AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡಂಕಿ’, ‘ಸಲಾರ್​’ ರೇಸ್​ಗೆ ಮತ್ತೊಂದು ದೊಡ್ಡ ಬಜೆಟ್ ಸಿನಿಮಾ ಎಂಟ್ರಿ, ಗೆಲ್ಲುವುದ್ಯಾರು?

Box Office Fight: ಡಿಸೆಂಬರ್ ತಿಂಗಳಲ್ಲಿ 'ಡಂಕಿ' ಹಾಗೂ 'ಸಲಾರ್' ಸಿನಿಮಾದ ಮಧ್ಯೆ ದೊಡ್ಡ ಬಾಕ್ಸ್ ಆಫೀಸ್ ಫೈಟ್​ಗೆ ಅಂಕಣ ರೆಡಿಯಾಗಿದೆ. ಇದರ ನಡುವೆ ಮತ್ತೊಂದು ಭಾರಿ ಬಜೆಟ್ ಸಿನಿಮಾ ರಣಾಂಗಣಕ್ಕೆ ಇಳಿಯಲಿದೆ. ಈ ಮೂವರ ಯುದ್ಧದಲ್ಲಿ ಗೆಲ್ಲುವವರ್ಯಾರು?

'ಡಂಕಿ', 'ಸಲಾರ್​' ರೇಸ್​ಗೆ ಮತ್ತೊಂದು ದೊಡ್ಡ ಬಜೆಟ್ ಸಿನಿಮಾ ಎಂಟ್ರಿ, ಗೆಲ್ಲುವುದ್ಯಾರು?
ಪ್ರಭಾಸ್-ಡಂಕಿ
ಮಂಜುನಾಥ ಸಿ.
|

Updated on: Oct 31, 2023 | 6:23 PM

Share

ಡಿಸೆಂಬರ್​ ತಿಂಗಳಲ್ಲಿ ಬಾಕ್ಸ್ ಆಫೀಸ್ ಕದನ ಜೋರಾಗಿಯೇ ಇರಲಿದೆ. ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಸಲಾರ್‘ (Salaar) ಡಿಸೆಂಬರ್​ನಲ್ಲಿ ಬಿಡುಗಡೆ ಆಗಲಿದೆ. ಅದರ ಜೊತೆಗೆ ಗೆಲುವಿನ ಕುದುರೆಯ ಮೇಲೆ ಓಡುತ್ತಿರುವ ಶಾರುಖ್ ಖಾನ್ ನಟನೆಯ ‘ಡಂಕಿ‘ (Dunki) ಸಿನಿಮಾ ಸಹ ‘ಸಲಾರ್’ ಜೊತೆಗೆ ಬಿಡುಗಡೆ ಆಗಲಿದೆ. ಈ ಎರಡೂ ಸಿನಿಮಾಗಳ ನಡುವೆ ಭಾರಿ ಪೈಪೋಟಿ ಇರಲಿದೆ. ಇದರ ನಡುವೆ ಅದೇ ದಿನ ಮತ್ತೊಂದು ಬಿಗ್​ಬಜೆಟ್ ಸಿನಿಮಾ ಸಹ ಬಿಡುಗಡೆ ಆಗುತ್ತಿರುವುದಾಗಿ ಘೋಷಣೆಯಾಗಿದ್ದು, ಮೂರು ಸಿನಿಮಾಗಳಲ್ಲಿ ಯಾವುದು ಗೆಲ್ಲಲಿದೆ ಎಂಬುದು ಕುತೂಹಲ ಮೂಡಿಸಿದೆ.

‘ಸಲಾರ್’ ಮತ್ತು ‘ಡಂಕಿ’ ಸಿನಿಮಾಗಳು ಡಿಸೆಂಬರ್ 22ಕ್ಕೆ ಬಿಡುಗಡೆ ಆಗಲಿದೆ. ‘ಸಲಾರ್’ ಸಿನಿಮಾ ನವೆಂಬರ್ ತಿಂಗಳಲ್ಲಿಯೇ ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ಬಿಡುಗಡೆ ದಿನಾಂಕವನ್ನು ನಿರ್ಮಾಣ ಸಂಸ್ಥೆ ಮುಂದೂಡಿತು. ಇನ್ನು ಶಾರುಖ್ ಖಾನ್​ರ ‘ಡಂಕಿ’ ಸಿನಿಮಾ ಡಿಸೆಂಬರ್ 22 ರಂದು ಬಿಡುಗಡೆ ಆಗಲಿದೆ ಎಂದು ತಿಂಗಳುಗಳ ಮೊದಲೇ ಘೋಷಣೆ ಮಾಡಿ ಆಗಿತ್ತು. ಇದೀಗ ಡಿಸೆಂಬರ್ 22ರಂದೇ ಹಾಲಿವುಡ್​ನ ಜನಪ್ರಿಯ ಸಿನಿಮಾ ‘ಅಕ್ವಾಮ್ಯಾನ್’ ಸರಣಿಯ ಹೊಸ ಸಿನಿಮಾ ಬಿಡುಗಡೆ ಆಗುತ್ತಿದೆ.

