ಮನೆಯಲ್ಲಿ ಒಂಟಿಯಾಗಿದ್ದ ಖ್ಯಾತ ಮಾಡೆಲ್​ಗೆ ಭೂತದ ದರ್ಶನ? ಫೋಟೋ ಹಂಚಿಕೊಂಡು ಆತಂಕ ಹೊರಹಾಕಿದ ನಟಿ

|

Updated on: Jul 11, 2023 | 8:22 AM

ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಸಮಯ ಸಿಕ್ಕಾಗ ಮಿರರ್ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಈ ಮಾಡೆಲ್ ಕೂಡ ಹಾಗೆಯೇ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ವೇಳೆ ಅವರಿಗೆ ಶಾಕ್ ಆಗುವಂಥ ಘಟನೆ ನಡೆದಿದೆ.

ಮನೆಯಲ್ಲಿ ಒಂಟಿಯಾಗಿದ್ದ ಖ್ಯಾತ ಮಾಡೆಲ್​ಗೆ ಭೂತದ ದರ್ಶನ? ಫೋಟೋ ಹಂಚಿಕೊಂಡು ಆತಂಕ ಹೊರಹಾಕಿದ ನಟಿ
ಕಿಮ್ ಕರ್ದಾಶಿಯಾನ್
Follow us on

ಫ್ಯಾಷನ್​ ಜಗತ್ತಿನಲ್ಲಿ ಕಿಮ್​ ಕರ್ದಾಶಿಯಾನ್ (Kim Kardashian)​ ಅವರಿಗೆ ಸಾಕಷ್ಟು ದೊಡ್ಡ ಹೆಸರು ಇದೆ. ಅವರು ಮಾಡೆಲ್​ ಆಗಿ, ನಟಿಯಾಗಿ, ಉದ್ಯಮಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ (Instagram) ಅವರನ್ನು ಬರೋಬ್ಬರಿ 36 ಕೋಟಿ ಮಂದಿ ಹಿಂಬಾಲಿಸುತ್ತಿದ್ದಾರೆ. ಇದು ಕಿಮ್​ ಜನಪ್ರಿಯತೆಗೆ ಹಿಡಿದ ಕೈಗನ್ನಡಿ. ಅವರು ಹಂಚಿಕೊಳ್ಳೊವ ಹಾಟ್ ಫೋಟೋಗಾಗಿ ಫ್ಯಾನ್ಸ್ ಕಾಯುತ್ತಾರೆ. ಈ ಬಾರಿಯೂ ಅವರು ಒಂದು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಹಾಟ್ ಆಗಿರಲಿಲ್ಲ, ಬದಲಿಗೆ ಭಯ ಹುಟ್ಟಿಸುವಂತಿದೆ. ಅಷ್ಟಕ್ಕೂ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಏನಿದೆ? ಆ ಬಗ್ಗೆ ಇಲ್ಲಿದೆ ವಿವರ.

ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಸಮಯ ಸಿಕ್ಕಾಗ ಮಿರರ್ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಕಿಮ್ ಕರ್ದಾಶಿಯಾನ್ ಕೂಡ ಮಾಡಿದ್ದೂ ಅದನ್ನೇ. ಕನ್ನಡಿ ಎದುರು ನಿಂತು ತಮ್ಮ ಮೊಬೈಲ್​ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ನೋಡೋಕೆ ಹೋಗಿಲ್ಲ. ಒಂದು ವಾರದ ಬಳಿಕ ಅವರು ಆ ಫೋಟೋಗಳ ಮೇಲೆ ಕಣ್ಣಾಡಿಸಿದ್ದಾರೆ. ಆಗ ಅವರಿಗೆ ನಿಜಕ್ಕೂ ಶಾಕ್​ ಆಗಿತ್ತು. ಏಕೆಂದರೆ ಹಿಂಭಾಗದಲ್ಲಿ ಯಾರೋ ಇದ್ದಂತೆ ಕಂಡು ಬಂದಿದೆ.

ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಕಿಮ್ ಕರ್ದಾಶಿಯಾನ್ ಮನೆಯಲ್ಲಿ ಒಬ್ಬರೇ ಇದ್ದರು. ಆದಾಗ್ಯೂ ಹಿಂಭಾಗದಲ್ಲಿ ಮಹಿಳೆ ಒಬ್ಬರು ನಿಂತಂತೆ ಕಂಡು ಬಂದಿದೆ. ‘ಕಳೆದ ವಾರ ನಾನು ಒಬ್ಬಳೇ ಇರುವಾಗ ಈ ಫೋಟೋ ಕ್ಲಿಕ್ಕಿಸಿಕೊಂಡೆ. ಈಗ ನನ್ನ ಫೋನ್ ಜಾಲಾಡುವಾಗ ಆ ಫೋಟೋ ನೋಡಿದೆ. ಹಿಂದಿನ ಕಿಟಕಿಯಲ್ಲಿ ಯಾವುದೋ ಮಹಿಳೆಯನ್ನು ಗಮನಿಸಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಾನ್ಯೆ ವೆಸ್ಟ್​ಗೆ ವಿವಾಹ ವಿಚ್ಛೇದನ ನೀಡಲಿದ್ದಾರೆ ಅಮೆರಿಕದ ರಿಯಾಲಿಟಿ ಟಿವಿ ತಾರೆ ಕಿಮ್ ಕರ್ದಾಶಿಯನ್

ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಕೆಲವರು, ‘ದಯವಿಟ್ಟು ಕಾಳಜಿ ಇಂದ ಇರಿ. ಒಮ್ಮೆ ಚರ್ಚ್​​ಗೆ ಹೋಗಿ ಬನ್ನಿ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ನಿಮ್ಮದೇ ನೆರಳು ಕಿಟಕಿಯ ಮೇಲೆ ಬಿದ್ದಿದೆ. ದೆವ್ವ ಅಂತೂ ಬರಲು ಸಾಧ್ಯವಿಲ್ಲ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. 28 ಲಕ್ಷಕ್ಕೂ ಅಧಿಕ ಮಂದಿ ಈ ಪೋಸ್ಟ್​ನ ಲೈಕ್ ಮಾಡಿದ್ದಾರೆ. 34 ಸಾವಿರ ಕಮೆಂಟ್​ಗಳು ಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