ಮಿಷನ್ ಇಂಪಾಸಿಬಲ್ 7 ನೋಡಿದ ನೆಟ್ಟಿಗರು ಏನಂದರು?

|

Updated on: Jul 12, 2023 | 5:03 PM

Mission Impossible: ಟಾಮ್ ಕ್ರೂಸ್ ನಟನೆಯ 'ಮಿಷನ್ ಇಂಪಾಸಿಬಲ್ 7' ಇಂದು (ಜುಲೈ 12) ಬಿಡುಗಡೆ ಆಗಿದ್ದು ಸಿನಿಮಾ ನೋಡಿದ ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಿಷನ್ ಇಂಪಾಸಿಬಲ್ 7 ನೋಡಿದ ನೆಟ್ಟಿಗರು ಏನಂದರು?
ಮಿಷನ್ ಇಂಪಾಸಿಬಲ್ 7
Follow us on

ಟಾಮ್ ಕ್ರೂಸ್ (Tom Cruise) ನಟನೆಯ ಬಹು ನಿರೀಕ್ಷಿತ ಮಿಷನ್ ಇಂಪಾಸಿಬಲ್ ಡೆಡ್ ರೆಕೂನಿಂಗ್ (mission impossible dead reckoning) ಅಥವಾ ಮಿಷನ್ ಇಂಪಾಸಿಬಲ್ 7 ಪಾರ್ಟ್ 1 ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಇಂದು (ಜುಲೈ 12) ಬಿಡುಗಡೆ ಆಗಿದೆ. ಸಿನಿಮಾವನ್ನು ನೋಡಿರುವ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಬಹತೇಕ ಮಂದಿ ಟಾಮ್ ಕ್ರೂಸ್​ರ ಈ ಆಕ್ಷನ್ ಥ್ರಿಲ್ಲರ್​ಗೆ ವಾಹ್ ವಾಹ್ ಎಂದಿದ್ದಾರೆ. ಸಿನಿಮಾ ಬಗ್ಗೆ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ಕೆಲವು ಆಯ್ದ ಅಭಿಪ್ರಾಯಗಳು ಇಲ್ಲಿವೆ.

”ಮಿಷನ್ ಇಂಪಾಸಿಬಲ್ ಎಂದಿಗೂ ನಿರಾಸೆಗೊಳಿಸುವುದಿಲ್ಲ, ಈಥನ್ ಹಂಟ್ (ಟಾಮ್ ಕ್ರೂಸ್​ರ ಪಾತ್ರದ ಹೆಸರು) ಯಾವಾಗ್ಯಾವಾಗ ಮಿಷನ್ ಇಂಪಾಸಿಬಲ್ ಥೀಮ್ ಸಂಗೀತ ಬರುತ್ತದೆಯೋ ಆಗೆಲ್ಲ ರೋಮಾಂಚನವಾಗುತ್ತದೆ. ಹೌದು, ಮತ್ತೊಮ್ಮೆ ಈಥನ್ ಹಂಟ್ ವಿಶ್ವವನ್ನು ಕೆಟ್ಟವರಿಂದ ರಕ್ಷಿಸಿದ್ದಾನೆ. ಅದ್ಭುತವಾದ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ಹಾಲ್ವಿ ಅಟ್ವೆಲ್ (ನಾಯಕಿ) ನನ್ನ ಹೊಸ ಫೇವರೇಟ್” ಎಂದಿದ್ದಾರೆ ಟ್ವಿಟ್ಟರ್ ಬಳಕೆದಾರ ಬಾಲಾಜಿ ಶಿವಕುಮಾರ್.

”ಅರ್ಧ ಸಿನಿಮಾ ನೋಡಿದಾಗಲೆ ಮಿಷನ್ ಇಂಪಾಸಿಬಲ್ 7 ಈ ವರ್ಷದ ಅತ್ಯುತ್ತಮ ಸಿನಿಮಾ ಎನ್ನಿಸಿತ್ತು. ಪೂರ್ತಿ ಸಿನಿಮಾದ ಬಳಿಕ ಅದ್ಭುತ ಎನಿಸಿತು. ಈತನ್ ಹಂಟ್ ಪಾತ್ರದಲ್ಲಿ ಟಾಮ್ ಕ್ರೂಸ್ ಸಾಹಸಗಳು ಉಸಿರು ಬಿಗಿಹಿಡಿದು ನೋಡುವಂತೆ ಮಾಡುತ್ತವೆ. ಪಾರ್ಟ್​ 2 ಗೆ ಈಗಿನಿಂದಲೇ ಕಾಯುತ್ತಿದ್ದೇನೆ, ಪಾರ್ಟ್ 1 ಗಿಂತಲೂ ಅದ್ಭುತ ಸಾಹಸಗಳು ಆ ಸಿನಿಮಾದಲ್ಲಿ ಇರಲಿವೆ ಎಂಬ ನಿರೀಕ್ಷೆ ಇದೆ” ಎಂದಿದ್ದಾರೆ ದಿ ಹೆಸರಿನ ಟ್ವಿಟ್ಟರ್ ಬಳಕೆದಾರರೊಬ್ಬರು.

