Ricky Kej: ಬೆಂಗಳೂರು ಮೂಲದ ರಿಕ್ಕಿ ಕೇಜ್​ಗೆ ಗ್ರ್ಯಾಮಿ ಅವಾರ್ಡ್​; 3 ಬಾರಿ ಪ್ರಶಸ್ತಿ ಗೆದ್ದ ಭಾರತೀಯ

ರಿಕ್ಕಿ ಕೇಜ್​ ಹುಟ್ಟಿದ್ದು ಅಮೆರಿಕದಲ್ಲಿ. ಸದ್ಯ, ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಿಕ್ಕಿ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರು 100ಕ್ಕೂ ಅಧಿಕ ಪಶಸ್ತಿಗಳನ್ನು ಗೆದ್ದಿದ್ದಾರೆ.

Ricky Kej: ಬೆಂಗಳೂರು ಮೂಲದ ರಿಕ್ಕಿ ಕೇಜ್​ಗೆ ಗ್ರ್ಯಾಮಿ ಅವಾರ್ಡ್​; 3 ಬಾರಿ ಪ್ರಶಸ್ತಿ ಗೆದ್ದ ಭಾರತೀಯ
Follow us
ರಾಜೇಶ್ ದುಗ್ಗುಮನೆ
|

Updated on:Feb 06, 2023 | 9:44 AM

65ನೇ ಗ್ರ್ಯಾಮಿ ಅವಾರ್ಡ್​ ಕಾರ್ಯಕ್ರಮ (Grammy Awards 2023) ಲಾಸ್​ ಏಂಜಲೀಸ್​​​ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಮೂಲದ ಮ್ಯೂಸಿಕ್​ ಕಂಪೋಸರ್​ ರಿಕ್ಕಿ ಕೇಜ್​ (Ricky Kej) ಅವರಿಗೆ ಪ್ರಶಸ್ತಿ ದೊರೆತಿದೆ. ಅವರು ಮೂರನೇ ಬಾರಿಗೆ ಈ ಪ್ರಶಸ್ತಿ ಪಡೆದಿದ್ದಾರೆ ಅನ್ನೋದು ವಿಶೇಷ. ಅವರಿಗೆ ಎಲ್ಲ ಕಡೆಗಳಿಂದ ಅಭಿನಂದನೆಗಳು ಬರುತ್ತಿವೆ.

ರಿಕ್ಕಿ ಕೇಜ್​ ಹುಟ್ಟಿದ್ದು ಅಮೆರಿಕದಲ್ಲಿ. ಸದ್ಯ, ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಿಕ್ಕಿ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರು 100ಕ್ಕೂ ಅಧಿಕ ಪಶಸ್ತಿಗಳನ್ನು ಗೆದ್ದಿದ್ದಾರೆ. 2015ರಲ್ಲಿ ‘ವಿಂಡ್ಸ್​ ಆಫ್​ ಸಂಸಾರ’ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ದೊರೆತಿತ್ತು. ಈಗ ಬಾರಿ ‘ಡಿವೈನ್​ ಟೈಡ್ಸ್​’ ಆಲ್ಬಂಗೆ ಸ್ಟೀವರ್ಟ್ ಕೋಪ್​​ಲ್ಯಾಂಡ್​ ಹಾಗೂ ರಿಕ್ಕಿ ಕೇಜ್​ಗೆ ಒಟ್ಟಾಗಿ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ. ಮನಸೂರೆಗೊಳ್ಳುವ ಆಡಿಯೋ ಆಲ್ಬಂ ವಿಭಾಗದಲ್ಲಿ ಈ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ಅವರು ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈ ಆಲ್ಬಂಗೆ ಕಳೆದ ವರ್ಷ ಗ್ರ್ಯಾಮಿ ಪ್ರಶಸ್ತಿ ಸಿಕ್ಕಿತ್ತು.

ಈ ಮೊದಲು ಮಾತನಾಡಿದ್ದ ರಿಕ್ಕಿ ಅವರು, ‘ಡಿವೈನ್ ಟೈಡ್ಸ್ ಎರಡನೇ ಬಾರಿಗೆ ನಾಮಿನೇಟ್ ಆಗಿರೋದು ಖುಷಿ ನೀಡಿದೆ. ಈ ಪ್ರತಿಷ್ಠಿತ ಅವಾರ್ಡ್​ನಲ್ಲಿ ಭಾರತದ ಹಾಡುಗಳು ಆಯ್ಕೆ ಆಗಿರೋದು ಖುಷಿಯ ವಿಚಾರ. ಸಂಗೀತ ಲೋಕದಲ್ಲಿ ಮತ್ತಷ್ಟು ಕೆಲಸ ಮಾಡಲು ಇದು ಸಹಕಾರಿ’ ಎಂದು ಅವರು ಹೇಳಿದ್ದರು.

ಪ್ರಶಸ್ತಿ ಪಡೆದವರ ಹೆಸರು

ಅತ್ಯುತ್ತಮ ಮ್ಯೂಸಿಕ್ ವಿಡಿಯೋ

ಆಲ್​ ಟೂ ವೆಲ್​: ದಿ ಶಾರ್ಟ್​ ಫಿಲ್ಮ್​-ಟೈಲರ್ ಸ್ವಿಫ್ಟ್

ರ್ಯಾಪ್ ಆಲ್ಬಂ

ಮಿಸ್ಟರ್ ಮಾರಲ್ ಆ್ಯಂಡ್ ದಿ ಬಿಗ್ ಸ್ಟೆಪ್ಪರ್- ಕೆಂಡ್ರಿಕ್ ಲ್ಯಾಮರ್

ರಾಕ್ ಆಲ್ಬಂ

ಪೇಷಂಟ್ ನಂಬರ್ 9-ಓಜಿ

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:24 am, Mon, 6 February 23