ಈ ಫೋಟೋದಲ್ಲಿರೋ ಬಾಲಕಿ ಈಗ ಸ್ಟಾರ್ ನಟಿ; ಕನ್ನಡದಲ್ಲೂ ಮಿಂಚಿದ ಇವರನ್ನು ಗುರುತಿಸಬಲ್ಲಿರಾ?
ಈ ಚಿತ್ರದಲ್ಲಿರುವ ನಟಿ ಪ್ಯಾನ್ ಇಂಡಿಯಾ ನಟಿ. ಕನ್ನಡದಲ್ಲಿಯೂ ಹಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಈ ನಟಿ ಯಾರೆಂದು ಗುರುತಿಸಬಲ್ಲಿರಾ?
ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಎಂದರೆ ಫ್ಯಾನ್ಸ್ಗೆ ಎಲ್ಲಿಲ್ಲದ ಖುಷಿ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸೋದು ಅವರ ಕೆಲಸಗಳಲ್ಲಿ ಒಂದು. ಈಗ ಸ್ಟಾರ್ ನಟಿಯ ಫೋಟೋ ಒಂದು ವೈರಲ್ ಆಗಿದೆ. ಅವರಿಗೆ ಕನ್ನಡದ ಜೊತೆ ಹಿಂದಿ, ತಮಿಳು, ತೆಲುಗು ಇಂಡಸ್ಟ್ರಿಯಲ್ಲಿ ಬೇಡಿಕೆ ಇದೆ. ಅವರು ಬೇರಾರೂ ಅಲ್ಲ ರಮ್ಯಾ ಕೃಷ್ಣ. ಅವರಿಗೆ ಇಂದು (ಸೆಪ್ಟೆಂಬರ್ 15) ಜನ್ಮದಿನ. ಸದ್ಯ ಅವರು ಚೆನ್ನೈನಲ್ಲಿ ಸೆಟಲ್ ಆಗಿದ್ದಾರೆ.
ರಮ್ಯಾ ಅವರು 13ನೇ ವಯಸ್ಸಿಗೆ ನಟನೆ ಆರಂಭಿಸಿದರು. 1983ರಲ್ಲಿ ರಿಲೀಸ್ ಆದ ‘ವೆಲ್ಲೈ ಮನಸ್ಸು’ ಅವರು ನಟಿಸಿದ ಮೊದಲ ಸಿನಿಮಾ. ಅವರು ವೈಜಿ ಮಹೇಂದ್ರನ್ ಜೊತೆ ತೆರೆ ಹಂಚಿಕೊಂಡರು. ಈ ಫೋಟೋದಲ್ಲಿರೋ ಮಾರ್ಕ್ ಆಗಿರೋದು ರಮ್ಯಾ ಕೃಷ್ಣ. ಶಾಲಾ ದಿನಗಳಲ್ಲಿ ತೆಗೆದ ಫೋಟೋ ಇದಾಗಿದೆ.
ರಮ್ಯಾ ಕೃಷ್ಣನ್ ಅವರು ಚಿತ್ರರಂಗದಲ್ಲಿ ನಾಲ್ಕು ದಶಕ ಕಳೆಯುತ್ತಿದ್ದಾರೆ. ಅವರು ‘ಬಾಹುಬಲಿ’ ಚಿತ್ರದಲ್ಲಿ ರಾಜ ಮಾತಾ ಶಿವಗಾಮಿ ದೇವಿ ಪಾತ್ರ ಮಾಡಿ ಸಾಕಷ್ಟು ಜನಪ್ರಿಯತೆ ಪಡೆದರು. ಈ ಚಿತ್ರ ಅವರನ್ನು ಬೇರೆ ಹಂತಕ್ಕೆ ಕರೆದೊಯ್ಯಿತು.
