Al Pacino: 83ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆ ಆದ ಅಲ್ ಪಚಿನೋ; ತನ್ನ ಬಗ್ಗೆಯೇ ನಟನಿಗೆ ಇತ್ತು ಅನುಮಾನ
Noor Alfallah: ನಟ ಅಲ್ ಪಚಿನೋ ಅವರು ಮದುವೆ ಆಗಿಲ್ಲ. ಅವರ ಹೊಸ ಗರ್ಲ್ಫ್ರೆಂಡ್ ನೂರ್ ಅಲ್ಫಾಲ್ಲಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಹಾಲಿವುಡ್ನ ಖ್ಯಾತ ನಟ ಅಲ್ ಪಚಿನೋ (Al Pacino) ಅವರು ತಂದೆ ಆಗಿದ್ದಾರೆ. ಅವರು 83ನೇ ವಯಸ್ಸಿನಲ್ಲಿ ಅಪ್ಪ ಆಗಿದ್ದಾರೆ ಎಂಬುದು ವಿಶೇಷ. ಅಷ್ಟೇ ಅಲ್ಲದೇ ಅವರು ಮದುವೆ ಆಗಿಲ್ಲ. ಅಲ್ ಪಚಿನೋ ಅವರ ಹೊಸ ಗರ್ಲ್ಫ್ರೆಂಡ್ ನೂರ್ ಅಲ್ಫಾಲ್ಲಾ ಅವರು ಗಂಡು ಮಗುವಿಗೆ (Baby Boy) ಜನ್ಮ ನೀಡಿದ್ದಾರೆ. ಈ ಮಗುವಿಗೆ ರೋಮನ್ ಪಚಿನೋ ಎಂದು ಹೆಸರು ಇಡಲಾಗಿದೆ. ನೂರ್ ಅಲ್ಫಾಲ್ಲಾ ಅವರು ಗರ್ಭಿಣಿ ಎಂಬ ಸುದ್ದಿ ಕೆಲವೇ ದಿನಗಳ ಹಿಂದೆ ಕೇಳಿಬಂದಿತ್ತು. ಆದರೆ ಅವರು ಗರ್ಭಿಣಿ ಆಗಿದ್ದಕ್ಕೆ ತಾವು ಕಾರಣ ಹೌದೋ ಅಲ್ಲವೋ ಎಂಬ ಅನುಮಾನ ಅಲ್ ಪಚಿನೋ ಅವರಿಗೆ ಇತ್ತು. 83ನೇ ವಯಸ್ಸಿನಲ್ಲಿ ತಾವು ತಂದೆ ಆಗುವ ಸಾಮರ್ಥ್ಯ ಹೊಂದಿಲ್ಲ ಎಂದು ಅವರು ಭಾವಿಸಿದ್ದರು. ಅದಕ್ಕಾಗಿ ಅವರು ಡಿಎನ್ಎ ಟೆಸ್ಟ್ ಕೂಡ ಮಾಡಿಸಿದ್ದರು. ಆಗ ಅಸಲಿ ವಿಷಯ ಹೊರಬಿದ್ದಿತ್ತು. ನೂರ್ ಅಲ್ಫಾಲ್ಲಾ (Noor Alfallah) ಗರ್ಭಿಣಿ ಆಗಿದ್ದಕ್ಕೆ ಅಲ್ ಪಚಿನೋ ಅವರೇ ಕಾರಣ ಎಂಬುದು ಬಯಲಾಗಿತ್ತು. ಅಂದಹಾಗೆ, ನೂರ್ ಅಲ್ಫಾಲ್ಲಾ ಅವರಿಗೆ ಈಗಿನ್ನೂ 29 ವರ್ಷ ವಯಸ್ಸು.