ಇದನ್ನೂ ಓದಿ:Tom Cruise: ರಿಲೀಸ್​ಗೂ ಮುನ್ನವೇ ಲೀಕ್ ಆಯ್ತು ಟಾಮ್​ ಕ್ರೂಸ್ ಹೊಸ ಚಿತ್ರದ ಟ್ರೇಲರ್​; ಸೂಪರ್ ಸ್ಟಾರ್​ಗಳ ಸಿನಿಮಾಕ್ಕೇ ಹೀಗಾದರೆ ಸಾಮಾನ್ಯರ ಕತೆಯೇನು?

ಟಾಮ್ ಕ್ರೂಸ್ ಮತ್ತು ನಿರ್ದೇಶಕ ಕ್ರಿಸ್ಟೊಫರ್ ಮೆಕ್ವೀರ್ ಯಾವುದನ್ನೂ ಮಿಸ್ ಮಾಡಿಲ್ಲ. ಸಿನಿಮಾದಲ್ಲಿನ ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ, ಎಲ್ಲ ಪಾತ್ರಗಳೂ ಮಿಂಚುತ್ತವೆ. ಆದರೆ ನಾಯಕಿ ಅಟ್ವೆಲ್ ಅಂತೂ ಬೆರಗು ಗೊಳಿಸುತ್ತಾಳೆ. ಸಿನಿಮಾದ ಆಕ್ಷನ್ ಅಂತೂ ಉಸಿರುಗಟ್ಟಿಸುವಂತಿದೆ. ಸಂಕಿರ್ಣವಾದ ಆದರೆ ಅದ್ಭುತವಾದ ಸೆಟ್​ಗಳನ್ನು ನಿರ್ಮಿಸಲಾಗಿದೆ, ಆಯ್ದುಕೊಂಡಿರುವ ಲೊಕೇಶನ್​ಗಳು ಕಣ್ಣಿಗೆ ಮುದ ನೀಡುತ್ತವೆ ರೋಮಾಂಚನ ಉಂಟಾಗುವಂತೆ ಮಾಡುತ್ತವೆ. ಹೃದಯ ಬಡಿತ ಜೋರಾಗುವಂತೆ ಮಾಡುವ ಸಿನಿಮಾ ಇದು. ತಪ್ಪದೆ ದೊಡ್ಡ ಪರದೆಯಲ್ಲಿಯೇ ಸಿನಿಮಾ ನೋಡಿ” ಎಂದಿದ್ದಾರೆ ಆಂಡಿ ಎಂಬ ಬಳಕೆದಾರ.

”ಮಿಷನ್ ಇಂಪಾಸಿಬಲ್’ ಸಿನಿಮಾ ಸರಣಿಯ ಈವರೆಗಿನ ಅತ್ಯುತ್ತಮ ಸಿನಿಮಾ ಇದು. ಸಿನಿಮಾದ ಆಕ್ಷನ್ ದೃಶ್ಯಗಳಂತೂ ಅತ್ಯದ್ಭುತ ಅದರಲ್ಲಿಯೂ ರೈಲಿನ ಆಕ್ಷನ್ ದೃಶ್ಯ ಉಸಿರುಗಟ್ಟುವಂತೆ ಮಾಡುತ್ತದೆ. ಸಿನಿಮಾದ ನಾಯಕಿ ಶೋ ಟಾಪರ್. ಎರಡೇ ಅರ್ಧದಲ್ಲಿ ಟಾಮ್ ಕ್ರೂಸ್ ಓಡುವ ದೃಶ್ಯ ಸೂಪರ್ ಆಗಿದೆ. ಪಾರ್ಟ್​ 2ಗೆ ಸರಿಯಾದ ಲೀಡ್ ಕೊಟ್ಟು ಪಾರ್ಟ್ 1 ಅನ್ನು ಮುಗಿಸಿದ್ದಾರೆ. ಮುಂದಿನ ಸಿನಿಮಾಕ್ಕಾಗಿ ಕಾಯುತ್ತದ್ದೇನೆ” ಎಂದು ಬರೆದುಕೊಂಡಿದ್ದಾರೆ ಈತನ್ಸ್ ಕಲ್ಟ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:01 pm, Wed, 12 July 23