ್ನೂ ಓದಿ: ಸೈಮಾನಲ್ಲಿ ಪ್ರಶಸ್ತಿಗಳ ಬಾಚಿದ ‘ಸಪ್ತ ಸಾಗರದಾಚೆ ಎಲ್ಲೋ’, ಇಲ್ಲಿದೆ ಪಟ್ಟಿ

ಅತ್ಯುತ್ತಮ ಹೊಸ ನಟಿ- ವೈಷ್ಣವಿ (ಬೇಬಿ)

ಅತ್ಯುತ್ತಮ ಸಂಗೀತ ನಿರ್ದೇಶಕ- ಹೇಷಮ್ ಅದ್ಬುಲ್ ವಹಾಬ್ (ಹೈ ನಾನ್ನ)

ಅತ್ಯುತ್ತಮ ತೆಲುಗು ಸಿನಿಮಾ- ಭಗವಂತ ಕೇಸರಿ

ಅತ್ಯುತ್ತಮ ಸಾಹಿತ್ಯ- ಅನಂತ್ (ಬೇಬಿ)

ಅತ್ಯುತ್ತಮ ಸಿನಿಮಾಟೊಗ್ರಫರ್- ಭುವನ್ ಗೌಡ (ಸಲಾರ್)

ಅತ್ಯುತ್ತಮ ಹಾಸ್ಯನಟ- ವಿಷ್ಣು (ಮ್ಯಾಡ್)

ವರ್ಷದ ಅತ್ಯುತ್ತಮ ನಿರ್ಮಾಪಕ- ವಿವೈಆರ್​ಎ ಎಂಟರ್ಟೈನರ್ಸ್

ಎಂಟರ್ಟೈನರ್ ಆಫ್​ ದಿ ಇಯರ್- ಶ್ರುತಿ ಹಾಸನ್

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