AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bruce Willis: ಖ್ಯಾತ ಹಾಲಿವುಡ್​ ನಟನಿಗೆ ಬುದ್ಧಿಮಾಂದ್ಯತೆ; ಇದಕ್ಕೆ ಔಷಧಿಯೇ ಇಲ್ಲ ಎಂದ ವೈದ್ಯರು

FTD ಅನ್ನೋದು ಬುದ್ಧಿಮಾಂದ್ಯತೆಯ ಒಂದು ವಿಧ. ಇದಕ್ಕೆ ಬ್ರೂಸ್ ವಿಲ್ಲಿಸ್ ತುತ್ತಾಗಿದ್ದಾರೆ. ಇದರಿಂದ ಅವರಿಗೆ ಯಾರ ಜತೆಯೂ ಸರಿಯಾಗಿ ಸಂವಹ ಮಾಡಲು ಸಾಧ್ಯವಾಗುತ್ತಿಲ್ಲ

Bruce Willis: ಖ್ಯಾತ ಹಾಲಿವುಡ್​ ನಟನಿಗೆ ಬುದ್ಧಿಮಾಂದ್ಯತೆ; ಇದಕ್ಕೆ ಔಷಧಿಯೇ ಇಲ್ಲ ಎಂದ ವೈದ್ಯರು
ಬ್ರೂಸ್
Follow us
ರಾಜೇಶ್ ದುಗ್ಗುಮನೆ
|

Updated on:Feb 17, 2023 | 11:34 AM

ಹಾಲಿವುಡ್​ಗೆ (Hollywood) ಇದು ನಿಜಕ್ಕೂ ಬೇಸರದ ವಿಚಾರ. ‘ಡೈ ಹಾರ್ಡ್​’ ಸಿನಿಮಾ (Dire Hard Movie) ನಟ ಬ್ರೂಸ್ ವಿಲ್ಲಿಸ್ ಅವರಿಗೆ ಬುದ್ಧಿಮಾದ್ಯಂತೆ ಕಾಣಿಸಿಕೊಂಡಿದೆ. ಸದ್ಯ ಅವರಿಗೆ 67 ವರ್ಷ ವಯಸ್ಸಾಗಿದ್ದು, ಮುಂದಿನ ದಿನಗಳಲ್ಲಿ ಜೀವನ ಮತ್ತಷ್ಟು ಕಷ್ಟ ಆಗಲಿದೆ. ಈ ವಿಚಾರವನ್ನು ಕುಟುಂಬದವರೇ ರಿವೀಲ್ ಮಾಡಿದ್ದಾರೆ. ಈ ಸುದ್ದಿ ಕೇಳಿದ ಬ್ರೂಸ್ ವಿಲ್ಲಿಸ್ ಫ್ಯಾನ್ಸ್ ಬೇಸರಗೊಂಡಿದ್ದಾರೆ.

FTD ಅನ್ನೋದು ಬುದ್ಧಿಮಾಂದ್ಯತೆಯ ಒಂದು ವಿಧ. ಇದಕ್ಕೆ ಬ್ರೂಸ್ ವಿಲ್ಲಿಸ್ ಈ ರೋಗಕ್ಕೆ ಒಳಗಾಗಿದ್ದಾರೆ. ಇದರಿಂದ ಅವರಿಗೆ ಯಾರ ಜತೆಯೂ ಸರಿಯಾಗಿ ಸಂವಹನ ಮಾಡಲು ಸಾಧ್ಯವಾಗುತ್ತಿಲ್ಲ. 2022ರಲ್ಲಿ ಬ್ರೂಸ್​ಗೆ ಮಾತನಾಡಲು ಸಮಸ್ಯೆ ಆಗುತ್ತಿದೆ ಎಂದು ಕುಟುಂಬದವರು ಹೇಳಿದ್ದರು. ಇದು ಕುಟುಂಬದವರ ಆತಂಕಕ್ಕೆ ಕಾರಣ ಆಗಿತ್ತು. ಬುದ್ಧಿಮಾಂದ್ಯತೆ ರೋಗದಿಂದ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಈಗ ರಿವೀಲ್ ಆಗಿದೆ.

