ಆಸ್ಕರ್ಗೆ ನಾಮಿನೇಟ್ ಆದ ಪ್ರಿಯಾಂಕಾ ಚೋಪ್ರಾ ನಿರ್ಮಾಣದ ಕಿರುಚಿತ್ರ
97th Oscars: 97ನೇ ಆಸ್ಕರ್ಗೆ ನಾಮಿನೇಷನ್ ಪಟ್ಟಿ ಪ್ರಕಟವಾಗಿದ್ದು, ಭಾರತದಲ್ಲಿ ಚಿತ್ರೀಕರಣ ಮಾಡಲಾಗಿರುವ ಭಾರತದ ನಟರು ನಟಿಸಿರುವ ‘ಅನುಜಾ’ ಕಿರುಚಿತ್ರ ಲೈವ್ ಆಕ್ಷನ್ ಶಾರ್ಟ್ ಫಿಲಂ ವಿಭಾಗದಲ್ಲಿ ಆಸ್ಕರ್ಸ್ಗೆ ನಾಮಿನೇಟ್ ಆಗಿದೆ. ನಟಿ ಪ್ರಿಯಾಂಕಾ ಚೋಪ್ರಾ, ಆಸ್ಕರ್ ವಿಜೇತ ‘ದಿ ಎಲಿಫೆಂಟ್ ವಿಸ್ಪರ್ಸ್’ನ ನಿರ್ಮಾಪಕಿ ಆಗಿದ್ದ ಗುನೀತ್ ಮೊಂಗಾ ಇನ್ನಿತರರು ಬಂಡವಾಳ ಹೂಡಿರುವ ‘ಅನುಜಾ’ ಲೈವ್ ಆಕ್ಷನ್ ಶಾರ್ಟ್ ಫಿಲಂ ವಿಭಾಗದಲ್ಲಿ ನಾಮಿನೇಟ್ ಆಗಿದೆ.
95ನೇ ಆಸ್ಕರ್ ಇವೆಂಟ್ಸ್ನಲ್ಲಿ ಭಾರತಕ್ಕೆ ಎರಡು ಆಸ್ಕರ್ ಲಭಿಸಿತ್ತು. ಅತ್ಯುತ್ತಮ ಡಾಕ್ಯುಮೆಂಟರಿ ವಿಭಾಗದಲ್ಲಿ ‘ದಿ ಎಲಿಫೆಂಟ್ ವಿಸ್ಪರ್ಸ್’ಗೆ ಹಾಗೂ ಅತ್ಯುತ್ತಮ ಹಾಡು ವಿಭಾಗದಲ್ಲಿ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು’ ಹಾಡಿಗೆ ಪ್ರಶಸ್ತಿ ಲಭ್ಯವಾಗಿತ್ತು. ಆದರೆ ಕಳೆದ ಅಂದರೆ 96ನೇ ಆಸ್ಕರ್ಸ್ನಲ್ಲಿ ಭಾರತಕ್ಕೆ ನಿರಾಸೆ ಮೂಡಿತ್ತು. ಇದೀಗ 97ನೇ ಆಸ್ಕರ್ಸ್ನ ನಾಮಿನೇಷನ್ ಪಟ್ಟಿ ಪ್ರಕಟವಾಗಿದ್ದು, ಭಾರತದಲ್ಲಿ ಚಿತ್ರೀಕರಣವಾಗಿರುವ ಒಂದು ಕಿರುಚಿತ್ರ ಆಸ್ಕರ್ನ ನಾಲ್ಕರ ಘಟ್ಟ ತಲುಪಿದೆ.
ನಟಿ ಪ್ರಿಯಾಂಕಾ ಚೋಪ್ರಾ, ಆಸ್ಕರ್ ವಿಜೇತ ‘ದಿ ಎಲಿಫೆಂಟ್ ವಿಸ್ಪರ್ಸ್’ನ ನಿರ್ಮಾಪಕಿ ಆಗಿದ್ದ ಗುನೀತ್ ಮೊಂಗಾ ಇನ್ನಿತರರು ಬಂಡವಾಳ ಹೂಡಿರುವ ‘ಅನುಜಾ’ ಲೈವ್ ಆಕ್ಷನ್ ಶಾರ್ಟ್ ಫಿಲಂ ವಿಭಾಗದಲ್ಲಿ ನಾಮಿನೇಟ್ ಆಗಿದೆ. ಈ ಲೈವ್ ಆಕ್ಷನ್ ಕಿರು ಚಿತ್ರವನ್ನು ಆಡಮ್ ಜೆ ಗ್ರಾವೆಸ್ ನಿರ್ದೇಶನ ಮಾಡಿದ್ದಾರೆ. ದೆಹಲಿಯ ಸ್ಲಂನ ಇಬ್ಬರು ಬಾಲಕಿಯರ ಕತೆಯನ್ನು ಈ ಕಿರುಚಿತ್ರ ಒಳಗೊಂಡಿದೆ.
ಇದನ್ನೂ ಓದಿ:‘ಲಾಪತಾ ಲೇಡೀಸ್’ ಹೊರಗೆ, ಆಸ್ಕರ್ ರೇಸ್ನಲ್ಲಿ ಉಳಿದ ಭಾರತೀಯ ಸಿನಿಮಾಗಳು ಯಾವುವು?
ಇಬ್ಬರು ಬಾಲಕಿಯರು ಎಂಥಹಾ ಕಷ್ಟದ ಸಮಯದಲ್ಲಿಯೂ ತಮ್ಮಲ್ಲಿ ತಾವು ಹೇಗೆ ಖುಷಿ, ಸಂತೋಷಗಳನ್ನು ಕಂಡುಕೊಳ್ಳುತ್ತಾರೆ ಎಂಬುದನ್ನು ಈ ಲೈವ್ ಆಕ್ಷನ್ ಕಿರು ಚಿತ್ರ ಹೇಳುತ್ತದೆ. ನಿಜವಾದ ಲೊಕೇಶನ್ಗಳಲ್ಲಿಯೇ ಈ ಕಿರುಚಿತ್ರದ ಶೂಟಿಂಗ್ ಮಾಡಲಾಗಿದ್ದು, ಯಾರ ಕತೆಯನ್ನು ನಿರ್ದೇಶಕ ಹೇಳಲು ಹೊರಟಿದ್ದಾರೆಯೋ ಅವರೇ ಕಿರುಚಿತ್ರದಲ್ಲಿ ನಟನೆಯನ್ನೂ ಮಾಡಿದ್ದಾರೆ.
‘ಅನುಜಾ’ ಕಿರುಚಿತ್ರದ ಜೊತೆಗೆ ‘ಐ ಆಮ್ ನಾಟ್ ರೊಬಾಟ್’, ‘ಎ ಲಿಯನ್’, ‘ದಿ ಲಾಸ್ಟ್ ರೇಂಜರ್’, ‘ದಿ ಮ್ಯಾನ್ ಹು ಕುಡ್ ನಾಟ್ ರಿಮೇನ್ ಸೈಲೆಂಟ್’ ಕಿರುಚಿತ್ರಗಳು ಸಹ ಸ್ಪರ್ಧೆಯಲ್ಲಿವೆ. ಆದರೆ ‘ಅನುಜಾ’ ಕಿರು ಚಿತ್ರ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:24 am, Fri, 24 January 25