ಗಾಡ್ಜಿಲ್ಲಾ vs ಕಾಂಗ್ ಸಿನಿಮಾದ ಪೋಸ್ಟರ್
ಪೈರಸಿ ಅನ್ನೋದು ಚಿತ್ರರಂಗಕ್ಕೆ ತಟ್ಟಿರುವ ದೊಡ್ಡ ಶಾಪ. ಕೋಟ್ಯಾಂತರ ರೂಪಾಯಿ ಸುರಿದು, ವರ್ಷಾನುಗಟ್ಟಲೆ ಕಷ್ಟಪಟ್ಟು ಮಾಡುವ ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಪೈರಸಿಗೆ ತುತ್ತಾಗುತ್ತದೆ. ಈಗ ಹಾಲಿವುಡ್ನ ಗಾಡ್ಜಿಲಾ vs ಕಾಂಗ್ ಸಿನಿಮಾಗೂ ಪೈರಿಸಿ ಬಿಸಿ ತಟ್ಟಿದೆ. ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಈ ಚಿತ್ರದ ಹಿಂದಿ ವರ್ಷನ್ ಆನ್ಲೈನ್ನಲ್ಲಿ ಲೀಕ್ ಆಗಿದೆ.
ಪೈರಸಿಯಲ್ಲಿ ಮುಂದಿರುವ Tamilrockers ಈ ಸಿನಿಮಾವನ್ನು ಲೀಕ್ ಮಾಡಿದೆ. ಇಂಗ್ಲಿಷ್ ವರ್ಷನ್ ಬದಲು ಹಿಂದಿಗೆ ಡಬ್ ಆದ ವರ್ಷನ್ಅನ್ನು ಈ ಸೈಟ್ನಲ್ಲಿ ಲೀಕ್ ಮಾಡಲಾಗಿದೆ. ಹಿಂದಿ ಅವತರಣಿಕೆಗೆ ಬೇಡಿಕೆ ಹೆಚ್ಚಿರುವ ಕಾರಣಕ್ಕೆ ತಮಿಳ್ ರಾಕರ್ಸ್ ಈ ರೀತಿ ಮಾಡಿದೆ ಎನ್ನಲಾಗುತ್ತಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಚಿತ್ರ ಲೀಕ್ ಆಗಿರುವುದು ಭಾರತದಲ್ಲಿನ ಬಾಕ್ಸ್ ಆಫೀಸ್ ಕಲೆಕ್ಷನ್ಗೆ ಹೊಡೆತ ನೀಡಿದೆ.
ತಮಿಳ್ರಾಕರ್ಸ್ ವೆಬ್ಸೈಟ್ ಅನ್ನು ಯಾರು ನಿರ್ವಹಣೆ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು ಅಸಾಧ್ಯ ಎಂಬಂತಾಗಿದೆ. ದೇಶದಲ್ಲಿ ರಿಲೀಸ್ ಆಗುವ ಬಹುತೇಕ ಚಿತ್ರಗಳನ್ನು ಇವರು ನಕಲು ಮಾಡಿ ಬಿಡುತ್ತಾರೆ. ಇವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಲಾಕ್‌ಡೌನ್ ಸಮಯದಲ್ಲಿ ಒಟಿಟಿಯಲ್ಲಿ ರಿಲೀಸ್ ಆದ ಸಾಕಷ್ಟು ಸಿನಿಮಾಗಳನ್ನು ಇವರು ಲೀಕ್ ಮಾಡಿದ್ದಾರೆ. ಲಾಕ್‌ಡೌನ್ ನಂತರ ಮತ್ತೆ ತಮ್ಮ ಕೆಲಸವನ್ನು ಇವರು ಮುಂದುವರಿಸಿದ್ದಾರೆ.
ಅಂದಹಾಗೆ, ಗಾಡ್ಜಿಲಾ vs ಕಾಂಗ್ ಸಿನಿಮಾಗೆ ಮೆಚ್ಚುಗೆಯ ಮಾತು ಕೇಳಿ ಬಂದಿದೆ. ಅನೇಕ ಆಂಗ್ಲ ವೆಬ್ಸೈಟ್ಗಳು ಸಿನಿಮಾವನ್ನು ಹೊಗಳಿ ಬರೆದಿದ್ದಾರೆ. ಪ್ರೇಕ್ಷಕರು ಕೂಡ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: KGF Chapter 2: ಹಾಲಿವುಡ್ ಸಿನಿಮಾದಲ್ಲಿ ಕೆಜಿಎಫ್-2 ಡೈಲಾಗ್? ಏನಿದರ ಹಿಂದಿನ ರಹಸ್ಯ
PM Kisan Samman Nidhi Yojana: ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಲ್ಲಿ ಸರ್ಕಾರವು ಸಣ್ಣ ಮತ್ತು ಮಧ್ಯಮವರ್ಗದ ರೈತರಿಗೆ ವರ್ಷಕ್ಕೆ 6,000 ರೂಗಳನ್ನು ತಮ್ಮ ಖಾತೆಗಳಲ್ಲಿ ವರ್ಗಾಯಿಸುತ್ತದೆ. ಸರ್ಕಾರದಿಂದ ರೈತರಿಗೆ ಈ ಹಣಕಾಸಿನ ನೆರವು ಮೂರು ಕಂತುಗಳಲ್ಲಿ ಪ್ರತಿಕಂತಿಗೆ 2000 ರೂಪಾಯಿಯಂತೆ ಬರುತ್ತದೆ.