‘ಎಫ್‌ಟಿಡಿ ಒಂದು ಕ್ರೂರ ಕಾಯಿಲೆ. ನಮ್ಮಲ್ಲಿ ಅನೇಕರು ಇದನ್ನು ಈವರೆಗೆ ಕೇಳಿಲ್ಲ. ಇದು ಯಾರಲ್ಲಿ ಬೇಕಿದ್ದರೂ ಕಾಣಿಸಿಕೊಳ್ಳಬಹುದು. 60 ವರ್ಷದ ವ್ಯಕ್ತಿಗಳಿಗೆ FTD ಕಾಣಿಸಿಕೊಳ್ಳುತ್ತದೆ. ಆದರೆ, ಇದನ್ನು ಪತ್ತೆಹಚ್ಚಲು ಅನೇಕ ವರ್ಷಗಳೇ ಬೇಕಾಗಬಹುದು. ಈ ರೋಗಕ್ಕೆ ಯಾವುದೇ ಔಷಧ ಇಲ್ಲ. ಮುಂದಿನ ವರ್ಷಗಳಲ್ಲಿ ಏನಾದರೂ ಪಾಸಿಟಿವ್ ಬದಲಾವಣೆ ಆಗಬಹುದು ಎಂದು ನಾವು ಭಾವಿಸುತ್ತೇವೆ. ಈ ರೋಗದ ವಿಚಾರದಲ್ಲಿ ಜನರಲ್ಲಿ ಜಾಗೃತಿ ಹಾಗೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ’ ಎಂದು ಬ್ರೂಸ್ ಕುಟುಂಬದವರು ಸುತ್ತೋಲೆ ಹೊರಡಿಸಿದ್ದಾರೆ.

‘ಬ್ರೂಸ್ ಅವರು ಇತರರಿಗಾಗಿ ಧ್ವನಿ ಎತ್ತಿದರು. ಇತರರಿಗೆ ಸಹಾಯ ಮಾಡಿದರು. ಈ ರೀತಿಯ ತೊಂದರೆಗೆ ವಿಶ್ವದ ಅನೇಕರು ಒಳಗಾಗಿರಬಹುದು. ಇದು ಅವರ ಕುಟುಂಬದವರ ಮೇಲೂ ಪರಿಣಾಮ ಬೀರುತ್ತದೆ’ ಎಂದು ಬ್ರೂಸ್ ಕುಟುಂಬದವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ‘ಆರ್​ಆರ್​ಆರ್​’ ಸಿನಿಮಾ ಹೇಗೆ ಮಾಡಿದಿರಿ?’; ರಾಜಮೌಳಿಗೆ ಹಾಲಿವುಡ್​ ದಿಗ್ಗಜ ​ಸ್ಪೀಲ್​ಬರ್ಗ್ ಪ್ರಶ್ನೆ

ಬ್ರೂಸ್ 80ರ ದಶಕದಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು. ಅವರು 1988ರಲ್ಲಿ ನಟಿಸಿದ ‘ಡೈ ಹಾರ್ಡ್​’ ಸಿನಿಮಾ ಯಶಸ್ಸು ಕಂಡಿತು. ಬ್ರೂಸ್ ಅವರು ಚಿತ್ರರಂಗಕ್ಕೆ ಮರಳುವುದಿಲ್ಲ ಎಂದು 2022ರಲ್ಲಿ ಅವರ ಕುಟುಂಬ ಘೋಷಣೆ ಮಾಡಿತು. ಇದು ಅನೇಕರಲ್ಲಿ ಅಚ್ಚರಿ ಮೂಡಿಸಿತ್ತು. ಈಗ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎನ್ನುವ ವಿಚಾರ ತಿಳಿದು ಫ್ಯಾನ್ಸ್ ಬೇಸರಗೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:32 am, Fri, 17 February 23