‘ಸಲಾರ್’ ಸಿನಿಮಾ ಪ್ರಚಾರಕ್ಕೆ ಒಂದು ತಿಂಗಳು ವ್ಯಯಿಸಲಿದ್ದಾರೆ ಪ್ರಭಾಸ್?

ಪ್ರಭಾಸ್ ಅವರು ಬ್ಯಾಕ್ ಟು ಬ್ಯಾಕ್ ಮೂರು ಸೋಲು ಕಂಡಿದ್ದಾರೆ. ಇದರಿಂದ ಅವರು ಚಿಂತೆಗೆ ಒಳಗಾಗಿದ್ದಾರೆ. ‘ಸಾಹೋ’, ‘ರಾಧೆ ಶ್ಯಾಮ್’ ಹಾಗೂ ‘ಆದಿಪುರುಷ್’ ಸೋಲಿನಿಂದ ಅವರು ಚೇತರಿಸಿಕೊಳ್ಳಬೇಕಿದೆ. ಇದಕ್ಕಾಗಿ ‘ಸಲಾರ್’ ಗೆಲುವು ಅವರಿಗೆ ತುಂಬಾನೇ ಮುಖ್ಯ ಎನಿಸಿಕೊಂಡಿದೆ.

‘ಸಲಾರ್’ ಸಿನಿಮಾ ಪ್ರಚಾರಕ್ಕೆ ಒಂದು ತಿಂಗಳು ವ್ಯಯಿಸಲಿದ್ದಾರೆ ಪ್ರಭಾಸ್?
ಪ್ರಭಾಸ್​
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Oct 28, 2023 | 3:24 PM

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ (Salaar Movie) ಈಗಾಗಲೇ ರಿಲೀಸ್ ಆಗಿರಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ದಿನಾಂಕ ಡಿಸೆಂಬರ್ 22ಕ್ಕೆ ಮುಂದೂಡಿಕೆ ಆಯಿತು. ಕ್ರಿಸ್​ಮಸ್ ಸಂದರ್ಭದಲ್ಲಿ ‘ಸಲಾರ್’ ರಿಲೀಸ್ ಆಗುತ್ತಿರುವುದರಿಂದ ಈ ಚಿತ್ರ ಭರ್ಜರಿ ಗಳಿಕೆ ಮಾಡುವ ಸಾಧ್ಯತೆ ಇದೆ ಎಂಬುದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ. ಹೀಗಾಗಿ ಪ್ರಭಾಸ್ ಅವರು ‘ಸಲಾರ್’ ಸಿನಿಮಾ ಪ್ರಚಾರಕ್ಕೆ ಒಂದು ತಿಂಗಳು ಮೀಸಲಿಡಲಿದ್ದಾರೆ ಎಂದು ವರದಿ ಆಗಿದೆ. ಈ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಲು ಬೇಕಿರುವ ಎಲ್ಲಾ ತಯಾರಿಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಅವರು ಮಾಡಿಕೊಂಡಿದ್ದಾರೆ.

ಪ್ರಭಾಸ್ ಅವರು ಬ್ಯಾಕ್ ಟು ಬ್ಯಾಕ್ ಮೂರು ಸೋಲು ಕಂಡಿದ್ದಾರೆ. ಇದರಿಂದ ಅವರು ಚಿಂತೆಗೆ ಒಳಗಾಗಿದ್ದಾರೆ. ‘ಸಾಹೋ’, ‘ರಾಧೆ ಶ್ಯಾಮ್’ ಹಾಗೂ ‘ಆದಿಪುರುಷ್’ ಸೋಲಿನಿಂದ ಅವರು ಚೇತರಿಸಿಕೊಳ್ಳಬೇಕಿದೆ. ಇದಕ್ಕಾಗಿ ‘ಸಲಾರ್’ ಗೆಲುವು ಅವರಿಗೆ ತುಂಬಾನೇ ಮುಖ್ಯ ಎನಿಸಿಕೊಂಡಿದೆ.

