ಚಿತ್ರದಲ್ಲಿರುವ ಇಬ್ಬರು ಮುದ್ದು ಮಕ್ಕಳು ಇಂದು ನಟಿಯರು, ಒಬ್ಬರಂತೂ ಸ್ಟಾರ್ ನಟಿ: ಗುರುತಿಸಿಬಲ್ಲಿರಾ?

ಈ ಚಿತ್ರದಲ್ಲಿರುವ ಇಬ್ಬರು ಮುದ್ದು ಮಕ್ಕಳಲ್ಲಿ ಒಬ್ಬರು ಸ್ಟಾರ್ ನಟಿಯಾಗಿದ್ದರೆ, ಮತ್ತೊಬ್ಬರು ಈಗ ನಟನೆ ಆರಂಭಿಸಿದ್ದಾರೆ. ಈ ಇಬ್ಬರೂ ನಟನೆ ಆರಂಭಿಸಿರುವುದು ತೆಲುಗು ಚಿತ್ರರಂಗದಿಂದ. ಯಾರು ಈ ನಟಿಯರು ಗುರುತಿಸಬಲ್ಲಿರಾ?

ಚಿತ್ರದಲ್ಲಿರುವ ಇಬ್ಬರು ಮುದ್ದು ಮಕ್ಕಳು ಇಂದು ನಟಿಯರು, ಒಬ್ಬರಂತೂ ಸ್ಟಾರ್ ನಟಿ: ಗುರುತಿಸಿಬಲ್ಲಿರಾ?
ನಟಿ ಯಾರು ಗುರುತಿಸಿ
Follow us
ಮಂಜುನಾಥ ಸಿ.
|

Updated on: Feb 27, 2023 | 4:42 PM

ಚಿತ್ರದಲ್ಲಿ ಕಾಣಿಸುತ್ತಿರುವ ಹೆಣ್ಣು ಮಕ್ಕಳು ಅಕ್ಕ-ತಂಗಿಯರು. ಈ ಇಬ್ಬರಲ್ಲಿ ಒಬ್ಬರು ಸ್ಟಾರ್ ನಟಿಯಾದರೆ ಮತ್ತೊಬ್ಬರು ಈಗಿನ್ನು ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ನಟಿಸಿರುವ ಎರಡೂ ಸಿನಿಮಾಗಳು ಇನ್ನೂ ಬಿಡುಗಡೆ ಆಗಿಲ್ಲ. ಇಬ್ಬರೂ ದೆಹಲಿ ಮೂಲದವರಾದರೂ ನಟನೆ ಪದಾರ್ಪಣೆ ಮಾಡಲು ಮೊದಲು ಆಯ್ದುಕೊಂಡಿದ್ದು ತೆಲುಗು ಚಿತ್ರರಂಗವನ್ನು.

ಸ್ಟಾರ್ ನಟಿ ಕೃತಿ ಸನೋನ್(Kriti Sanon) ಹಾಗೂ ಅವರ ಸಹೋದರಿ ನೂಪುರ್ ಸೆನನ್ (Nupur Sanon) ಅವರ ಚಿತ್ರವಿದು. ಇಬ್ಬರೂ ದೆಹಲಿಯ ನಿವಾಸದಲ್ಲಿದ್ದಾಗ ತೆಗೆದ ಚಿತ್ರವಿದು. ಮಧ್ಯಮ ಕುಟುಂಬಕ್ಕೆ ಸೇರಿದ ಈ ಚೆಲುವೆಯರು, ಶಿಕ್ಷಣ ಮುಗಿಸಿ ಮಾಡೆಲಿಂಗ್ ಮಾಡಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.

ಅಕ್ಕ ಕೃತಿ ಸನೋನ್ ತೆಲುಗಿನಲ್ಲಿ ಮಹೇಶ್ ಬಾಬು ನಟಿಸಿರುವ ‘ನೇನೊಕ್ಕಡಿನೆ’ ಸಿನಿಮಾದ ಮೂಲಕ ನಟನೆಗೆ ಪದಾರ್ಪಣೆ ಮಾಡಿ ಆ ಬಳಿಕ ಸ್ಟಾರ್ ನಟಿಯಾಗಿ ಬೆಳೆದರು. ಇದೀಗ ಕೃತಿಯ ಸಹೋದರಿ ನೂಪುರ್ ಸನೋನ್ ಸಹ ಚಿತ್ರರಂಗಕ್ಕೆ ತೆಲುಗು ಸಿನಿಮಾದ ಮೂಲಕವೇ ಪದಾರ್ಪಣೆ ಮಾಡುತ್ತಿದ್ದಾರೆ.

ನೂಪುರ್ ಸನೋನ್, ತೆಲುಗಿನ ಸ್ಟಾರ್ ಹೀರೋ ಮಾಸ್ ಮಹಾರಾಜ ರವಿತೇಜ ನಟಿಸುತ್ತಿರುವ ಟೈಗರ್ ನಾಗೇಶ್ವರ್ ರಾವ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ನಟಿಸುವಾಗಲೇ ಹಿಂದಿ ಸಿನಿಮಾದಿಂದಲೂ ನೂಪುರ್​ಗೆ ಅವಕಾಶ ಬಂದಿದ್ದು, ನವಾಜುದ್ದೀನ್ ಸಿದ್ಧಿಕಿ ನಟನೆಯ ನೂರಾನಿ ಚೆಹ್ರ ಸಿನಿಮಾದಲ್ಲಿ ನೂಪುರ್ ನಟಿಸುತ್ತಿದ್ದಾರೆ.

ಇನ್ನು ಕೃತಿ ಸನೋನ್, ಬಾಲಿವುಡ್​ ಮಾತ್ರವೇ ಅಲ್ಲದೆ ದಕ್ಷಿಣ ಚಿತ್ರರಂಗದಲ್ಲಿಯೂ ಜನಪ್ರಿಯ ನಟಿಯಾಗಿದ್ದು, ಇತ್ತೀಚೆಗಷ್ಟೆ ಅವರ ನಟನೆಯ ಶೆಹಜಾದಾ ಹಿಂದಿ ಸಿನಿಮಾ ಬಿಡುಗಡೆ ಆಗಿದೆ. ಪ್ರಭಾಸ್ ಜೊತೆಗೆ ಆದಿಪುರುಷ್ ಸಿನಿಮಾದಲ್ಲಿ ಸೀತೆ ಪಾತ್ರದಲ್ಲಿ ನಟಿಸಿದ್ದಾರೆ. ಟೈಗರ್ ಶ್ರಾಫ್ ಜೊತೆಗೆ ಗಣ್​ಪತ್ ಸಿನಿಮಾಕ್ಕೂ ಬಣ್ಣ ಹಚ್ಚಿದ್ದಾರೆ. ಹಿಂದಿಯ ಇನ್ನೊಂದು ರೊಮ್ಯಾಂಟಿಕ್ ಸಿನಿಮಾವನ್ನೂ ಕೃತಿ ಒಪ್ಪಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