ಅಲ್ ಪಚಿನೋ ಮತ್ತು ನೂರ್ ಅಲ್ಫಾಲ್ಲಾ ಅವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. 2022ರಿಂದ ಈಚೆಗೆ ಅನೇಕ ಬಾರಿ ಅವರು ಒಟ್ಟಿಗೆ ಕಾಣಿಸಿಕೊಂಡು ಸುದ್ದಿ ಆಗಿದ್ದುಂಟು. ಹಾಲಿವುಡ್ನಲ್ಲಿ ಬಹಳ ಫೇಮಸ್ ನಟನಾಗಿ ಅಲ್ ಪಚಿನೋ ಗುರುತಿಸಿಕೊಂಡಿದ್ದಾರೆ. ‘ಗಾಡ್ ಫಾದರ್’, ‘ಸೆಂಟ್ ಆಫ್ ಎ ವುಮನ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಅವರು ಗಮನ ಸೆಳೆದಿದ್ದಾರೆ. ಅವರ ನಟನೆಗೆ ಆಸ್ಕರ್ ಪ್ರಶಸ್ತಿ, ಟೋನಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಲಭಿಸಿವೆ. ಸಿನಿಮಾ ಮಾತ್ರವಲ್ಲದೇ ಕಿರುತೆರೆ ಮತ್ತು ರಂಗಭೂಮಿಯಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದಾರೆ. 1969ರಿಂದಲೂ ಅವರು ಹಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ.
10 ವರ್ಷದಲ್ಲಿ 800 ಮಕ್ಕಳ ತಂದೆಯಾದ ಹಾಲು ಮಾರಾಟಗಾರ : ಡಿಎನ್ಎ ಟೆಸ್ಟ್ನಲ್ಲಿ ಬಯಲಾಯ್ತು ನಿಜಾಂಶ
ಮದುವೆ ಮತ್ತು ಮಕ್ಕಳ ವಿಚಾರದಲ್ಲಿ ಅಲ್ ಪಚಿನೋ ಅವರ ಜೀವನ ಡಿಫರೆಂಟ್ ಆಗಿದೆ. ಅವರಿಗೆ ಈಗಾಗಲೇ ಮೂವರು ಮಕ್ಕಳು ಇದ್ದಾರೆ! ಈಗ ಜನಿಸಿರುವುದು ನಾಲ್ಕನೇ ಮಗು. ಆದರೆ ಅಲ್ ಪಚಿನೋಗೆ ಮದುವೆ ಆಗಿಲ್ಲ! ಹೌದು, ಈ ನಾಲ್ಕೂ ಮಕ್ಕಳು ಜನಿಸಿರುವುದು ಮೂವರು ಪ್ರೇಯಸಿಯರಿಗೆ. ಈಗ 4ನೇ ಮಗುವಿಗೆ ಅಪ್ ಪಚಿನೋ ತಂದೆ ಆಗುವ ಮೂಲಕ ಮತ್ತೆ ಸುದ್ದಿ ಆಗಿದ್ದಾರೆ. ನಾಲ್ಕನೇ ಮಗು ಜನಿಸಿದ್ದಕ್ಕೆ ಈ ಮೊದಲಿನ ಮೂವರು ಮಕ್ಕಳು ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಇದನ್ನೂ ಓದಿ: ಮದುವೆಯಾಗಿ ಮೂರು ತಿಂಗಳಿಗೆ, 4 ತಿಂಗಳ ಗರ್ಭಿಣಿ ಈ ನಟಿ
ಇನ್ನು, ಅಲ್ ಪಚಿನೋ ಪ್ರೇಯಸಿ ನೂರ್ ಅಲ್ಫಾಲ್ಲಾ ಇತಿಹಾಸ ಕೂಡ ಬೇರೆಯದೇ ರೀತಿ ಇದೆ. ಡೇಟಿಂಗ್ ವಿಚಾರದಲ್ಲಿ ಅವರದ್ದು ಕೂಡ ಡಿಫರೆಂಟ್ ಅಭಿರುಚಿ. ತಮಗೆ 22 ವರ್ಷ ವಯಸ್ಸಾಗಿದ್ದಾಗಲೇ 50 ಪ್ಲಸ್ ವಯಸ್ಸಿನ ಪುರುಷರ ಜೊತೆ ಅವರು ಡೇಟಿಂಗ್ ಮಾಡಿದ್ದರು. ಅವರು ಡೇಟಿಂಗ್ ಮಾಡಿರುವುದೆಲ್ಲ ಶ್ರೀಮಂತ ವ್ಯಕ್ತಿಗಳನ್ನೇ ಎಂಬುದು ಗಮನಿಸಬೇಕಾದ ಅಂಶ. ಸದ್ಯ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಅದರ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.