ಪ್ರಭಾಸ್ ಅವರು ಕಳೆದ ತಿಂಗಳ ಆರಂಭದಲ್ಲಿ ಯುರೋಪ್​ಗೆ ತೆರಳಿದ್ದರು ಎನ್ನಲಾಗಿದೆ. ಅಲ್ಲಿ ಅವರು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎನ್ನಲಾಗಿದೆ. ಸದ್ಯ ಅವರು ಸಂಪೂರ್ಣ ಚೇತರಿಕೆ ಕಂಡಿದ್ದಾರೆ. ನವೆಂಬರ್ 6ಕ್ಕೆ ಅವರು ಭಾರತಕ್ಕೆ ಮರಳಲಿದ್ದಾರಂತೆ. ಆ ಬಳಿಕ ‘ಸಲಾರ್’ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್​’ನ ವಿಜಯ್​ ಕಿರಗಂದೂರು ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಅವರು ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಅಕ್ಟೋಬರ್ 23 ಪ್ರಭಾಸ್ ಅವರ ಜನ್ಮದಿನ. ಅಂದು ಅವರು ಎಲ್ಲರ ಎದುರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಮಾಧ್ಯಮದ ಎದುರು ಬಂದಿಲ್ಲ. ಅವರು ಇನ್ನೂ ವಿದೇಶದಲ್ಲೇ ಇದ್ದಾರೆ ಎನ್ನುತ್ತಿವೆ ಮೂಲಗಳು. ಶೀಘ್ರವೇ ಅವರು ಭಾರತಕ್ಕೆ ಆಗಮಿಸಿ, ಸಿನಿಮಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಶಾಂತ್ ನೀಲ್ ಅವರು ಸಿನಿಮಾ ಪ್ರಚಾರಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. ‘ಕೆಜಿಎಫ್ 2’ ಚಿತ್ರಕ್ಕೆ ಅವರು ಭರ್ಜರಿ ಪ್ರಚಾರ ನೀಡಿದ್ದರು. ‘ಸಲಾರ್’ ಸಿನಿಮಾಗೂ ದೊಡ್ಡ ಪ್ರಮೋಷನ್ ಮಾಡಲು ಪ್ಲಾನ್ ನಡೆದಿದೆ. ‘ಸಲಾರ್’ ಸಿನಿಮಾ ಬಗ್ಗೆ ಹಿಂದಿ ಮಂದಿಗೂ ಕುತೂಹಲ ಇದೆ. ಇದೇ ಸಂದರ್ಭದಲ್ಲಿ ಶಾರುಖ್ ಖಾನ್ ನಟನೆಯ ‘ಡಂಕಿ’ ಕೂಡ ರಿಲೀಸ್ ಆಗುತ್ತಿದೆ. ಈ ಎಲ್ಲಾ ಕಾರಣದಿಂದ ಹಿಂದಿ ಬೆಲ್ಟ್​ನಲ್ಲಿ ಚಿತ್ರಕ್ಕೆ ದೊಡ್ಡ ಪ್ರಮೋಷನ್​ನ ಅಗತ್ಯತೆ ಇದೆ. ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಗಂದೂರು ಕನ್ನಡದವರು. ಹೀಗಾಗಿ, ಕರ್ನಾಟಕದಲ್ಲೂ ಸಿನಿಮಾಗೆ ಪ್ರಚಾರ ಬೇಕು.

ಇದನ್ನೂ ಓದಿ: ‘ಡಂಕಿ’ Vs ‘ಸಲಾರ್’ ಫೈಟ್​ಗೆ ಹೆದರಿ ಕಾಲ್ಕಿತ್ತ ಸಿನಿಮಾಗಳು; ಎದ್ದಿದೆ ದೊಡ್ಡ ಅಲೆ

‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್​ ಸುಕುಮಾರನ್ ಸೇರಿ ಅನೇಕರು ನಟಿಸಿದ್ದಾರೆ. ರವಿ ಬಸ್ರೂರು ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಭುವನ್ ಗೌಡ ಅವರ ಛಾಯಾಗ್ರಹಣ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ದೊಡ್ಡ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:23 pm, Sat, 28 October 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್