‘ಅಕ್ವಾಮ್ಯಾನ್’ ಸರಣಿಯ ಎರಡನೇ ಸಿನಿಮಾ ‘ಅಕ್ವಾಮ್ಯಾನ್: ದಿ ಲಾಸ್ಟ್ ಕಿಂಗ್​ಡಮ್’ ಸಿನಿಮಾ ಡಿಸೆಂಬರ್ 22 ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಆಕ್ವಾಮ್ಯಾನ್ ಆಗಿ ಜಾಸನ್ ಮೋಮಾ ನಟಿಸಿದ್ದು, ಆಂಬರ್ ಹರ್ಡ್ ಸಹ ಸಿನಿಮಾದಲ್ಲಿ ನಟಿಸಿದ್ದಾರೆ. 1000 ಕೋಟಿಗೂ ಹೆಚ್ಚಿನ ಮೊತ್ತದ ಹಣವನ್ನು ಈ ಸಿನಿಮಾದ ಮೇಲೆ ಸುರಿಯಲಾಗಿದ್ದು ನೀರಿನಾಳದಲ್ಲಿ ನಡೆಯುವ ರೋಚಕ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಇದನ್ನೂ ಓದಿ:‘ಸಲಾರ್’ ಸಿನಿಮಾ ಪ್ರಚಾರಕ್ಕೆ ಒಂದು ತಿಂಗಳು ವ್ಯಯಿಸಲಿದ್ದಾರೆ ಪ್ರಭಾಸ್?

2018ರಲ್ಲಿ ಬಿಡುಗಡೆ ಆಗಿದ್ದ ‘ಆಕ್ವಾಮ್ಯಾನ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಅದೇ ಕಾರಣಕ್ಕೆ ಇದೀಗ ‘ಆಕ್ವಾಮ್ಯಾನ್ 2’ ಸಿನಿಮಾವನ್ನು ನಿರ್ಮಿಸಲಾಗಿದೆ. ಕೋವಿಡ್ ಬಳಿಕ ಭಾರತದಲ್ಲಿ ಹಾಲಿವುಡ್ ಸಿನಿಮಾಗಳು ಬಹಳ ಒಳ್ಳೆಯ ಕೆಲೆಕ್ಷನ್ ಮಾಡುತ್ತಿವೆ. ‘ಸ್ಪೈಡರ್​ಮ್ಯಾನ್’, ‘ಅವತಾರ್ 2’, ‘ಡಾಕ್ಟರ್ ಸ್ಟ್ರೇಂಜ್’, ‘ಆಪನ್​ಹೈಮರ್’ ಸಿನಿಮಾಗಳು ಭಾರತದಲ್ಲಿ ದೊಡ್ಡ ಮೊತ್ತದ ಹಣವನ್ನು ಗಳಿಸಿದೆ. ‘ಸ್ಪೈಡರ್​ಮ್ಯಾನ್’ ಸಿನಿಮಾ ನೂರು ಕೋಟಿಗೂ ಹೆಚ್ಚು ಮೊತ್ತ ಗಳಿಸಿತ್ತು. ಇದೀಗ ‘ಆಕ್ವಾಮ್ಯಾನ್ 2’ ಸಿನಿಮಾ ಸಹ ದೊಡ್ಡ ಮೊತ್ತವನ್ನು ಗಳಿಸುವ ವಿಶ್ವಾಸದಲ್ಲಿದೆ.

ಡಿಸೆಂಬರ್ 22ರಂದೇ ಶಾರುಖ್ ಖಾನ್​ ನಟನೆಯ ‘ಡಂಕಿ’, ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾಗಳು ಬಿಡುಗಡೆ ಆಗುತ್ತಿರುವ ಕಾರಣ ‘ಆಕ್ವಾಮ್ಯಾನ್’ ಸಿನಿಮಾಕ್ಕೆ ಚಿತ್ರಮಂದಿರಗಳ ಕೊರತೆ ಎದುರಾಗಬಹುದು. ‘ಆಕ್ವಾಮ್ಯಾನ್’ ಸಿನಿಮಾ ಬಿಡುಗಡೆ ಆಗುತ್ತಿರುವ ‘ಡಂಕಿ’ ‘ಸಲಾರ್’ ಸಿನಿಮಾಗಳಿಗೂ ಸಮಸ್ಯೆ ಕೊಡುವ ಸಾಧ್ಯತೆಯೂ ಇದೆ. ಏನೇ ಆಗಲಿ ಡಿಸೆಂಬರ್ ತಿಂಗಳಲ್ಲಿ ಸಿನಿಮಾ ಅಭಿಮಾನಿಗಳಿಗಂತೂ ಹಬ್ಬವೇ ಸರಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