ರಮ್ಯಾ ಕನ್ನಡಕ್ಕೆ ಕಾಲಿಟ್ಟಿದ್ದು 1988ರಲ್ಲಿ. ‘ಶಕ್ತಿ’ ಹೆಸರಿನ ಪಾತ್ರ ಮಾಡಿ ಅವರು ಗಮನ ಸೆಳೆದರು. ‘ಕೃಷ್ಣ ರುಕ್ಮಿಣಿ’, ‘ಗಡಿಬಿಡಿ ಗಂಡ’, ‘ನೀಲಾಂಬರಿ’ ರೀತಿಯ ಸಿನಿಮಾಗಳನ್ನು ಕನ್ನಡದಲ್ಲಿ ಮಾಡಿ ಭೇಷ್ ಎನಿಸಿಕೊಂಡರು. ಅವರು ಕೇವಲ ನಟಿ ಮಾತ್ರವಲ್ಲ. ಕೂಚಿಪುಡಿ, ಭರತನಾಟ್ಯ, ವೆಸ್ಟರ್ನ್ ಡ್ಯಾನ್ಸ್ ಕಲಿತಿದ್ದಾರೆ. ಅವರು ಅನೇಕ ಸ್ಟೇಜ್ ಶೋ ಕೂಡ ನೀಡಿದ್ದಾರೆ.
ಇದನ್ನೂ ಓದಿ:ಚಿತ್ರದಲ್ಲಿರುವ ಇಬ್ಬರು ಮುದ್ದು ಮಕ್ಕಳು ಇಂದು ನಟಿಯರು, ಒಬ್ಬರಂತೂ ಸ್ಟಾರ್ ನಟಿ: ಗುರುತಿಸಿಬಲ್ಲಿರಾ?
ನಟಿ ರಮ್ಯಾ ಕೃಷ್ಣ ಬೋಲ್ಡ್ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಸ್ವಿಮ್ಸ್ಯೂಟ್ಗಳನ್ನು ಧರಿಸಿ ಕ್ಯಾಮೆರಾ ಎದುರಿಸಲು ಅವರು ಎಂದಿಗೂ ಹಿಂಜರಿದವರಲ್ಲ. ಹಿಂದಿಯಲ್ಲಿ ರಮ್ಯಾ ನಟಿಸಿದರೂ ಅವರಿಗೆ ಹೇಳಿಕೊಳ್ಳುವಂತಹ ಬೇಡಿಕೆ ಅಲ್ಲಿ ಸೃಷ್ಟಿ ಆಗಿಲ್ಲ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ನಟಿಸಿರುವ ಅವರು 250 ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.
ರಾಜಮೌಳಿ ಅವರು ನಿರ್ದೇಶಿಸಿದ್ದ ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಚಿತ್ರದಲ್ಲಿ ಅವರು ಎಲ್ಲರ ಮೆಚ್ಚುಗೆ ಪಡೆದರು. ಅವರು ಈ ಚಿತ್ರಕ್ಕಾಗಿ 6 ಕೋಟಿ ರೂಪಾಯಿ ಸಂಭಾವನೆ ಪಡೆದರು. ಅವರು ಹಿಂದಿ ಚಿತ್ರರಂಗಕ್ಕೆ ಕಾಲಿಡೋ ಆಲೋಚನೆ ಇಲ್ಲ.
2005ರಲ್ಲಿ ರಮ್ಯಾ ಕೃಷ್ಣ ರಿತ್ವಿಕ್ ವಂಶಿಗೆ ಜನ್ಮನೀಡಿದರು. ಆ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅಮಿತಾಭ್ ಬಚ್ಚನ್ ಜೊತೆ ರಮ್ಯಾ ಸಿನಿಮಾ ಮಾಡಬೇಕಿತ್ತು. ಆದರೆ, ಸಾಧ್ಯವಾಗಿಲ್ಲ. ಇತ್ತೀಚೆಗೆ ಅವರು ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾದಲ್ಲಿ ತಾಯಿ ವಿಜಯ್ ತಾಯಿ ಪಾತ್ರ ಮಾಡಿದ್ದರು. ಈಗ ಅವರು ‘ದೇವರ’ ಸಿನಿಮಾದಲ್ಲೂ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